ಧೋನಿ, ರಾಹುಲ್ ವಿರುದ್ಧ ಸಿಡಿದ ಶ್ರೀಶಾಂತ್ ಹೇಳಿದ್ದೇನು…?

ಮುಂಬೈ, ಸೋಮವಾರ, 6 ನವೆಂಬರ್ 2017 (21:45 IST)

ಮುಂಬೈ: ಐಪಿಎಲ್ ಸ್ಪಾಟ್‌‌ ಫಿಕ್ಸಿಂಗ್‌‌ ಪ್ರಕರಣದಲ್ಲಿ ಭಾಗಿಯಾದ ಆರೋಪವಿರುವ ಶ್ರೀಶಾಂತ್‌‌‌‌ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ಸ್ ರಾಹುಲ್‌‌ ದ್ರಾವಿಡ್‌‌ ಹಾಗೂ ಎಂ.ಎಸ್‌‌.ಧೋನಿ ವಿರುದ್ಧ ಹರಿಹಾಯ್ದಿದ್ದಾರೆ.


ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ನನಗೆ ಅಗತ್ಯವಿದ್ದಾಗ ಅವರಿಂದ ನೆರವು ಸಿಗಲಿಲ್ಲ. ರಾಜಸ್ಥಾನ ರಾಯಲ್ಸ್‌ ತಂಡದ ಮೆಂಟರ್‌ ಆಗಿದ್ದ ರಾಹುಲ್‌ ದ್ರಾವಿಡ್‌ ಗೆ ನನ್ನ ಪರ ನಿಲ್ಲುವಂತೆ ಮನವಿ ಮಾಡಿಕೊಂಡರೂ ಅವರು ಸಹಾಯ ಮಾಡಲಿಲ್ಲ. ಟೀಂ ಇಂಡಿಯಾ ಕ್ಯಾಪ್ಟನ್‌ ಆಗಿದ್ದ ಧೋನಿಯವರಿಗೆ ಭಾವನಾತ್ಮಕ ಸಂದೇಶ ರವಾನೆ ಮಾಡಿದ್ರೂ ಯಾವುದೇ ಉತ್ತರ ಸಿಗಲಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ.

ಫಿಕ್ಸಿಂಗ್‌‌ ವೇಳೆ ಟೀಂ ಇಂಡಿಯಾದ ಟಾಪ್‌ 10ರಲ್ಲಿದ್ದ ಆರು ಕ್ರಿಕೆಟರ್ಸ್‌‌ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಆದರೆ ಭಾರತೀಯ ಕ್ರಿಕೆಟ್ ಮೇಲೆ ಪರಿಣಾಮ ಬೀರುವ ಕಾರಣ ಆಟಗಾರರ ಹೆಸರನ್ನು ಬಹಿರಂಗಗೊಳಿಸದಂತೆ ಬಿಸಿಸಿಐ ಮನವಿ ಮಾಡಿಕೊಂಡಿತ್ತು. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೇ. ನನ್ನ ವಿರುದ್ಧ ಕ್ರಮಕ್ಕೆ ಮುಂದಾದ ಬಿಸಿಸಿಐ, ಅವರ ಬೆನ್ನಿಗೆ ನಿಂತಿದ್ಯಾಕೆ ಎಂದು ಪ್ರಶ್ನಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತದ ನಾರಿಯರಿಗೆ ಒಲಿಯಿತು ಪ್ರತಿಷ್ಠಿತ ಪ್ರಶಸ್ತಿ

ನವದೆಹಲಿ: ಭಾರತ ಮಹಿಳಾ ಹಾಕಿ ತಂಡ ಮಹಿಳಾ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಚೀನಾ ತಂಡವನ್ನು 5-4 ...

news

ಏಷ್ಯಾ ಕಪ್ ಹಾಕಿ ಚಾಂಪಿಯನ್‌ಶಿಪ್ ಗೆದ್ದ ಭಾರತದ ಮಹಿಳಾ ತಂಡ

ನವದೆಹಲಿ: ಏಷ್ಯಾ ಕಪ್ ಹಾಕಿ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಎದುರಾಳಿ ಚೀನಾ ...

news

ಕೊಹ್ಲಿ ಇಷ್ಟೊಂದು ಬದಲಾಗಿದ್ದು ಯಾಕೆ?

ಮುಂಬೈ: ವಿರಾಟ್ ಕೊಹ್ಲಿ ಮುಖ ಯಾರಿಗೆ ತಾನೇ ಗೊತ್ತಿಲ್ಲ. ಆದರೆ ಈ ಫೋಟೋದಲ್ಲಿರುವ ವ್ಯಕ್ತಿ ಕೊಹ್ಲಿಯೇ ...

news

ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ

ರಾಜ್ ಕೋಟ್: ಟೀಂ ಇಂಡಿಯಾ ಕ್ರಿಕಟ್ ತಂಡದಲ್ಲಿ ಮೊದಲ ಬಾರಿಗೆ ಸ್ಥಾನ ಪಡೆಯುವುದೆಂದರೆ ಯಾವುದೇ ...

Widgets Magazine