ಕೊನೆಗೂ ಮಗುವಿನ ಬಗ್ಗೆ ಮನಸ್ಸು ಮಾಡಿದರು ಸಾನಿಯಾ ಮಿರ್ಜಾ!

ಹೈದರಾಬಾದ್, ಮಂಗಳವಾರ, 10 ಏಪ್ರಿಲ್ 2018 (08:21 IST)

ಹೈದರಾಬಾದ್: ಮದುವೆಯಾಗಿ ವರ್ಷಗಳೇ ಕಳೆದರೂ ಭಾರತ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾರಿಂದ ಇನ್ನೂ ಗುಡ್ ನ್ಯೂಸ್ ಬಂದಿಲ್ಲ ಎನ್ನುತ್ತಿದ್ದವರಿಗೆ ಸಾನಿಯಾ ಹೊಸದೊಂದು ಸುದ್ದಿ ಕೊಟ್ಟಿದ್ದಾರೆ.
 
ಗೋವಾ ಫೆಸ್ಟ್ 2018 ರಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಾನಿಯಾ ‘ನಾನು ಇವತ್ತು ಒಂದು ರಹಸ್ಯ ಹೇಳಲು ಬಯಸುತ್ತೇನೆ. ನಾನು ಪತಿ ಶೊಯೇಬ್ ಹಲವು ಬಾರಿ ಈ ಬಗ್ಗೆ ಮಾತನಾಡಿದ್ದೇವೆ. ನಮಗೆ ಇಬ್ಬರಿಗೂ ಮಗುವಾಗುವಾಗ ಆ ಮಗುವಿಗೆ ಮಿರ್ಜಾ ಮತ್ತು ಮಲಿಕ್ ಎಂಬ ಎರಡೂ ಸರ್ ನೇಮ್ ಇಡುತ್ತೇವೆ. ಆ ಮೂಲಕ ಎರಡೂ ಕುಟುಂಬದ ಹೆಸರು ಉಳಿಸಲು ಬಯಸುತ್ತೇವೆ. ನನ್ನ ಗಂಡ ಶೊಯೇಬ್ ಗಂತೂ ಹೆಣ್ಣು ಮಗು ಬೇಕೆಂದು ತುಂಬಾ ಆಸೆಯಿದೆ’ ಎಂದು ಸಾನಿಯಾ ಹೇಳಿಕೊಂಡಿದ್ದಾರೆ.
 
ಆ ಮೂಲಕ ಒಬ್ಬ ಮಗ ಮಾತ್ರ ಕುಟುಂಬದ ಹೆಸರನ್ನು ಮುಂದೆ ತೆಗೆದುಕೊಂಡು ಹೋಗುತ್ತಾನೆ ಎಂಬ ನಂಬಿಕೆಯನ್ನು ಸುಳ್ಳು ಮಾಡಲು ಹೊರಟಿದ್ದಾರಂತೆ ಮಿರ್ಜಾ. ಆದಷ್ಟು ಬೇಗ ಇವರ ಮನದಾಸೆ ಪೂರೈಸಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಸಾನಿಯಾ ಮಿರ್ಜಾ ಶೊಯೇಬ್ ಮಲಿಕ್ ಟೆನಿಸ್ ಕ್ರೀಡಾ ಸುದ್ದಿಗಳು Tennis Shoib Mallik Sania Mirza Sports News

ಕ್ರಿಕೆಟ್‌

news

ಐಪಿಎಲ್: ಕನ್ನಡಿಗನ ಕೈಯಲ್ಲೇ ಆರ್ ಸಿಬಿ ಸೋಲು!

ಕೋಲ್ಕೊತ್ತಾ: ಐಪಿಎಲ್ 11 ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ...

news

ಐಪಿಎಲ್: ಯುವರಾಜ್ ಸಿಂಗ್ ಗೆ ಛೀಮಾರಿ ಹಾಕಿದ ಕಿಂಗ್ಸ್ ಇಲೆವೆನ್ ಪಂಜಾಬ್ ಅಭಿಮಾನಿಗಳು!

ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ...

news

ಐಪಿಎಲ್: ಬೇರೆ ಬೇರೆ ತಂಡದಲ್ಲಿ ಆಡುತ್ತಿದ್ದರೂ ಬ್ರಾವೋ, ಪೊಲ್ಲಾರ್ಡ್ ಒಂದೇ ನಂ. ಜೆರ್ಸಿ ಹಾಕಿದ್ದೇಕೆ?

ಮುಂಬೈ: ವೆಸ್ಟ್ ಇಂಡೀಸ್ ಕ್ರಿಕೆಟಿಗರಾದ ಡ್ವಾನ್ ಬ್ರಾವೊ ಮತ್ತು ಕಿರನ್ ಪೊಲ್ಲಾರ್ಡ್ ಬೇರೆ ಬೇರೆ ತಂಡದಲ್ಲಿ ...

news

ಕಾವೇರಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಕಪ್ಪು ಪಟ್ಟಿ ಕಟ್ಟಿಕೊಳ್ಳಲಿ ಎಂದ ರಜನೀಕಾಂತ್

ಚೆನ್ನೈ: ಕಾವೇರಿ ಜಲಮಂಡಳಿ ರಚನೆಗಾಗಿ ಹೋರಾಟಕ್ಕೆ ಕೈ ಜೋಡಿಸಿರುವ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ...

Widgets Magazine