ಆಸ್ಟ್ರೇಲಿಯಾ ಓಪನ್ ಗೆದ್ದ ಕಿದಂಬಿ ಶ್ರೀಕಾಂತ್ ಬಗ್ಗೆ ಸಚಿನ್ ಹೇಳಿದ್ದ ಭವಿಷ್ಯ ನಿಜವಾಯಿತು!

Mumbai, ಸೋಮವಾರ, 26 ಜೂನ್ 2017 (09:27 IST)

ಮುಂಬೈ: ನಿನ್ನೆಯಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಭಾರತದ ಕಿದಂಬಿ ಶ್ರೀಕಾಂತ್ ಗೆ ಸಚಿನ್ ತೆಂಡುಲ್ಕರ್ ಎಂದರೆ ಅಚ್ಚುಮೆಚ್ಚು.


 
ಹಿಂದೊಮ್ಮೆ ಸಚಿನ್ ರನ್ನು ಭೇಟಿಯಾಗಿದ್ದಾಗ ಅವರು ಶ್ರೀಕಾಂತ್ ಗೆ ಮುಂದೊಂದು ದಿನ ನೀನು ನಂ.1 ಆಗಿಯೇ ಆಗುತ್ತೀಯಾ ಎಂದು ಭವಿಷ್ಯ ನುಡಿದಿದ್ದರಂತೆ. ಅದರಂತೆ ಇದೀಗ ಸತತ ಎರಡು ಸೂಪರ್ ಸೀರೀಸ್ ಗೆದ್ದಿರುವ ಶ್ರೀಕಾಂತ್ ಗೆ ಸಚಿನ್ ಟ್ವಿಟರ್ ನಲ್ಲಿ ಶುಭಾಷಯ ಕೋರಿದ್ದಾರೆ.
 
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿನ್ ನಿಮ್ಮ ಒಂದು ಸಂದೇಶ ನನಗೆ ಬಿಲಿಯನ್ ಸಂದೇಶಗಳ ಸಮಾನ ಎಂದು ಭಾವುಕರಾಗಿ ಹೇಳಿದ್ದಾರೆ. ಸತತ ಎರಡು ಪ್ರಶಸ್ತಿ ಗೆದ್ದಿರುವ ಶ್ರೀಕಾಂತ್ ಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಪ್ರಧಾನಿ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
 
ಇವರ ಸಾಧನೆಗೆ ಮಹೀಂದ್ರಾ ಸಂಸ್ಥೆ ಒಂದು ಕಾರು ಉಡುಗೊರೆಯಾಗಿ ನೀಡುತ್ತಿರುವುದಾಗಿ ಘೋಷಿಸಿದೆ. ಇನ್ನು, ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ 5 ಲಕ್ಷ ರೂ. ಬಹುಮಾನ ಘೋಷಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿಗಿಂತಲೂ ಕೂಲ್ ಕ್ಯಾಪ್ಟನ್ ಮಿಥಾಲಿ ರಾಜ್!

ಲಂಡನ್: ಭಾರತದ ಮಹಿಳಾ ಕ್ರಿಕೆಟ್ ತಂಡ ಸದ್ಯಕ್ಕೆ ಲಂಡನ್ ನಲ್ಲಿ ವಿಶ್ವಕಪ್ ಪಂದ್ಯವಾಡುತ್ತಿದೆ. ಮೊದಲ ...

news

ದುರ್ಬಲರ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರ ಸವಾರಿ

ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ...

news

ಜೈಪುರ ಪೊಲೀಸರ ನಂತರ ಇದೀಗ ಪಾಕ್ ಪೊಲೀಸರಿಂದ ಜಸ್ಪ್ರೀತ್ ಬುಮ್ರಾ ನೋ ಬಾಲ್ ಬಳಕೆ

ಫೈಸಲಾಬಾದ್: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ವೇಗಿ ಎಸೆದ ನೋ ಬಾಲ್ ನ್ನು ಇತ್ತೀಚೆಗೆ ಜೈಪುರ ಪೊಲೀಸರು ...

news

ಆಸ್ಟ್ರೇಲಿಯಾ ಓಪನ್ ಗೆದ್ದ ಕಿದಂಬಿ ಶ್ರೀಕಾಂತ್

ನವದೆಹಲಿ: ಭಾರತದ ಪಾಲಿಗೆ ಇಂದು ಶುಭ ಭಾನುವಾರವಾಗಿದೆ. ಇದೀಗ ಮುಕ್ತಾಯಗೊಂಡ ಆಸ್ಟ್ರೇಲಿಯಾ ಓಪನ್ ...

Widgets Magazine