ಏಷ್ಯನ್ ಗೇಮ್ಸ್: ಪಿವಿ ಸಿಂಧು ಮತ್ತೆ ಬೆಳ್ಳಿ ಹುಡುಗಿ!

ಜಕಾರ್ತ, ಮಂಗಳವಾರ, 28 ಆಗಸ್ಟ್ 2018 (13:03 IST)


ಜಕಾರ್ತ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ಸ್ ನಲ್ಲಿ ಭಾರತದ ಪಿವಿ ಸಿಂಧು ತೈಪೇಯ ಝೂ ಯಿಂಗ್ ವಿರುದ್ಧ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
 
ವಿಶ್ವ ನಂ.1 ಆಟಗಾರ್ತಿ ಯಿಂಗ್ ವಿರುದ್ಧ ನಂ.3 ಆಟಗಾರ್ತಿ ಸಿಂಧು 13-21, 16-21 ಅಂತರದಿಂದ ಸೋತಿದ್ದಾರೆ. ಮೊದಲ ಸೆಟ್ ನಲ್ಲೇ ಸಿಂಧು ಸೋಲನುಭವಿಸಿ ಯಿಂಗ್ ಹಾದಿಯನ್ನು ಸುಗಮಗೊಳಿಸಿದ್ದರು.
 
ಇದರೊಂದಿಗೆ ಮತ್ತೆ ಯಿಂಗ್ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗೆಲ್ಲಲು ಸಿಂಧು ಎಡವಿದರು. ಸೈನಾ ಸೆಮಿಫೈನಲ್ ನಲ್ಲಿ ಮಾಡಿದಂತೆಯೇ ಸಿಂಧು ಕೂಡಾ ಫೈನಲ್ ನಲ್ಲಿ ಯಿಂಗ್ ವಿರುದ್ಧ ಕಠಿಣ ಪೈಪೋಟಿ ನೀಡಿದರು. ಆದರೆ ಅದು ಫಲಕೊಡಲಿಲ್ಲ. ಅಂತಿಮವಾಗಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಹಾಗಿದ್ದರೂ ಭಾರತದ ಪಾಲಿಗೆ ಇದು ಐತಿಹಾಸಿಕ ಸಾಧನೆಯೇ ಸರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿಗೆ ರೋಹಿತ್ ಶರ್ಮಾ ಎಂದರೆ ಭಯವಂತೆ!

ಮುಂಬೈ: ಇಂಗ್ಲೆಂಡ್ ವಿರುದ್ಧ ಮುಂದಿನ ಟೆಸ್ಟ್ ಪಂದ್ಯಗಳಿಗೂ ಏಕದಿನ ಆರಂಭಿಕ ರೋಹಿತ್ ಶರ್ಮಾಗೆ ಸ್ಥಾನ ...

news

ಸೈನಾ ನೆಹ್ವಾಲ್ ಸೋಲಿಸಿದ ಆಟಗಾರ್ತಿಯನ್ನು ಮಣಿಸಲು ವಿಶೇಷ ಪ್ಲ್ಯಾನ್ ಮಾಡಿಕೊಂಡಿರುವ ಪಿವಿ ಸಿಂಧು

ಜಕಾರ್ತ: ಭಾರತದ ಬ್ಯಾಡ್ಮಿಂಟನ್ ಪಾಲಿಗೆ ಇಂದು ಮಹತ್ವದ ದಿನ. ಏಷ್ಯನ್ ಗೇಮ್ಸ್ ನ ಬ್ಯಾಡ್ಮಿಂಟನ್ ವಿಭಾಗದ ...

news

ಇತಿಹಾಸ ಬರೆದ ಸೈನಾ ನೆಹ್ವಾಲ್ ಗೆ ಪ್ರಧಾನಿ ಅಭಿನಂದನೆ: ಸಿಂಧು ಕಡೆಯಿಂದ ಬರಲಿದೆ ಇನ್ನೊಂದು ಗುಡ್ ನ್ಯೂಸ್!

ನವದೆಹಲಿ: ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ...

news

ಕ್ರಿಕೆಟ್ ನ ‘ಡಾನ್’ ಬ್ರಾಡ್ಮನ್ ಗೆ ಗೂಗಲ್ ಗೌರವ

ನವದೆಹಲಿ: ಕ್ರಿಕೆಟ್ ನ ಆಲ್ ಟೈಮ್ ದಿಗ್ಗಜ ಡಾನ್ ಬ್ರಾಡ್ಮನ್ ಜನ್ಮದಿನಕ್ಕೆ ಗೂಗಲ್ ವಿಶಿಷ್ಟ ಗೌರವ ನೀಡಿದೆ. ...

Widgets Magazine