Widgets Magazine

ಸೈನಾ ನೆಹ್ವಾಲ್ ಸೋಲಿಸಿದ ಆಟಗಾರ್ತಿಯನ್ನು ಮಣಿಸಲು ವಿಶೇಷ ಪ್ಲ್ಯಾನ್ ಮಾಡಿಕೊಂಡಿರುವ ಪಿವಿ ಸಿಂಧು

ಜಕಾರ್ತ| Krishnaveni K| Last Modified ಮಂಗಳವಾರ, 28 ಆಗಸ್ಟ್ 2018 (08:24 IST)


ಜಕಾರ್ತ: ಭಾರತದ ಬ್ಯಾಡ್ಮಿಂಟನ್ ಪಾಲಿಗೆ ಇಂದು ಮಹತ್ವದ ದಿನ. ಏಷ್ಯನ್ ಗೇಮ್ಸ್ ನ ಬ್ಯಾಡ್ಮಿಂಟನ್ ವಿಭಾಗದ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿವಿ ಸಿಂಧು ತೈಪೇಯ ಎದುರಾಳಿ ಝೂ ಯಿಂಗ್ ಅವರನ್ನು ಎದುರಿಸಲಿದ್ದಾರೆ.


ಇದು 13 ನೇ ಬಾರಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಈ ಇಬ್ಬರೂ ಆಟಗಾರ್ತಿಯರು ಎದುರಾಗುತ್ತಿದ್ದಾರೆ. ಅತೀ ಹೆಚ್ಚು ಬಾರಿ ಇದುವರೆಗೆ ಗೆದ್ದಿರುವುದು ಝೂ ಅವರೇ. ಕಳೆದ ನಾಲ್ಕು ಪಂದ್ಯಗಳಿಂದ ಸಿಂಧು ಝೂ ಎದುರು ಸೋಲುತ್ತಲೇ ಬಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಝೂ ಸೆಮಿಫೈನಲ್ ನಲ್ಲಿ ಭಾರತದವೇ ಆದ ಇನ್ನೊಬ್ಬ ಬ್ಯಾಡ್ಮಿಂಟನ್ ಪಟು ಸೈನಾ ನೆಹ್ವಾಲ್ ರನ್ನು ಸೋಲಿಸಿ ಫೈನಲ್ ಗೇರಿದವರು.


ಬ್ಯಾಡ್ಮಿಂಟನ್ ಕಣದಲ್ಲಿ ಸೈನಾರನ್ನು ಪಕ್ಕಾ ಎದುರಾಳಿಯಾಗಿಯೇ ನೋಡುವ ಸಿಂಧುಗೆ ಈಗ ಝೂ ಯಿಂಗ್ ರನ್ನು ಸೋಲಿಸುವ ಹಠ ಮತ್ತಷ್ಟು ಹೆಚ್ಚಾಗಿದೆ. ಜತೆಗೆ ಕಳೆದ ನಾಲ್ಕು ಸೋಲುಗಳ ಸೇಡು ತೀರಿಸಿಕೊಳ್ಳುವ ತವಕವಿದೆ. ಹೀಗಾಗಿ ಝೂ ಎದುರು ಮೇಲುಗೈ ಸಾಧಿಸಲು ಪಕ್ಕಾ ಯೋಜನೆ ಮಾಡಿಕೊಂಡಿರುವುದಾಗಿ ಸಿಂಧು ಹೇಳಿದ್ದಾರೆ. ಒಂದು ವೇಳೆ ಇಂದು ಸಿಂಧು ಗೆದ್ದರೆ ಚಿನ್ನದ ಜತೆಗೆ ಪ್ರತಿಷ್ಠೆಯನ್ನೂ ಗೆಲ್ಲಲಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :