ಸೈನಾ ನೆಹ್ವಾಲ್-ಸಿಂಧು ನಡುವೆ ಕೋಲ್ಡ್ ವಾರ್!

ಹೈದರಾಬಾದ್, ಭಾನುವಾರ, 31 ಡಿಸೆಂಬರ್ 2017 (09:37 IST)

Widgets Magazine

ಹೈದರಾಬಾದ್: ಭಾರತೀಯ ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಇಬ್ಬರೂ ಎರಡು ಮಿನುಗುವ ನಕ್ಷತ್ರಗಳಿದ್ದಂತೆ. ಇಬ್ಬರೂ ಮಹಿಳಾ ಕ್ರೀಡಾಪಟುಗಳಿಗೆ ಹೊಸ ಹುರುಪು ತಂದವರು.
 

ಆದರೆ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಇಬ್ಬರ ನಡುವಿನ ಶೀತಲ ಸಮರದ ಬಗ್ಗೆ ಸ್ವತಃ ಸಿಂಧು ಮಾತನಾಡಿದ್ದಾರೆ. ನಿಜವಾಗಿ ನಿಮ್ಮಿಬ್ಬರ ನಡುವೆ ಸ್ನೇಹ ಇದೆಯಾ ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಸಿಂಧು ‘ನಾವಿಬ್ಬರೂ ಗಂಟೆಗಟ್ಟಲೆ ಜತೆ ಕೂತುಕೊಂಡು ಹರಟುವ ಸ್ನೇಹಿತರಲ್ಲ. ಜಸ್ಟ್ ಹಾಯ್.. ಬಾಯ್ ಅಷ್ಟೇ ನಮ್ಮ ನಡುವೆ ಇರುವುದು’ ಎಂದಿದ್ದಾರೆ.
 
ಹಾಗಿದ್ದರೆ ಇವರಿಬ್ಬರ ನಡುವಿನ ಶೀತಲ ಸಮರದ ಸುದ್ದಿ ಸುಳ್ಳೇ ಎಂದರೆ ‘ಹಾಗೇನೂ ಇಲ್ಲ. ಒಂದು ಕಾಲದಲ್ಲಿ ಕೆಲವು ಸಮಸ್ಯೆಗಳಿದ್ದವು.  ಆದರೆ ಅದು ದೊಡ್ಡ ವಿಷಯವಲ್ಲ. ಆದರೆ ಅದನ್ನೇ ಜನ ತಪ್ಪಾಗಿ ತಿಳಿದುಕೊಂಡರು’ ಎಂದು ಸಿಂಧು ಹೇಳಿದ್ದಾರೆ.
 
ಪ್ರಸಕ್ತ ಇಬ್ಬರೂ ಹೈದರಾಬಾದ್ ನ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹಾಗಿದ್ದರೂ ನಾವು ತರಬೇತಿ ಸಂದರ್ಭದಲ್ಲಿ ಭೇಟಿಯಾಗುತ್ತೇವೆ. ಆದರೂ ಮಾತನಾಡುವಷ್ಟು ಪುರುಸೊತ್ತು ನಮಗಿರುವುದಿಲ್ಲ. ನಮ್ಮದೇ ಅಭ್ಯಾಸದಲ್ಲಿ ನಾವು ಬ್ಯುಸಿ’ ಎಂದು ಸಿಂಧು ಸ್ನೇಹನೂ ಇಲ್ಲ, ಶತ್ರುಗಳೂ ಅಲ್ಲ ಎಂಬಂತೆ ಮಾತನಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಸೈನಾ ನೆಹ್ವಾಲ್ ಪಿವಿ ಸಿಂಧು ಬ್ಯಾಡ್ಮಿಂಟನ್ ಕ್ರೀಡಾ ಸುದ್ದಿಗಳು Badminton Pv Sindhu Saina Nehwal Sports News

Widgets Magazine

ಕ್ರಿಕೆಟ್‌

news

ಲಂಡನ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಕರ್ನಾಟಕದ ಕ್ರಿಕೆಟಿಗ ಯಾರು ಗೊತ್ತಾ...?

ಬೆಂಗಳೂರು: ಕರ್ನಾಟಕದ ಕ್ರಿಕೆಟ್ ಆಟಗಾರ ಮಯಾಂಕ್ ಅಗರ್ವಾಲ್ ಅವರು ತಮ್ಮ ಗೆಳತಿ ಆಶಿತಾ ಸೂದ್ ಅವರೊಂದಿಗೆ ...

news

ಟೀಂ ಇಂಡಿಯ ಆಟಗಾರರ ಪತ್ನಿಯರ ಎಜುಕೇಷನ್ ಸಿಕ್ರೇಟ್ ಇಲ್ಲಿದೆ ನೋಡಿ

ಮುಂಬೈ: ಮೈದಾನದಲ್ಲಿ ಎದುರಾಳಿ ತಂಡದೊಂದಿಗೆ ಹೋರಾಡಿ ಕ್ರಿಕೆಟಿಗರು ಸ್ಟಾರ್ ಆದ್ರೆ ಅವರ ಪತ್ನಿಯರು ಈ ಒಂದು ...

news

ರಾಷ್ಟ್ರದ ಗಣ್ಯ ವ್ಯಕ್ತಿಯೊಬ್ಬರಿಂದ ವಿಶ್ವನಾಥ್ ಆನಂದ್ ಅವರಿಗೆ ಅಭಿನಂದನೆ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿಶ್ವ ರಾರಯಪಿಡ್ ಚೆಸ್ ಚಾಂಪಿಯನ್ ಷಿಪ್ ಜಯಿಸಿದ ...

news

ಶಾಕಿಂಗ್! ಬ್ಯಾಟಿಗೆ ಅಂಟಿಸಿದ ಸ್ಟಿಕ್ಕರ್ ನಿಂದಲೇ ವಿರಾಟ್ ಕೊಹ್ಲಿಗೆ ಎಷ್ಟೊಂದು ಆದಾಯ ಬರುತ್ತೆ ಗೊತ್ತಾ?!

ನವದೆಹಲಿ: ವಿರಾಟ್ ಕೊಹ್ಲಿ ಪ್ರಸಕ್ತ ಜಾಹೀರಾತು ಮಾರುಕಟ್ಟೆಯಲ್ಲಿ ಗೆಲ್ಲುವ ಕುದುರೆ. ಇಂತಿಪ್ಪ ಕೊಹ್ಲಿ ...

Widgets Magazine