ಆಸ್ಟ್ರೇಲಿಯಾ ಓಪನ್ ಕನಸು ಗೆಲ್ಲುವ ಸಾನಿಯಾ ಮಿರ್ಜಾ ಜೋಡಿ ಕನಸು ಭಗ್ನ

Melbourne, ಭಾನುವಾರ, 29 ಜನವರಿ 2017 (12:33 IST)

Widgets Magazine

ಮೆಲ್ಬೋರ್ನ್:  ಯಾಕೋ ಈವತ್ತು ಭಾರತದ ಪಾಲಿಗೆ ಟೆನಿಸ್ ನಲ್ಲಿ ಸೂಪರ್ ಸಂಡೆ ಆಗಲೇ ಇಲ್ಲ. ಭರ್ಜರಿ ಫಾರ್ಮ್ ನಲ್ಲಿದ್ದ ಸಾನಿಯಾ ಮಿರ್ಜಾ ತಮ್ಮ ಏಳನೇ ಗ್ರಾಂಡ್ ಸ್ಲಾಂ ಗೆದ್ದೇ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಸುಳ್ಳಾಯಿತು.


 
ಇಂದು ನಡೆದ ಆಸ್ಟ್ರೇಲಿಯಾ ಓಪನ್ ಟೆನಿಸ್ ಮಿಕ್ಸೆಡ್ ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸಾನಿಯಾ ಮತ್ತು ಕ್ರೊವೇಶಿಯಾದ ಇವಾನ್ ಡೊಡಿಗ್ ಜೋಡಿ ಅಬಿಗೇಲ್ ಸ್ಪಿಯರ್ಸ್ ಮತ್ತು ಜುವಾನ್ ಸೆಬಾಸ್ಟಿಯನ್ ಜೋಡಿಯೆದುರು ನೇರ ಸೆಟ್ ಗಳಿಂದ ಸೋತಿತು.
 
ಮೊದಲ ಸೆಟ್ ನ್ನೇ ಸೋತು ಹಿನ್ನಡೆ ಅನುಭವಿಸಿದ್ದ ಸಾನಿಯಾ ಜೋಡಿ ತೀವ್ರ ಒತ್ತಡದಲ್ಲಿತ್ತು. ಎರಡನೇ ಸುತ್ತಿನಲ್ಲಿ ಒಂದು ಹಂತದಲ್ಲಿ ಸ್ಕೋರ್ ಸಮಬಲವಾಗಿದ್ದರೂ, ಕಳಪೆ ಸರ್ವಿಸ್, ತಪ್ಪುಗಳಿಂದಾಗಿ ಎರಡನೇ ಸುತ್ತಿನಲ್ಲೇ ಪಂದ್ಯ ಕೈಚೆಲ್ಲಿದರು. ಇದರೊಂದಿಗೆ ಸಾನಿಯಾ ಏಳನೇ ಬಾರಿ ತಮ್ಮ ವೃತ್ತಿ ಜೀವನದ ಗ್ರಾಂಡ್ ಸ್ಲಾಂ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು.  ಪುರುಷರ ಸಿಂಗಲ್ಸ್ ಪಂದ್ಯ ರಫೇಲ್ ನಡಾಲ್ ಮತ್ತು ರೋಜರ್ ಫೆಡರರ್ ನಡುವೆ ನಡೆಯಬೇಕಿದ್ದು, ಇದಕ್ಕಾಗಿ ಇಡೀ ವಿಶ್ವವೇ ಕಾದು ಕುಳಿತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ ಎಂದರೆ ಯಾರು? ಶಾರುಖ್ ಖಾನ್ ಒಂದೇ ಶಬ್ದಲ್ಲಿ ನೀಡಿದ ಉತ್ತರ ಇಲ್ಲಿದೆ ನೋಡಿ!

ಟ್ವಿಟರ್ ನಲ್ಲಿ ತಮ್ಮ ರಾಯಿಸ್ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಶಾರುಖ್ ಖಾನ್ ಗೆ ಅಭಿಮಾನಿಯೊಬ್ಬರು ...

news

ಒಪ್ಪಂದ ಮುಗಿದರೂ ಹೆಸರು ದುರುಪಯೋಗಪಡಿಸುತ್ತಿರುವುದಕ್ಕೆ ಮೊಬೈಲ್ ಕಂಪನಿ ವಿರುದ್ಧ ಧೋನಿ ಗರಂ

ನಾಲ್ಕು ವರ್ಷ ಹಿಂದೆಯೇ ರಾಯಭಾರಿ ಒಪ್ಪಂದ ಮುಗಿದರೂ, ತನ್ನ ಹೆಸರನ್ನು ಇನ್ನೂ ಬಳಸುತ್ತಿರುವ ಮೊಬೈಲ್ ...

news

ಸೋತು ಸುಣ್ಣವಾಗಿ ಮರಳಿದ ಪಾಕ್ ಕ್ರಿಕೆಟ್ ತಂಡಕ್ಕೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಹೀಗಿತ್ತು ನೋಡಿ

ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಪಾಕಿಸ್ತಾನ ಕ್ರಿಕೆಟ್ ತಂಡ ತವರಿಗೆ ಬಂದಿಳಿದಿದೆ. ಸಾಮಾನ್ಯವಾಗಿ ಆಟಗಾರರು ...

news

ಆಕ್ಸಿಡೆಂಟ್ ಮಾಡಿ ಯುವತಿಯನ್ನು ಕಾಪಾಡಿದ ರವೀಂದ್ರ ಜಡೇಜಾ

ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಪತ್ನಿ ರೀವಾ ಸೋಲಂಕಿ ಚಲಿಸುತ್ತಿದ್ದ ಕಾರು ...

Widgets Magazine Widgets Magazine