ಪ್ರಧಾನಿ ನರೇಂದ್ರ ಮೋದಿ ಒಲಿಂಪಿಕ್ಸ್ ಟಾಸ್ಕ್ ಫೋರ್ಸ್ ನಲ್ಲಿ ಅಭಿನವ್ ಬಿಂದ್ರಾ, ಗೋಪಿಚಂದ್

NewDelhi, ಮಂಗಳವಾರ, 31 ಜನವರಿ 2017 (10:47 IST)

Widgets Magazine

ನವದೆಹಲಿ: ಮುಂದಿನ ಒಲಿಂಪಿಕ್ಸ್ ಗೆ ಭಾರತದ ಪ್ರತೀ ಜಿಲ್ಲೆಗಳಿಂದಲೂ ಒಬ್ಬರಂತೆ ಪ್ರತಿಭಾವಂತ ಕ್ರೀಡಾಳುಗಳನ್ನು ಹೊರ ತರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಕನಸು. ಈ ಕನಸಿನ ಯೋಜನೆಗೆ ಭಾರತದ ಖ್ಯಾತ ಶೂಟರ್ ಅಭಿನವ್ ಬಿಂದ್ರಾ,  ಬ್ಯಾಡ್ಮಿಂಟನ್ ತಾರೆ ಪುಲ್ಲೇಲ ಗೋಪಿಚಂದ್ ಕೈ ಜೋಡಿಸಲಿದ್ದಾರೆ.


 
ಮುಂದಿನ ಒಲಿಂಪಿಕ್ಸ್ ಗೆ ಯೋಜನೆ ಸಿದ್ಧಪಡಿಸಲು ಕ್ರೀಡಾ ಸಚಿವಾಲಯ ರೂಪಿಸಿದ ವಿಶೇಷ ಟಾಸ್ಕ್ ಫೋರ್ಸ್ ಗೆ ಈ ಇಬ್ಬರು ಖ್ಯಾತ ನಾಮರು ಸೇರ್ಪಡೆಯಾಗಿದ್ದಾರೆ.  “ಈ ಸಮಿತಿಯ ಕಾಲಾವಧಿ ಮೂರು ತಿಂಗಳು. ಅಷ್ಟರೊಳಗೆ ಇದು ತನ್ನ ವರದಿ ನೀಡಲಿದೆ” ಎಂದು ಕ್ರೀಡಾ ಸಚಿವ ವಿಜಯ್ ಗೊಯಲ್ ತಿಳಿಸಿದ್ದಾರೆ.
 
ಮುಂದಿನ ಮೂರು ಒಲಿಂಪಿಕ್ಸ್ ಗಳಿಗೆ ಪದಕ ಗೆಲ್ಲುವ ಸಾಮರ್ಥ್ಯವಿರುವ ಆಟಗಾರರನ್ನು ಗುರುತಿಸುವುದು, ಪ್ರೋತ್ಸಾಹಿಸುವುದು ಹಾಗೂ ಅದಕ್ಕೆ ಯಾವ ರೀತಿಯ ಪರಿಣಾಮಕಾರಿ ಯೋಜನೆ ರೂಪಿಸಬೇಕೆಂದು ರೂಪು ರೇಷೆಗಳನ್ನು ಒದಗಿಸುವುದು ಈ ಸಮಿತಿಯ ಕರ್ತವ್ಯವಾಗಿರುತ್ತದೆ. ವರದಿ ಸಿದ್ಧಗೊಂಡ ನಂತರ ಇದನ್ನು ಪ್ರಧಾನಿ ಕಚೇರಿಗೆ ಹಸ್ತಾಂತರಿಸಲಾಗುವುದು ಎಂದು ಕ್ರೀಡಾ ಸಚಿವರು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬಿಸಿಸಿಐ ವಿದ್ಯಮಾನಗಳನ್ನು ನೋಡಿ ಸಾಕಾಗೋಯ್ತಂತೆ ಸೌರವ್ ಗಂಗೂಲಿಗೆ

ಭಾರತೀಯ ಕ್ರಿಕೆಟ್ ಮಂಡಳಿಗೆ ಹೊಸದಾಗಿ ನಾಲ್ವರು ಆಡಳಿತಾಧಿಕಾರಿಗಳನ್ನು ಸುಪ್ರೀಂ ಕೋರ್ಟ್ ನೇಮಿಸಿದ ...

news

ಮೊಯಿನ್ ಆಲಿ ಬೌಲಿಂಗ್ ನೋಡಿ ಕಲಿ ಎಂದ ಅಭಿಮಾನಿಗಳಿಗೆ ರವಿಚಂದ್ರನ್ ಅಶ್ವಿನ್ ಕೊಟ್ಟ ಉತ್ತರವಿದು!

ಮೈದಾನದಲ್ಲೇ ಎದುರಾಳಿಗಳು ಮೆರೆಯುವುದನ್ನು ಸುಮ್ಮನೇ ನೋಡುತ್ತಾ ಕೂರುವ ಜಾಯಮಾನ ರವಿಚಂದ್ರನ್ ಅಶ್ವಿನ್ ...

news

ಆಸ್ಟ್ರೇಲಿಯಾ ವಿರುದ್ಧ ಮೈ ಮರೆತು ಆಡಬೇಡಿ ಎಂದು ಟೀಂ ಇಂಡಿಯಾಕ್ಕೆ ಕಿವಿ ಮಾತು ಹೇಳಿದ ಸಚಿನ್ ತೆಂಡುಲ್ಕರ್

ಯಶಸ್ಸು ಸಿಕ್ಕಿತೆಂದು ಮರೆಯಬೇಡಿ. ಆಸ್ಟ್ರೇಲಿಯಾ ತಂಡವನ್ನು ಹಗುರವಾಗಿ ಪರಿಗಣಿಸಬೇಡಿ. ನೀವು ಎದುರಿಸುವ ...

news

ನಮ್ಮ ಬೆಂಗಳೂರಿಗೆ ಬಂದಿಳಿದ ಟೀಂ ಇಂಡಿಯಾ ಹುಡುಗರು

ನಾಳೆ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ ಹುಡುಗರು ಬೆಂಗಳೂರಿಗೆ ...

Widgets Magazine Widgets Magazine