ಹ್ಯಾರಿಸನ್ ನಿಂದ ಡೊನಾಲ್ಡ್ ಗೆ ಜನಾಂಗೀಯ ನಿಂದನೆ; ಎಟಿಪಿಯಿಂದ ಸೂಕ್ತ ತನಿಖೆ

ನ್ಯೂಯಾರ್ಕ್, ಗುರುವಾರ, 15 ಫೆಬ್ರವರಿ 2018 (07:32 IST)

ನ್ಯೂಯಾರ್ಕ್‌: ಅಮೆರಿಕದ ಟೆನಿಸ್‌ ಡೊನಾಲ್ಡ್‌ ಯಂಗ್‌, ಅಮೆರಿಕದ ಆಟಗಾರ ರಯಾನ್‌ ಹ್ಯಾರಿಸನ್‌ ವಿರುದ್ಧ ಜನಾಂಗೀಯ ನಿಂದನೆ ಆರೋಪವನ್ನು ಮಾಡಿದ್ದಾರೆ. ಡೊನಾಲ್ಡ್ ಮಾಡಿರುವ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇದರ ಕುರಿತು ಸರಿಯಾದ ತನಿಖೆ ನಡೆಸುತ್ತೇವೆ ಎಂದು ವೃತ್ತಿಪರ ಟೆನಿಸ್‌ ಆಟಗಾರರ ಸಂಸ್ಥೆ (ಎಟಿಪಿ) ತಿಳಿಸಿದೆ.


ಸೋಮವಾರ ನ್ಯೂಯಾರ್ಕ್‌ ಓಪನ್‌ ಟೂರ್ನಿಯ ಪಂದ್ಯದ ವೇಳೆ ಡೊನಾಲ್ಡ್‌ ಮತ್ತು ಹ್ಯಾರಿಸನ್‌ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಪಂದ್ಯದ ಅಂಪೈರ್‌ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಈ ಪಂದ್ಯದಲ್ಲಿ ಸೋತಿದ್ದ ಡೊನಾಲ್ಡ್‌ ‘ಪಂದ್ಯದ ವೇಳೆ ಹ್ಯಾರಿಸನ್‌ ನನ್ನನ್ನು ಕಪ್ಪು ವರ್ಣೀಯ ಎಂದು ನಿಂದಿಸಿದರು. ಇದರಿಂದ ಮನಸ್ಸಿಗೆ ತುಂಬಾ ನೋವಾಯಿತು. ಜೊತೆಗೆ ಆಘಾತವೂ ಆಯಿತು’ ಎಂದು ಟ್ವೀಟ್‌ ಮಾಡಿದ್ದರು.


ಇದಕ್ಕೆ ಪ್ರತಿಕ್ರಿಯಿಸಿದ್ದ ಹ್ಯಾರಿಸನ್‌ ‘ಡೊನಾಲ್ಡ್‌ ನನ್ನ ಮೇಲೆ ಮಾಡಿರುವ ಆರೋಪದಲ್ಲಿ ಸತ್ಯವಿಲ್ಲ. ಪಂದ್ಯದಲ್ಲಿ ಸೋತ ನಂತರ ಆಟಗಾರರು ಬೇಸರದಿಂದ ಎದುರಾಳಿಯನ್ನು ದೂರುವುದು ಸಾಮಾನ್ಯ. ಅವರ ಹೇಳಿಕೆ ಅಚ್ಚರಿ ತಂದಿದೆ. ಎಟಿಪಿ ಆಂತರಿಕ ತನಿಖಾ ಸಮಿತಿ ಪಂದ್ಯದ ವಿಡಿಯೊ ಮತ್ತು ಧ್ವನಿಮುದ್ರಿಕೆಯನ್ನು ಆಲಿಸಿದರೆ ಸತ್ಯ ಹೊರಬರುತ್ತದೆ. ನಾನು ನಿರಪರಾಧಿ ಎಂಬುದು ಸಾಬೀತಾಗುತ್ತದೆ’ ಎಂದು ಟ್ವೀಟ್‌ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಡೊನಾಲ್ಡ್ ಹ್ಯಾರಿಸನ್ ಆಮೆರಿಕ ಆಟಗಾರ ನ್ಯೂಯಾರ್ಕ್ ಬೇಸರ ಟ್ವೀಟ್ ತನಿಖೆ ಟೆನಿಸ್ Donald Harison America Player Newyark Sad Tweet Investigation Tennis

ಕ್ರಿಕೆಟ್‌

news

ಹಾರ್ದಿಕ್ ಪಾಂಡ್ಯ ಝಾಗಲ್ ರಾಯಭಾರಿಯಾಗಿ ನೇಮಕ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಆಟಗಾರ ಹಾರ್ದಿಕ್‌ ಪಾಂಡ್ಯ ಅವರು ಝಾಗಲ್‌ ಕಂಪನಿಯ ರಾಯಭಾರಿಯಾಗಿ ...

news

ಕರ್ನಾಟಕ ಚುನಾವಣೆಗೆ ರಾಹುಲ್ ದ್ರಾವಿಡ್!?

ಬೆಂಗಳೂರು: ಕ್ರಿಕೆಟ್ ನ ವಾಲ್ ಎಂದೇ ಕರೆಸಿಕೊಂಡಿರುವ ರಾಹುಲ್ ದ್ರಾವಿಡ್ ಈ ಬಾರಿಯ ಕರ್ನಾಟಕ ರಾಜ್ಯ ...

news

ದ.ಆಫ್ರಿಕಾ ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿ ಕೊಟ್ಟ ವಾರ್ನಿಂಗ್!

ಪೋರ್ಟ್ ಎಲಿಜಬೆತ್: ಏಕದಿನ ಸರಣಿ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾ ನಾಯಕ ಗೆಲುವಿನಿಂದ ಮೈ ಮರೆಯದೆ ...

news

ಸರಣಿ ಸೋಲಿನ ಬೆನ್ನಲ್ಲೇ ದ.ಆಫ್ರಿಕಾಗೆ ಈ ರೀತಿಯೂ ಬರೆ ಹಾಕಿದ ಟೀಂ ಇಂಡಿಯಾ!

ಪೋರ್ಟ್ ಎಲಿಜಬೆತ್: ಭಾರತ ವಿರುದ್ಧ ಸರಣಿ ಸೋಲಿನ ಬೆನ್ನಲ್ಲೇ ದ.ಆಫ್ರಿಕಾಗೆ ಮತ್ತೊಂದು ಆಘಾತ ಸಿಕ್ಕಿದೆ. ...

Widgets Magazine