ಕಾಮನ್ ವೆಲ್ತ್ ಗೇಮ್ಸ್ ಗೆ ಕಾಲಿಟ್ಟ ದಿನವೇ ಸೈನಾ ನೆಹ್ವಾಲ್ ಅತ್ತಿದ್ದರಂತೆ! ಕಾರಣವೇನು ಗೊತ್ತಾ?

ನವದೆಹಲಿ, ಗುರುವಾರ, 19 ಏಪ್ರಿಲ್ 2018 (08:30 IST)

ನವದೆಹಲಿ: ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಚಿನ್ನ ಗೆದ್ದರು. ಆದರೆ ಈ ಕೂಟಕ್ಕೆ ಕಾಲಿಡುವ ಮೊದಲು ಸೈನಾ ಅತ್ತಿದ್ದರಂತೆ. ಕಾರಣವೇನುಂಬುದನ್ನು ಅವರೇ ಹೇಳಿಕೊಂಡಿದ್ದಾರೆ.
 
ಕಾಮನ್ ವೆಲ್ತ್ ಗ್ರಾಮಕ್ಕೆ ಕಾಲಿಟ್ಟಾಗ ತಂದೆ ಹರ್ ವೀರ್ ಸಿಂಗ್ ಗೆ ಪ್ರವೇಶವಿಲ್ಲ ಎಂದರು. ಇದರ ಬಗ್ಗೆ ಸೈನಾ ಪ್ರತಿಭಟನೆ ನಡೆಸಿದ್ದು ಸುದ್ದಿಯಾಗಿತ್ತು. ಆದರೆ ಈ ಸಂದರ್ಭದಲ್ಲಿ ಸದಾ ತನ್ನ ಜತೆಗೇ ಬರುವ ತಂದೆಗೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ತನ್ನ ಆಟ ನೋಡಲು ಸಾಧ್ಯವಿಲ್ಲ ಎಂದು ತಿಳಿದು ಸೈನಾ ಅತ್ತಿದ್ದರಂತೆ.
 
‘ನಾನೇ ಶುಲ್ಕ ಭರಿಸಲೂ ಸಿದ್ಧಳಿದ್ದೆ. ಆದರೂ ನಾನು ಹೆಚ್ಚು ಇಷ್ಟಪಡುವ ತಂದೆಗೆ ಪಂದ್ಯ ನೋಡಲು ಸಾಧ್ಯವಿಲ್ಲ ಎಂದು ಹೇಳಿದ್ದು ನನಗೆ ತೀವ್ರ ಹತಾಶೇಯುಂಟು ಮಾಡಿತ್ತು. ಕೂಟದಿಂದಲೇ ನಿರ್ಗಮಿಸುವ ಬೆದರಿಕೆ ಹಾಕಿದ್ದೆ. ಒಂದು ದಿನ ಅಭ್ಯಾಸಕ್ಕೂ ತೆರಳಲಿಲ್ಲ. ಅದೃಷ್ಟವಶಾತ್ ಆವತ್ತು ಗೋಪಿಚಂದ್ ಸರ್ ಅಲ್ಲಿರಲಿಲ್ಲ. ಅವರಿದ್ದರೆ ನನಗೆ ಇದೆಲ್ಲಾ ಮನಸ್ಸಿಗೆ ಹಚ್ಚಿಕೊಳ್ಳದೆ ಪ್ರಾಕ್ಟೀಸ್ ಮಾಡು ಎನ್ನುತ್ತಿದ್ದರು. ಕೊನೆಗೆ ನನ್ನ ತಂದೆಗೆ ಪಂದ್ಯಕ್ಕೆ ಬರಲು ಅವಕಾಶ ಸಿಕ್ಕಿತು’ ಎಂದು ಸೈನಾ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಾಹುಲ್ ದ್ರಾವಿಡ್ ಪುತ್ರನಿಗೂ ಅಜಿಂಕ್ಯಾ ರೆಹಾನೆಗೂ ಒಂದೇ ನಂಬರ್!

ಬೆಂಗಳೂರು: ಅಜಿಂಕ್ಯಾ ರೆಹಾನೆ ತಮಗೆ ರಾಹುಲ್ ದ್ರಾವಿಡ್ ಸ್ಪೂರ್ತಿ ಎಂದು ಹೇಳಿದ್ದುಂಟು. ಆದರೆ ದ್ರಾವಿಡ್ ...

news

ಐಪಿಎಲ್: ರಾಯಲ್ ಚಾಲೆಂಜರ್ಸ್ ಪರಿಸ್ಥಿತಿ ಹೀನಾಯ

ಬೆಂಗಳೂರು: ಕಳೆದ ಐಪಿಎಲ್ ಆವೃತ್ತಿಗೂ ಈ ಐಪಿಎಲ್ ಆವೃತ್ತಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ...

news

ಆರೆಂಜ್ ಕ್ಯಾಪ್ ಗೌರವ ಸಿಕ್ಕರೂ ಧರಿಸಲ್ಲ ಎಂದು ವಿರಾಟ್ ಕೊಹ್ಲಿ ಮೊಂಡು ಹಠ ಮಾಡಿದ್ದೇಕೆ?!

ಬೆಂಗಳೂರು: ಒಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಐಪಿಎಲ್ ಕೂಟದಲ್ಲೂ ತನ್ನ ಕಳಪೆ ಪ್ರದರ್ಶನ ...

news

ಐಪಿಎಲ್: ಆರೆಂಜ್ ಕ್ಯಾಪ್ ಇದೀಗ ವಿರಾಟ್ ಕೊಹ್ಲಿ ಪಾಲು

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ...

Widgets Magazine