ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ನಿಧನ

ಫೂನಿಕ್ಸ್‌, ಶನಿವಾರ, 4 ಜೂನ್ 2016 (11:47 IST)

ಬಹಳ ದಿನಗಳಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ಇಂದು ಮುಂಜಾನೆ 
ಕೊನೆಯುಸಿರೆಳೆದಿದ್ದಾರೆ. ಅವರಿಗೆ ವರ್ಷ ವಯಸ್ಸಾಗಿತ್ತು. 

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಹಲವು ದಿನಗಳಿಂದ ಅಮೆರಿಕಾದ ಫೂನಿಕ್ಸ್‌ ಪ್ರದೇಶದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲಿ ಕುಟುಂಬದ ವಕ್ತಾರರು ಕೂಡ ಅವರ ವಾರ್ತೆಯನ್ನು ದೃಢಪಡಿಸಿದ್ದಾರೆ. 32 ವರ್ಷಗಳ ದೀರ್ಘ ಕಾಲದಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಸಾವನ್ನಪ್ಪಿದ್ದಾರೆ ಎಂದು ವಕ್ತಾರ ಬೊಂಬ್ ಗುನ್ನೆಲ್ ಪ್ರಕಟಣೆ ಹೊರಹಾಕಿದ್ದಾರೆ.  
 
ಹೆವಿವೇಟ್ ಬಾಕ್ಸಿಂಗ್‌ನಲ್ಲಿ ಮೂರು ಬಾರಿ  ವಿಶ್ವ ಚಾಂಪಿಯನ್ ಆಗಿದ್ದ ಅವರು ತಾವಾಡಿದ್ದ 61 ಪಂದ್ಯಗಳಲ್ಲಿ 56 ರಲ್ಲಿ ಜಯ ಪಡೆದು ಬಾಕ್ಸಿಂಗ್ ದಂತಕಥೆ ಎನಿಸಿಕೊಂಡಿದ್ದಾರೆ.  ಟ್ರೆವರ್ ಬೆರ್ಬಿಕ್ ಎಂಬುವರ ವಿರುದ್ದ 1981 ರಲ್ಲಿ ಸೋಲುಂಡ ಬಳಿಕ ಬಾಕ್ಸಿಂಗ್​ಗೆ ವಿದಾಯ ಹೇಳಿದ್ದ ಅವರು ಮೂರು ವರ್ಷದ ಬಳಿಕ  ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದರು.
 
ನ್ಯೂಯಾರ್ಕ್‌ನಲ್ಲಿ (1971ರ ಮಾರ್ಚ್‌) ಜೋ ಫ್ರೇಜರ್ ಮತ್ತು ಅಲಿ ನಡುವೆ ನಡೆದ ಕದನ 'ಫೈಟ್ ಆಫ್‌ ದಿ ಸೆಂಚುರಿ' ಎಂದೇ ಪ್ರಸಿದ್ಧಿ ಪಡೆದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಾಜ್ಯ ಸರಕಾರ ಭೂಮಿ ನೀಡಿದಲ್ಲಿ ಎನ್‌‍ಸಿಎ ಸ್ಥಳಾಂತರವಿಲ್ಲ: ನಿರಂಜನ್ ಶಾಹ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನಗರದ ಹೊರವಲಯದಲ್ಲಿ 49 ಎಕರೆ ಭೂಮಿಯನ್ನು ...

news

ಏಕದಿನ ಪಂದ್ಯಗಳಲ್ಲಿ 100 ಸಿಕ್ಸರ್ ದಾಖಲಿಸಿದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಪೊಲಾರ್ಡ್

ನವದೆಹಲಿ: ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್‌ಮೆನ್ ಕಿರೋನ್ ಪೊಲಾರ್ಡ್ ಏಕದಿನ ಪಂದ್ಯಗಳಲ್ಲಿ 100 ...

news

ಇಂಡೋನೇಷ್ಯಾ ಓಪನ್: ಕ್ವಾರ್ಟರ್‌ಪೈನಲ್‌ನಲ್ಲಿ ಸೈನಾಗೆ ಸೋಲು

ಇಂಡೋನೇಷ್ಯಾ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕ್ವಾರ್ಟರ್‌‌ಫೈನಲ್ ಪಂದ್ಯದಲ್ಲಿ ...

news

ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಗೆ ಕಿಸ್ ಕೊಟ್ಟಾಗ.....

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್ ವಿರಾಟ್ ಕೊಹ್ಲಿ, ತಮ್ಮ ಗೆಳತಿ ಅನುಷ್ಕಾ ...

Widgets Magazine