8ನೇ ಬಾರಿಗೆ ವಿಂಬಲ್ಡನ್ ಟ್ರೋಫಿ ತಮ್ಮದಾಗಿಸಿಕೊಂಡ ರೋಜರ್ ಫೆಡರರ್

ಲಂಡನ್, ಸೋಮವಾರ, 17 ಜುಲೈ 2017 (06:30 IST)

ಲಂಡನ್:ಸ್ವಿಟ್ಜರ್‌ಲ್ಯಾಂಡ್‌ನ ಖ್ಯಾತ ಟೆನ್ನಿಸ್ ಆಟಗಾರ ರೋಜರ್ ಫೆಡರರ್‌‌ ಪ್ರತಿಷ್ಠಿತ ವಿಂಬಲ್ಡನ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ 8ನೇ ಬಾರಿಗೆ ಈ ಪ್ರಶಸ್ತಿ ಮುದಿಗೇರಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
 
ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರೋಜರ್ ಫೆಡರರ್ ಕ್ರೊವೇಶಿಯಾದ ಮರಿನ್ ಸಿಲಿಕ್ ರನ್ನು 6-3, 6-1, 6-4, ನೇರ ಸೆಟ್ ಗಳ ಮೂಲಕ ಭರ್ಜರಿ ಜಯ ಗಳಿಸಿದ್ದಾರೆ.
 
ಈ ಜಯದೊಂದಿಗೆ ಒಟ್ಟು 19 ಗ್ರ್ಯಾಂಡ್ ಸ್ಲ್ಯಾಮ್ಸ್ ಗೆದ್ದ ಕೀರ್ತಿಗೆ ರೋಜರ್ ಪಾತ್ರರಾಗಿದ್ದಾರೆ. ಇದು ಫೆಡರರ್ ಪಾಲಿಗೆ 11ನೇ ವಿಂಬಲ್ಡನ್ ಫೈನಲ್ ಪಂದ್ಯವಾಗಿತ್ತು. ಇದರೊಂದಿಗೆ 8ನೇ ಬಾರಿಗೆ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂದಿರುವ ಫೆಡರರ್, ಸೆಂಟರ್ ಕೋರ್ಟ್ ನಲ್ಲಿ ಮಾಜಿ ದಂತಕಥೆಗಳಾದ ಪೀಟ್ ಸಾಂಪ್ರಾಸ್ ಮತ್ತು ವಿಲಿಯಮ್ ರೆನ್ಶಾ ದಾಖಲೆಯನ್ನು ಮುರಿದಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮೊದಲಬಾರಿ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡ ಮುಗುರುಜಾ

ಸ್ಪೇನ್‌ನ ಗಾರ್ಬಿನ್‌ ಮುಗುರುಜಾ ಮೊದಲ ಬಾರಿ ವಿಂಬಲ್ಡನ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಮೆರಿಕದ ...

news

ರವಿಶಾಸ್ತ್ರಿ ಸಂಬಳ ನಿಗದಿಗೇ ಒಂದು ಸಮಿತಿ!

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾದವರು ಕೋಟಿ ಕೋಟಿ ವೇತನ ಜೇಬಿಗಿಳಿಸುತ್ತಾರೆ ಗೊತ್ತು. ಆದರೆ ...

news

ಭಾರತಕ್ಕ ಗೆಲುವಿನ ‘ಮಿಠಾಯಿ’ ಕೊಡಿಸಿದ ರಾಜ್

ಲಂಡನ್: ಭಾರತದ ಮಹಿಳಾ ಕ್ರಿಕೆಟ್ ತಂಡ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಹೆಚ್ಚು ಪ್ರೋತ್ಸಾಹವಿಲ್ಲ, ...

news

ಧೋನಿ ಸಿಎಸ್ ಕೆ ತಂಡವನ್ನು ಐಪಿಎಲ್ ಗೆ ಸ್ವಾಗತಿಸಿದ ಸ್ಟೈಲೇ ಬೇರೆ!

ಚೆನ್ನೈ: ಮುಂದಿನ ಐಪಿಎಲ್ ಆವೃತ್ತಿಗೆ ಕಣಕ್ಕೆ ಮರಳುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಲೇ ಭಾರೀ ...

Widgets Magazine