ಇಂದು ಮತ್ತೆ ಸೈನಾ ನೆಹ್ವಾಲ್ ವಿವಾಹ! ಆಹ್ವಾನಿತರ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಗೊತ್ತಾ?

ಹೈದರಾಬಾದ್, ಭಾನುವಾರ, 16 ಡಿಸೆಂಬರ್ 2018 (08:52 IST)

ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರಾ ಜೋಡಿ ಸೈನಾ ನೆಹ್ವಾಲ್ ಮತ್ತು ಪಾರುಪಳ್ಳಿ ಕಶ್ಯಪ್ ಇಂದು ಸಂಪ್ರದಾಯ ಪ್ರಕಾರ ಹೈದರಾಬಾದ್ ನಲ್ಲಿ ಹಸೆಮಣೆ ಏರಲಿದ್ದಾರೆ.


 
ಮೊನ್ನೆಯಷ್ಟೇ ಈ ಜೋಡಿ ತಮ್ಮ ಆಪ್ತೇಷ್ಟರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು ಮದುವೆ ನೋಂದಣಿ ಮಾಡಿ ಅಧಿಕೃತವಾಗಿ ಗಂಡ-ಹೆಂಡತಿಯಾಗಿದ್ದರು. ಇದೀಗ ಸಂಪ್ರದಾಯ ಪ್ರಕಾರ ಇಬ್ಬರೂ ಮದುವೆಯಾಗಲಿದ್ದಾರೆ.
 
ಇಂದು ನಡೆಯಲಿರುವ ವಿವಾಹ ಸಮಾರಂಭಕ್ಕೆ ಸೈನಾ-ಕಶ್ಯಪ್ ಜೋಡಿ ಈಗಾಗಲೇ ರಾಜ್ಯಪಾಲ ಇಎಸ್ಎಲ್ ನರಸಿಂಹನ್, ನಟ ಚಿರಂಜೀವಿ, ಬ್ಯಾಡ್ಮಿಂಟನ್ ಗುರು ಗೋಪಿಚಂದ್,  ಮಾಜಿ ಕ್ರಿಕೆಟಿಗ ಚಾಮುಂಡೇಶ್ವರ್ ನಾಥ್ ಮುಂತಾದ ಗಣ್ಯರನ್ನು ಆಹ್ವಾನಿಸಿದೆ. ಅದಲ್ಲದೆ, ಈ ನವ ಜೋಡಿಯ ಸ್ನೇಹಿತರು ಹಾಗೂ ಬ್ಯಾಡ್ಮಿಂಟನ್ ತಾರೆಯರೂ ಈ ಸಮಾರಂಭಕ್ಕೆ ಆಗಮಿಸುವ ನಿರೀಕ್ಷೆಯಿದೆ. ಹಾಗಿದ್ದರೂ ಬೇರೆ ತಾರಾ ಜೋಡಿಗಳಂತಿರದೇ ಸರಳವಾಗಿ ವಿವಾಹವಾಗಿ ಈ ಎರಡೂ ಜೋಡಿ ಈಗಾಗಲೇ ಮೆಚ್ಚುಗೆಗೆ ಪಾತ್ರವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೆಎಲ್ ರಾಹುಲ್, ಮುರಳಿ ವಿಜಯ್ ಇನ್ನೂ ಟೀಂ ಇಂಡಿಯಾದಲ್ಲೇ ಯಾಕಿದ್ದಾರೆ?!

ಪರ್ತ್: ಕಳೆದ ಒಂದು ವರ್ಷದಿಂದ ಕಳಪೆ ಫಾರ್ಮ್ ನಲ್ಲಿದ್ದರೂ ನಿರಂತರವಾಗಿ ಅವಕಾಶ ಪಡೆಯುತ್ತಿರುವ ಕೆಎಲ್ ...

news

ನಾಯಕ-ಉಪನಾಯಕನ ಜುಗಲ್ ಬಂದಿಯಿಂದ ಚೇತರಿಸಿಕೊಂಡ ಟೀಂ ಇಂಡಿಯಾ

ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನ ದ್ವಿತೀಯ ದಿನದಂತ್ಯಕ್ಕೆ ...

news

ಮತ್ತೆ ಟೀಂ ಇಂಡಿಯಾಕ್ಕೆ ಆರಂಭಿಕ ವೈಫಲ್ಯ: ಈ ಬಾರಿ ಬಿದ್ದ ವಿಕೆಟ್ ಯಾರದ್ದು ಗೊತ್ತೇ?

ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಊಟದ ವಿರಾಮದ ...

news

ಸೈನಾ ನೆಹ್ವಾಲ್ ಸಿಂಪಲ್ ಮದುವೆ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ? (ಫೋಟೋ ಗ್ಯಾಲರಿ)

ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪಿ ಕಶ್ಯಪ್ ನಿನ್ನೆ ...