ಮೊದಲಬಾರಿ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡ ಮುಗುರುಜಾ

ಲಂಡನ್, ಭಾನುವಾರ, 16 ಜುಲೈ 2017 (08:29 IST)

ಲಂಡನ್:ಸ್ಪೇನ್‌ನ ಗಾರ್ಬಿನ್‌ ಮುಗುರುಜಾ ಮೊದಲ ಬಾರಿ ವಿಂಬಲ್ಡನ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಮೆರಿಕದ ವೀನಸ್ ವಿಲಿಯಮ್ಸ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಮುಗುರುಜಾ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು.
 
ಇಂಗ್ಲೆಂಡ್ ನ ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಕೂಟದುದ್ದಕ್ಕೂ ಆಕರ್ಷಕ ಆಟವಾಡಿದ ಮುಗುರುಜಾ 7-5, 6-0 ನೇರ ಸೆಟ್‌ಗಳಿಂದ ಜಯಭೇರಿ ಬಾರಿಸಿ ವಿಂಬಲ್ಡನ್‌ ಪ್ರಶಸ್ತಿ ತಮ್ಮದಾಗಿಸಿ ಕೊಂಡರು. 23ರ ಹರೆಯದ ಮುಗುರುಜಾ ಎರಡು ವರ್ಷಗಳ ಹಿಂದೆ ಚೊಚ್ಚಲ ಬಾರಿ ವಿಂಬಲ್ಡನ್‌ ಫೈನಲಿಗೇರಿದ ವೇಳೆ ಸೆರೆನಾಗೆ ಶರಣಾಗಿದ್ದರು.
 
ವಿಂಬಲ್ಡನ್‌ ಪ್ರಶಸ್ತಿ ಗೆದ್ದ ಸ್ಪೇನ್‌ನ ಎರಡನೇ ಆಟಗಾರ್ತಿ ಎಂಬ ಗೌರವಕ್ಕೆ ಮುಗುರುಜಾ ಪಾತ್ರರಾಗಿದ್ದಾರೆ. 23 ವರ್ಷದ ಮುಗುರುಜಾ ಮತ್ತು 37 ವರ್ಷದ ವೀನಸ್ ನಡುವಿನ ಪಂದ್ಯ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿತ್ತು. ಒಂದು ತಾಸು 17 ನಿಮಿಷ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಸಮಬಲದ ಹೋರಾಟ ಕಂಡು ಬಂದರೂ ಎರಡನೇ ಸೆಟ್‌ನಲ್ಲಿ ಮುಗುರುಜಾ ಏಕಪಕ್ಷೀಯ ಜಯ ಸಾಧಿಸಿದರು. ಈ ಮೂಲಕ 2015ರ ಫೈನಲ್‌ನಲ್ಲಿ ವೀನಸ್‌ ಅವರ ಸಹೋದರಿ ಸೆರೆನಾ ವಿಲಿಯಮ್ಸ್ ಎದುರು ಅನುಭವಿಸಿದ ಸೋಲಿನ ನಿರಾಸೆಯನ್ನು ಮರೆತರು.
 ಇದರಲ್ಲಿ ಇನ್ನಷ್ಟು ಓದಿ :  
ವಿಂಬಲ್ಡನ್‌ ಪ್ರಶಸ್ತಿ ಸ್ಪೇನ್‌ನ ಗಾರ್ಬಿನ್‌ ಮುಗುರುಜಾ ವೀನಸ್ ವಿಲಿಯಮ್ಸ್ Garbine Muguruza New Wimbledon Queen

ಕ್ರಿಕೆಟ್‌

news

ರವಿಶಾಸ್ತ್ರಿ ಸಂಬಳ ನಿಗದಿಗೇ ಒಂದು ಸಮಿತಿ!

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾದವರು ಕೋಟಿ ಕೋಟಿ ವೇತನ ಜೇಬಿಗಿಳಿಸುತ್ತಾರೆ ಗೊತ್ತು. ಆದರೆ ...

news

ಭಾರತಕ್ಕ ಗೆಲುವಿನ ‘ಮಿಠಾಯಿ’ ಕೊಡಿಸಿದ ರಾಜ್

ಲಂಡನ್: ಭಾರತದ ಮಹಿಳಾ ಕ್ರಿಕೆಟ್ ತಂಡ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಹೆಚ್ಚು ಪ್ರೋತ್ಸಾಹವಿಲ್ಲ, ...

news

ಧೋನಿ ಸಿಎಸ್ ಕೆ ತಂಡವನ್ನು ಐಪಿಎಲ್ ಗೆ ಸ್ವಾಗತಿಸಿದ ಸ್ಟೈಲೇ ಬೇರೆ!

ಚೆನ್ನೈ: ಮುಂದಿನ ಐಪಿಎಲ್ ಆವೃತ್ತಿಗೆ ಕಣಕ್ಕೆ ಮರಳುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಲೇ ಭಾರೀ ...

news

ಭಾರತ ತ್ರಿಮೂರ್ತಿ ಕ್ರಿಕೆಟಿಗರ ಟೀಕಿಸಿದ ಸಂದೀಪ್ ಪಾಟೀಲ್

ಮುಂಬೈ: ಟೀಂ ಇಂಡಿಯಾಕ್ಕೆ ಕೋಚ್ ಆಯ್ಕೆ ಮಾಡುವ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸೌರವ್ ಗಂಗೂಲಿ, ಸಚಿನ್ ...

Widgets Magazine