ಬಾಲ್ಯದ ಗೆಳತಿ ಅಂಟೋನೆಲ್ಲಾ ರೋಕುಝೋಳನ್ನು ವಿವಾಹವಾದ ಲಿಯೋನೆಲ್ ಮೆಸ್ಸಿ

ಅರ್ಜಿಂಟಿನಾ, ಶನಿವಾರ, 1 ಜುಲೈ 2017 (19:22 IST)

ವಿಶ್ವದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ತಮ್ಮ ಬಾಲ್ಯದ ಗೆಳತಿ, ಪ್ರಿಯತಮೆ ಅಂಟೋನೆಲ್ಲಾ ರೋಕುಝೋ ಅವರನ್ನು ವಿವಾಹವಾಗಿದ್ದಾರೆ. ಸಮಾರಂಭದಲ್ಲಿ ಕೆಲ ಖ್ಯಾತ ಫುಟ್ಬಾಲ್ ಆಟಗಾರರು ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ. 
 
ನಗರದಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಲಿಯೋನೆಲ್ ಮೆಸ್ಸಿ ಮತ್ತು ಅಂಟೋನೆಲ್ಲಾ ರೋಕುಝೋ ವಿವಾಹ ಸಮಾರಂಭಕ್ಕೆ ಬಾರ್ಸಿಲೋನಾ ತಂಡದ ನೆಮಾರ್, ಲೂಯಿುಸ್ ಸುವಾರೆಜ್ ಮತ್ತು ಗೆರಾರ್ಡ್ ಪಿಗ್ವೆ ಮತ್ತು ಕೊಲಂಬಿಯಾದ ಖ್ಯಾತ ಪಾಪ್ ಸ್ಟಾರ್ ಶಕೀರಾ ಸೇರಿದಂತೆ 250 ಅತಿಥಿಗಳು ಆಗಮಿಸಿ ವಧು ವರರಿಗೆ ಶುಭ ಕೋರಿದರು.  
 
ಅರ್ಜೆಂಟೈನಾದ ಕೃಷಿ ಕೇಂದ್ರ ಮತ್ತು ದೇಶದ ಮೂರನೆಯ ಅತಿದೊಡ್ಡ ನಗರ ಬ್ಯೂನಸ್‌ ಐರಿಸ್‌ನಿಂದ 300 ಕಿ.ಮೀ ದೂರದಲ್ಲಿರುವ ರೋಸಾರಿಯೋದಲ್ಲಿ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. 
 
ಸುಮಾರು 150 ಪತ್ರಕರ್ತರಿಗೆ ವಿವಾಹ ಸಮಾರಂಭ ವರದಿಗಾಗಿ ಅವಕಾಶ ನೀಡಲಾಯಿತು, ಆದರೆ, ನೇರವಾಗಿ ವೇದಿಕೆಯ ಮೇಲಿದ್ದ ವಧು ವರರ ಕಾರ್ಯಕ್ರಮದಿಂದ ದೂರವಿಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
 
ಸಾಕರ್ ತಾರೆಗಳ ಛಾಯಾಚಿತ್ರಗಳನ್ನು ಚಿತ್ರೀಕರಿಸಲು ಆಶಯದೊಂದಿಗೆ ಭಾರಿ ಕಾವಲಿರುವ ಸೈಟ್ ಬಳಿ ವಿವಾಹದ ಮೊದಲು ಕ್ಯೂರಿಯಸ್ ನೋಡುಗರು ಕೂಡಿಬಂದರು.
 
ಲಿಯೋನೆಲ್ ಮೆಸ್ಸಿ ವಿವಾಹ ಸಮಾರಂಭ ನಡೆಯುತ್ತಿದೆ ಎನ್ನುವ ಮಾಹಿತಿ ಪಡೆದ ಸ್ಥಳೀಯರು ಹೋಟೆಲ್‌ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು
 
ಮೆಸ್ಸಿ ವಿವಾಹಕ್ಕಾಗಿ ರೋಸಾರಿಯೋ ನಗರಕ್ಕೆ ಆಗಮಿಸಿರುವುದು ಸಂತೋಷ ತಂದಿದೆ ಎಂದು ಸ್ಥಳೀಯರಾದ ಜ್ಯೂಲಿಯೋ ಸೋಸಾ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಲಿಯೋನೆಲ್ ಮೆಸ್ಸಿ ಅಂಟೋನೆಲ್ಲಾ ರೋಕುಝೋ ವಿವಾಹ ಬಾಲ್ಯದ ಗೆಳತಿ Childhood Marrage Lionel Messi Antonella Roccuzzo

ಕ್ರಿಕೆಟ್‌

news

ಇತಿಹಾಸ ನಿರ್ಮಿಸಿದ ಧೋನಿ

ಆಂಟಿಗುವಾ: ಅದೆಷ್ಟು ಜನ ಧೋನಿ ಬ್ಯಾಟಿಂಗ್ ಶೈಲಿಯ ಬಗ್ಗೆ ತಾತ್ಸಾರ ಮಾಡಿದ್ದರೋ. ಅಂತಹ ಟೀಕಾಕಾರರ ...

news

ನಾನು ವಿಂಟೇಜ್‌ ವೈನ್‌ನಂತೆ, ದಿನಗಳೆದಂತೆ ರುಚಿ ಕೊಡುತ್ತೇನೆ: ಧೋನಿ

ನಾರ್ಥ್ ಸೌಂಡ್(ಆಂಟಿಗುವಾ): ನಾನು ವಿಂಟೇಜ್ ವೈನ್‌ನಂತೆ ವರ್ಷಗಳುರುಳಿದಂತೆ ಉತ್ತಮ ರುಚಿಯನ್ನು ನೀಡುತ್ತೇನೆ ...

news

ಜಿಎಸ್ ಟಿ ಇಫೆಕ್ಟ್: ಇನ್ನು ಐಪಿಎಲ್ ಮ್ಯಾಚ್ ನೋಡುವುದೂ ದುಬಾರಿ!

ನವದೆಹಲಿ: ದೇಶಾದ್ಯಂತ ಒಂದೇ ದೇಶ ಒಂದೇ ತೆರಿಗೆ ಎಂಬಂತೆ ಜಿಎಸ್ ಟಿ ಜಾರಿಯಾಗಿದ್ದೇ ತಡ, ಐಪಿಎಲ್ ಪಂದ್ಯಗಳೂ ...

news

ನೀರಸ ಪಂದ್ಯದಲ್ಲೂ ದಾಖಲೆ ಮಾಡಿದ ರವಿಚಂದ್ರನ್ ಅಶ್ವಿನ್

ಆಂಟಿಗುವಾ: ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಭಾರತ 93 ರನ್ ಗಳಿಂದ ಗೆದ್ದರೂ ...

Widgets Magazine