ವಿಂಬಲ್ಡನ್ ಟೆನಿಸ್ ನಲ್ಲಿ ಗರ್ಭಿಣಿಯರು, ಬಾಣಂತಿಯುರು!

London, ಗುರುವಾರ, 6 ಜುಲೈ 2017 (09:40 IST)

ಲಂಡನ್: ಇದೇನಿದು? ಫ್ಯಾಮಿಲಿ ಟ್ರಿಪ್ಪಾ ಎಂದು ಅಚ್ಚರಿಪಡಬೇಡಿ. ಆದರೆ ಈ ಬಾರಿಯ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಗರ್ಭಿಣಿ ಆಟಗಾರ್ತಿ, ಇದೀಗಷ್ಟೇ ಹೆರಿಗೆ ರಜೆ ಮುಗಿಸಿ ಬಂದ ಆಟಗಾರ್ತಿ ಆಡಿದ್ದಾರೆ.


 
ಲಕ್ಸೆಂಬರ್ಗ್ ನ ನಾಲ್ಕೂವರೆ ತಿಂಗಳ ಗರ್ಭಿಣಿ ಮಿನೆಲ್ಲಾ ವಿಂಬಲ್ಡನ್ ಆಡಿ ಸುದ್ದಿಯಾಗಿದ್ದಾರೆ. ಮೊದಲ ಸುತ್ತಿನಲ್ಲಿ ಆಡಿದ ಅವರು 1-6, 1-6 ಸೆಟ್ ಗಳಿಂದ ಸೋಲನುಭವಿಸಿದ್ದಾರೆ. ಈಗಾಗಲೇ ಸೆರೆನಾ ವಿಲಿಯಮ್ಸ್ ಅಮ್ಮನಾಗುತ್ತಿದ್ದು, ಆ ಕಾರಣಕ್ಕೆ ಈ ಬಾರಿಯ ವಿಂಬಲ್ಡನ್ ತಪ್ಪಿಸಿಕೊಂಡಿದ್ದಾರೆ. ಆದರೆ ಮಿನೆಲ್ಲಾ ಮಾತ್ರ ಹೊಟ್ಟೆಯಲ್ಲಿ ಕಂದಮ್ಮನ ಹೊತ್ತುಕೊಂಡು ಆಡಿ ಗಮನಸೆಳೆದರು.
 
ಇನ್ನೊಬ್ಬ ಆಟಗಾರ್ತಿ ಮಾಜಿ ವಿಶ್ವ ನಂ.1 ವಿಕ್ಟೋರಿಯಾ ಅಜರೆಂಕಾ. ಅವರು ಇದೀಗ ತಾನೇ ಹೆರಿಗೆ ರಜೆ ಮುಗಿಸಿ ಕಣಕ್ಕೆ ಮರಳಿದವರು. 2 ಸುತ್ತಿನ ಪಂದ್ಯಗಳನ್ನು ಗೆದ್ದು ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದರು. ಕಳೆದ ಡಿಸೆಂಬರ್ ನಲ್ಲಿ ಈಕೆ ಗಂಡು ಮಗುವಿನ ತಾಯಿಯಾಗಿದ್ದರು. ಆ ನಂತರ ಹಲವು ತಿಂಗಳ ವಿಶ್ರಾಂತಿಯ ನಂತರ ಇದೀಗಷ್ಟೇ ಟೆನಿಸ್ ಆಡಲಿಳಿದಿದ್ದರು.
 
ಇದನ್ನೂ ಓದಿ.. ಇಂದು ಸೋತರೂ ಟೀಂ ಇಂಡಿಯಾಕ್ಕೆ ಸರಣಿ ಸೋಲಿಲ್ಲ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ವಿಂಬಲ್ಡನ್ ಟೆನಿಸ್ ಅಜರೆಂಕಾ ಕ್ರೀಡಾ ಸುದ್ದಿಗಳು Azarenka Sports News Wimbolden Tennis Tourney

ಕ್ರಿಕೆಟ್‌

news

ಇಂದು ಸೋತರೂ ಟೀಂ ಇಂಡಿಯಾಕ್ಕೆ ಸರಣಿ ಸೋಲಿಲ್ಲ

ಜಮೈಕಾ: ಟೀಂ ಇಂಡಿಯಾ ಯಾವತ್ತೂ ಹಾಗೆ. ಐದು ಪಂದ್ಯಗಳ ಸರಣಿಯಿದ್ದರೆ, ಮೊದಲೆರಡು ಪಂದ್ಯ ಗೆದ್ದು ...

news

ಸೆಮಿಫೈನಲ್ ಸ್ಥಾನ ಗಟ್ಟಿ ಮಾಡಿಕೊಂಡ ಭಾರತೀಯ ಮಹಿಳೆಯರು

ಲಂಡನ್: ನಿರೀಕ್ಷೆಯಂತೇ ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಕ್ರಿಕೆಟ್ ಕೂಟದ ಗ್ರೂಪ್ ಹಂತದಲ್ಲಿ ...

news

ಏಷ್ಯನ್ ಸ್ನೂಕರ್ ಚಾಂಪಿಯನ್: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಏಷ್ಯನ್ ಟೀಮ್ ಸ್ನೂಕರ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಮುಂಚೂಣಿ ಆಟಗಾರ ಪಂಕಜ್ ಅಡ್ವಾಣಿ ಮತ್ತು ಲಕ್ಷಣ್ ...

news

ಸಿಂಹಿಣಿಯರಿಗಿಂದು ಲಂಕಿಣಿಯರ ಸವಾಲ್!

ಲಂಡನ್: ಮಹಿಳೆಯರ ವಿಶ್ವಕಪ್ ನಲ್ಲಿ ಭಾರತ ತಂಡದ ಭರ್ಜರಿ ಪ್ರದರ್ಶನ ಹೊಸ ಹುರುಪು ಮೂಡಿಸಿದೆ. ಹೊಸ ...

Widgets Magazine