ಪ್ರಧಾನಿ ಮೋದಿ ಬರ್ತ್ ಡೇಗೆ ಗೆಲುವಿನ ಉಡುಗೊರೆ ಅರ್ಪಿಸಿದ ಪಿವಿ ಸಿಂಧು

ನವದೆಹಲಿ, ಸೋಮವಾರ, 18 ಸೆಪ್ಟಂಬರ್ 2017 (09:03 IST)

ನವದೆಹಲಿ: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ನಿನ್ನೆ ನಡೆದ ಕೊರಿಯಾ ಓಪನ್ ಸೂಪರ್ ಸೀರೀಸ್ ಕೂಟದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಗೆಲುವನ್ನು ಅವರು ನಿನ್ನೆ ಜನ್ಮದಿನ ಆಚರಿಸಿಕೊಂಡ ಪ್ರಧಾನಿ ಮೋದಿಗೆ ಅರ್ಪಿಸಿದ್ದಾರೆ.


 
‘ಈ ಗೆಲುವನ್ನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಮ್ಮ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿಜೀಗೆ ಅರ್ಪಿಸುತ್ತಿದ್ದೇನೆ. ದೇಶಕ್ಕೆ ಅವರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆ ನಮಗೆಲ್ಲರಿಗೂ ಮಾದರಿ’ ಎಂದು ಸಿಂದು ಟ್ವೀಟ್ ಮಾಡಿದ್ದಾರೆ.
 
ಇದಕ್ಕೂ ಮೊದಲು ಸಿಂದು ಗೆಲುವಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದರು. ‘ಕೊರಿಯಾ ಓಪನ್ ಗೆದ್ದ ಪಿವಿ ಸಿಂಧುಗೆ ಅಭಿನಂದನೆಗಳು. ನಿಮ್ಮ ಸಾಧನೆಗೆ ದೇಶವೇ ಹೆಮ್ಮೆ ಪಡುತ್ತಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು. ಆದರೆ ತಾವು ಗೆದ್ದ ಪ್ರಶಸ್ತಿಯನ್ನು ದೇಶದ ಪ್ರಧಾನಿಗೆ ಸಲ್ಲಿಸಿದ ಸಿಂಧು ನಿರ್ಧಾರ ನಿಜಕ್ಕೂ ವಿಶೇಷವಾಗಿತ್ತು.
 
ಇದನ್ನೂ ಓದಿ…  ಮಗಳಿಗಾಗಿ ಅಪ್ಪಂದಿರು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದ ಅಭಿಷೇಕ್ ಬಚ್ಚನ್!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮತ್ತೆ ತಪ್ಪು ಮಾಡಿದರೇ ನಾಯಕ ಕೊಹ್ಲಿ?

ಚೆನ್ನೈ: ಪ್ರಯೋಗ ಮಾಡುವ ಭರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ...

news

ಆಸ್ಟ್ರೇಲಿಯಾ ಗೆಲ್ಲಲು 282 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

ಚೆನ್ನೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 281 ...

news

ಕೊರಿಯಾ ಓಪನ್ ಸೂಪರ್ ಸಿರೀಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪಿ.ವಿ.ಸಿಂಧು

ಸಿಯೋಲ್: ಕೊರಿಯಾ ಓಪನ್ ಸೂಪರ್ ಸಿರೀಸ್‌ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ದೇಶದ ಹೆಮ್ಮೆಯ ...

news

ಕೋಚ್ ಆಯ್ಕೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಸೆಹ್ವಾಗ್ ವಿರುದ್ಧ ಗಂಗೂಲಿ ಕಿಡಿ

ಮುಂಬೈ: ಬಿಸಿಸಿಐ ಜತೆ ತನಗೆ ‘ಸೆಟ್ಟಿಂಗ್’ ಸರಿ ಬರಲಿಲ್ಲ. ಅದಕ್ಕೇ ಕೋಚ್ ಆಗಿ ಆಯ್ಕೆಯಾಗಲಿಲ್ಲ ಎಂದು ಕೋಚ್ ...

Widgets Magazine
Widgets Magazine