ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ ಫುಟ್ ಬಾಲ್ ಮಂಡಳಿ!

NewDelhi, ಶನಿವಾರ, 1 ಜುಲೈ 2017 (09:52 IST)

ನವದೆಹಲಿ: ಸಾಮಾನ್ಯವಾಗಿ ಯಾವುದೇ ಕ್ರೀಡಾ ಮಂಡಳಿಗಳು ಸರ್ಕಾರದ ವಿರುದ್ಧ ಬಹಿರಂಗವಾಗಿ ಕೆಂಡಕಾರುವುದಿಲ್ಲ. ಆದರೆ ಅಖಿಲ ಭಾರತ ಫುಟ್ ಬಾಲ್ ಮಂಡಳಿ ಅದನ್ನು ಮಾಡಿದೆ.


 
ಪ್ರಧಾನಿ ಮೋದಿ ವಿರುದ್ಧವೇ ಟ್ವೀಟ್ ಮಾಡಿದೆ. ಅದೂ ಕ್ರೀಡೆಯ ಹೊರತಾದ ವಿಷಯವೊಂದಕ್ಕೆ. ದೇಶದಾದ್ಯಂತ ಭಾರೀ ಚರ್ಚಾ ವಿಷಯವಾಗಿರುವ ಗೋ ಹತ್ಯೆ ನಿಷೇಧದ ಬಗ್ಗೆ ಫುಟ್ ಬಾಲ್ ಸಂಸ್ಥೆಯ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
 
ಗೋ ಹತ್ಯೆಯ ಹೆಸರಿನಲ್ಲಿ ಕಾನೂನು ಕೈಗೆ ತೆಗೆದುಕೊಂಡು ಮಾನವರ ಹತ್ಯೆ ಮಾಡುವುದು ಖಂಡನೀಯ. ಮೋದಿಯವರು ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದಿದ್ದಾರೆ. ಅದೇ ರೀತಿ ಮೋದ ಮಾಡಿದವರೂ ದೇಶ ಬಿಟ್ಟು ತೆರಳದಂತೆ ನೋಡಿಕೊಳ್ಳಬೇಕು’ ಎಂದು ವಿಜಯ್ ಮಲ್ಯ ಪ್ರಕರಣದಲ್ಲಿ ಪರೋಕ್ಷವಾಗಿ ಕುಟುಕಲಾಗಿದೆ.
 
ಆದರೆ ಟ್ವೀಟ್ ವಿವಾದವಾಗುತ್ತಿದ್ದಂತೆ ಅದನ್ನು ಅಳಿಸಿ ಹಾಕಿದ ಸಂಸ್ಥೆ ತನ್ನ ಟ್ವಿಟರ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿ ಈ ಕೃತ್ಯವೆಸಗಿದ್ದಾರೆಂದು ಸ್ಪಷ್ಟನೆ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಈಗ ಮಾಡಲು ಕೆಲಸವಿಲ್ಲ!

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟಿಗರು ಇದೀಗ ಮಾಡಲು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಅದು ಹೇಗೆ ...

news

ಮುಂದಿನ ಎರಡು ವರ್ಷ ಕಿರಿಯರ ಕಿವಿ ಹಿಂಡಲು ದ್ರಾವಿಡ್ ಸಾರಥ್ಯ

ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮುಂದಿನ ಎರಡು ವರ್ಷಗಳಿಗೆ ಎ ತಂಡದ ಕೋಚ್ ಆಗಿ ...

news

ವಿರಾಟ್ ಕೊಹ್ಲಿ ಬಳಿಕ ಅನಿಲ್ ಕುಂಬ್ಳೆ ಬಗ್ಗೆ ಬಾಯ್ಬಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ!

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದಾಗ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವೆ ...

news

ವಿದೇಶೀ ಕೋಚ್ ಆದರೂ ಓಕೆ ಎಂದರಂತೆ ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ಕೋಚ್ ಆಯ್ಕೆ ಎನ್ನುವುದು ಬಿಸಿಸಿಐಗೆ ದೊಡ್ಡ ತಲೆನೋವಾಗಿರುವಾಗ ವಿದೇಶೀ ಕೋಚ್ ಆದರೂ ...

Widgets Magazine