ಏಷ್ಯನ್ ಗೇಮ್ಸ್ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮಾಡಿದ ಕೆಲಸ ಈಗ ವೈರಲ್!

ನವದೆಹಲಿ, ಬುಧವಾರ, 29 ಆಗಸ್ಟ್ 2018 (08:41 IST)

ನವದೆಹಲಿ: ಒಬ್ಬ ಕ್ರೀಡಾಳುವೇ ಕ್ರೀಡಾ ಸಚಿವನಾದರೆ ಕ್ರೀಡಾಳುಗಳ ಸಂಕಷ್ಟ ಆತನಿಗೆ ಚೆನ್ನಾಗಿ ಗೊತ್ತಿರುತ್ತದೆ ಎಂದು ದೇಶದ ಹೆಚ್ಚಿನ ಕ್ರೀಡಾಪಟುಗಳು ಹೇಳುತ್ತಲೇ ಇರುತ್ತಾರೆ. ಅದನ್ನು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮಾಡಿ ತೋರಿಸಿದ್ದಾರೆ.
 

ಏಷ್ಯನ್ ಗೇಮ್ಸ್ ನಲ್ಲಿ ಆಡುತ್ತಿರುವ ಭಾರತೀಯ ಕ್ರೀಡಾಪಟುಗಳ ಕೊಠಡಿಗೆ ತೆರಳಿರುವ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ಆಹಾರ ಪೂರೈಕೆ ಮಾಡುವ ಕೆಲಸ ಮಾಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವರ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
 

ಸ್ವತಃ ಶೂಟರ್ ಆಗಿ ಒಲಿಂಪಿಕ್ ಪದಕ ವಿಜೇತರಾಗಿರುವ ರಾಜ್ಯವರ್ಧನ್ ಸಿಂಗ್ ರಾಥೋಡ್ ಆಹಾರದ ತಟ್ಟೆ ಹಿಡಿದುಕೊಂಡು ಆಟಗಾರರಿಗೆ ಪೂರೈಸುತ್ತಿರುವ ಫೋಟೋ ನೋಡಿ ನೆಟ್ಟಿಗರು ಒಬ್ಬ ಕ್ರೀಡಾ ಸಚಿವ ನಿಜವಾಗಿಯೂ ನಮ್ಮ ಆಟಗಾರರಿಗೆ ಪ್ರೋತ್ಸಾಹ ನೀಡುವುದೆಂದರೆ ಹೀಗೆ ಎಂದು ಹಾಡಿ ಹೊಗಳುತ್ತಿದ್ದಾರೆ. ಅಂತೂ ಕ್ರೀಡಾ ಸಚಿವರ ನಡೆ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.
 


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಏಷ್ಯನ್ ಗೇಮ್ಸ್: ಪಿವಿ ಸಿಂಧು ಮತ್ತೆ ಬೆಳ್ಳಿ ಹುಡುಗಿ!

ಜಕಾರ್ತ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ಸ್ ನಲ್ಲಿ ...

news

ವಿರಾಟ್ ಕೊಹ್ಲಿಗೆ ರೋಹಿತ್ ಶರ್ಮಾ ಎಂದರೆ ಭಯವಂತೆ!

ಮುಂಬೈ: ಇಂಗ್ಲೆಂಡ್ ವಿರುದ್ಧ ಮುಂದಿನ ಟೆಸ್ಟ್ ಪಂದ್ಯಗಳಿಗೂ ಏಕದಿನ ಆರಂಭಿಕ ರೋಹಿತ್ ಶರ್ಮಾಗೆ ಸ್ಥಾನ ...

news

ಸೈನಾ ನೆಹ್ವಾಲ್ ಸೋಲಿಸಿದ ಆಟಗಾರ್ತಿಯನ್ನು ಮಣಿಸಲು ವಿಶೇಷ ಪ್ಲ್ಯಾನ್ ಮಾಡಿಕೊಂಡಿರುವ ಪಿವಿ ಸಿಂಧು

ಜಕಾರ್ತ: ಭಾರತದ ಬ್ಯಾಡ್ಮಿಂಟನ್ ಪಾಲಿಗೆ ಇಂದು ಮಹತ್ವದ ದಿನ. ಏಷ್ಯನ್ ಗೇಮ್ಸ್ ನ ಬ್ಯಾಡ್ಮಿಂಟನ್ ವಿಭಾಗದ ...

news

ಇತಿಹಾಸ ಬರೆದ ಸೈನಾ ನೆಹ್ವಾಲ್ ಗೆ ಪ್ರಧಾನಿ ಅಭಿನಂದನೆ: ಸಿಂಧು ಕಡೆಯಿಂದ ಬರಲಿದೆ ಇನ್ನೊಂದು ಗುಡ್ ನ್ಯೂಸ್!

ನವದೆಹಲಿ: ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಪಂದ್ಯಾವಳಿಯಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ...

Widgets Magazine