ಏಷ್ಯನ್ ಗೇಮ್ಸ್: ಭಾರತಕ್ಕೆ ಕಬ್ಬಡ್ಡಿಯಲ್ಲಿ ಸ್ವರ್ಣ ಸಂಭ್ರಮ

ಇಂಚಾನ್‌, ಶುಕ್ರವಾರ, 3 ಅಕ್ಟೋಬರ್ 2014 (10:35 IST)

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಮತ್ತು ಪುರುಷ ಕಬ್ಬಡ್ಡಿ ತಂಡಗಳೆರಡಕ್ಕೂ ಚಿನ್ನದ ಪದಕ ದೊರಕಿದೆ.ಕರ್ನಾಟಕದ  ಮಮತಾ ಪೂಜಾರಿ ನೇತೃತ್ವದ ಮಹಿಳಾ ತಂಡ ಇರಾನ್ ತಂಡವನ್ನು 31-21  ಅಂತರದಿಂದ ಮಣಿಸಿ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿತು. ಪುರುಷರ ತಂಡ ಕೂಡ ಇರಾನ್ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿತು. 

ತೀವೃ ಹಣಾಹಣಿಯಿಂದ ಕೂಡಿದ್ದ ರೋಮಾಂಚನಕಾರಿ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಭಾರತೀಯ ಮಹಿಳಾ ತಂಡ  31-21  ಅಂತರದಲ್ಲಿ ಗೆದ್ದರೆ, ಪುರುಷರ ತಂಡ 27-25 ಅಂತರದಲ್ಲಿ ಗೆಲುವು ದಾಖಲಿಸಿತು. 
 
ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ನಡೆಯುತ್ತಿರುವ 17 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ತಂಡ ಗೆಲುವು ಸಾಧಿಸಿದ ತರುವಾಯ ಪುರುಷರ ಕಬ್ಬಡ್ಡಿ ತಂಡದಿಂದ ಕೂಡ ಚಿನ್ನವನ್ನು ನಿರೀಕ್ಷಿಸಲಾಗಿತ್ತು. ಆ ಭರವಸೆಯನ್ನು ಭಾರತೀಯ ಕಲಿಗಳು ಹುಸಿಗೊಳಿಸಲಿಲ್ಲ. 
 
ಪದಕ ಬೇಟೆಯಲ್ಲಿ ಭಾರತ 9ನೇ ಸ್ಥಾನದಲ್ಲಿದ್ದು, ಚೀನಾ ಪ್ರಥಮ ಸ್ಥಾನದಲ್ಲಿದೆ. ಈ ಪದಕದೊಂದಿಗೆ ಭಾರತ 11 ಚಿನ್ನದ ಪದಕಗಳನ್ನು ಗಳಿಸಿದಂತಾಗಿದೆ. ನಿನ್ನೆ ಕರ್ನಾಟಕದ ಪೂವಮ್ಮ 400 ಮೀಟರ್ ರೀಲೆಯಲ್ಲಿ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದರು. ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

16 ವರ್ಷಗಳ ಬಳಿಕ ಹಾಕಿಯಲ್ಲಿ ಸ್ವರ್ಣ ಪದಕ ಗೆದ್ದ ಭಾರತ ಮಹತ್ವದ ಸಾಧನೆ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡ 16 ವರ್ಷಗಳ ಬಳಿಕ ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿದೆ. ದಕ್ಷಿಣ ...

news

ಸರಿತಾ ದೇವಿಗೆ ಬಾಕ್ಸಿಂಗ್‌ನಿಂದ ನಿಷೇಧಿಸುವ ಸಾಧ್ಯತೆ

ನವದೆಹಲಿ: ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ಭಾರತದ ಬಾಕ್ಸರ್ ಸರಿತಾ ದೇವಿ ವಿರುದ್ಧ ಶಿಸ್ತು ಕ್ರಮ ...

news

ಬಾಕ್ಸಿಂಗ್ ಸೆಮಿಫೈನಲ್‌ನಲ್ಲಿ ವಿವಾದಾತ್ಮಕ ತೀರ್ಪು: ಸರಿತಾ ದೇವಿ ಕಣ್ಣೀರು

ಬುಧವಾರ ಏಷ್ಯನ್ ಕ್ರೀಡಾಕೂಟದಲ್ಲಿ ಇಬ್ಬರು ಮಹಿಳಾ ಬಾಕ್ಸರುಗಳು ವಿರುದ್ಧ ಭಾವನೆಗಳನ್ನು ಪ್ರದರ್ಶಿಸಿದ ...

news

ಏಷ್ಯನ್ ಗೇಮ್ಸ್ ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್‌ಗೆ ಚಿನ್ನದ ಪದಕ

ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಬಾಕ್ಸಿಂಗ್‌ನ 51 ಕೆಜಿ ವಿಭಾಗದಲ್ಲಿ ಮೇರಿ ಕೋಮ್ ಚಿನ್ನದ ಪದಕವನ್ನು ...