ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ. ಸಿಂಧು ಹೆಸರು ಶಿಫಾರಸು

ನವದೆಹಲಿ, ಸೋಮವಾರ, 25 ಸೆಪ್ಟಂಬರ್ 2017 (15:02 IST)

ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರ ಹೆಸರನ್ನ ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಇಲಾಖೆ ಶಿಫಾರಸು ಮಾಡಿದೆ.


ವಿಶ್ವದ ನ0 2. ಶ್ರೇಯಾಂಕ ಹೊಂದಿರುವ ಪಿ.ವಿ. ಸಿಂಧು, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಬಳಿಕ ಈ ವರ್ಷ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ 2ನೇ ಕ್ರೀಡಾಪಟುವಾಗಿದ್ದಾರೆ.

ಕಳೆದ ತಿಂಗಳು ವರ್ಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್`ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪಿ.ವಿ. ಸಿಂಧು, ಇತ್ತೀಚೆಗೆ ಜಪಾನಿನ ನೊಜೋಮಿ ಒಕುಹರ ಅವರನ್ನ  22-20, 11-21, 21-18 ಅಂತರದಿಂದ ಮಣಿಸಿ ಕೊರಿಯಾ ಓಪನ್ ಸೂಪರ್ ಸೀರೀಸ್ ಗೆದ್ದಿದ್ದರು. ಕೊರಿಯಾ ಓಪನ್ ಸೀರಿಸ್ ಗೆದ್ದ ಮೊದಲ ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು. ಈ ಅದ್ಬುತ ಯಶಸ್ಸಿನ ಬಳಿಕ ಕಳೆದ ವಾರವಷ್ಟೇ ಪಿ.ವಿ. ಸಿಂಧು ವಿಶ್ವ ಬ್ಯಾಡ್ಮಿಂಟನ್ ಸಿಂಗಲ್ಸ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ್ದರು.
 
22 ವರ್ಷದ ಪಿ.ವಿ. ಸಿಂಧುಗೆ ಮಾರ್ಚ್ 2015ರಂದು ದೇಶದ 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ಶ್ರೀ ನೀಡಿ ಗೌರವಿಸಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಇಂಧೋರ್: ಆಸ್ಟ್ರೇಲಿಯಾ ವಿರುದ್ಧ ತೃತೀಯ ಏಕದಿನ ಪಂದ್ಯ ಮತ್ತು ಸರಣಿ ಗೆಲುವು ಸಾಧನೆ ಮಾಡಿದ ಟೀಂ ಇಂಡಿಯಾ ...

news

ನಟಿಯ ಮೇಲೆ ಹಲ್ಲೆ ಮಾಡಿಲ್ಲವೆಂದ ಶೇನ್ ವಾರ್ನ್

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನೈಟ್ ಕ್ಲಬ್ ಒಂದರಲ್ಲಿ ಪೋರ್ನ್ ನಟಿಯ ...

news

ವಿರಾಟ್ ಕೊಹ್ಲಿ ಕಳೆದ ಐದು ವರ್ಷಗಳಿಂದ ಕಾದಿದ್ದು ಯಾರಿಗಾಗಿ ಗೊತ್ತಾ?!

ಇಂಧೋರ್: ಇಂಧೋರ್ ಪಂದ್ಯ ಮಗಿದ ಮೇಲೆ ಭಾರೀ ಸಂತಸದಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಕಳೆದ ಐದು ವರ್ಷಗಳಿಂದ ...

news

ನೀನೇ ಬೇಕು ಎಂದು ವಿರಾಟ್ ಕೊಹ್ಲಿ ಹಿಂದೆ ಬಿದ್ದ ಅವರು ಯಾರು?!

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಟೀಂ ಇಂಡಿಯಾ ನಾಯಕನ ಮೇಲಿನ ಕ್ರೇಜ್ ದಿನೇ ದಿನೇ ...

Widgets Magazine
Widgets Magazine