ಆಸ್ಟ್ರೇಲಿಯಾ ಓಪನ್ ಟೆನಿಸ್ ಗ್ರಾಂಡ್ ಸ್ಲಾಂ ಮುಡಿಗೇರಿಸಲು ಸಾನಿಯಾ ಮಿರ್ಜಾಗೆ ಇನ್ನೊಂದೇ ಮೆಟ್ಟಿಲು

Melbourne, ಶುಕ್ರವಾರ, 27 ಜನವರಿ 2017 (12:09 IST)

Widgets Magazine

ಮೆಲ್ಬೋರ್ನ್:  ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಇವಾನ್ ಡೊಡಿಗ್ ಜೋಡಿ ಫೈನಲ್ ತಲುಪಿದ್ದಾರೆ. ಈ ಮೂಲಕ ಮತ್ತೊಂದು ಗ್ರಾಂಡ್ ಸ್ಲಾಂ ಕಿರೀಟ ಮುಡಿಗೇರಿಸುವತ್ತ ಹೆಜ್ಜೆ ಇಟ್ಟಿದ್ದಾರೆ.


 
ಫೈನಲ್ ನಲ್ಲಿ ಗೆದ್ದರೆ ಸಾನಿಯಾ ಏಳನೇ ಗ್ರಾಂಡ್ ಸ್ಲಾಂ ಕಿರೀಟ ಮುಡಿಗೇರಿಸಿದಂತಾಗುತ್ತದೆ.  ಸೆಮಿಫೈನಲ್ ನಲ್ಲಿ ಸಾನಿಯಾ ಜೋಡಿ ಸಮಂತಾ ಸೊಸುರ್ ಮತ್ತು ಸ್ಯಾಮ್ ಗ್ರೋತ್ ಜೋಡಿಯನ್ನು 6-4, 2-6, 10-5 ಅಂತರದಿಂದ ಸೋಲಿಸಿ ಫೈನಲ್ ಗೇರಿತು.
 
ಇದುವರೆಗೆ ತಮ್ಮ ವೃತ್ತಿ ಜೀವನದಲ್ಲಿ ಸಾನಿಯಾ ಮೂರು ಮಿಕ್ಸೆಡ್ ಡಬಲ್ಸ್ ಗ್ರಾಂಡ್ ಸ್ಲಾಂ ಟೂರ್ನಿಗಳನ್ನು ಗೆದ್ದಿದ್ದಾರೆ. ಫೈನಲ್ ನಲ್ಲಿ ಸಾನಿಯಾ ಜೋಡಿಯ ಎದುರಾಳಿ ಯಾರು ಎಂಬುದು ಇನ್ನೊಂದು ಸೆಮಿಫೈನಲ್ ಪಂದ್ಯ ಮುಗಿದ ಮೇಲಷ್ಟೇ ನಿರ್ಧಾರವಾಗಬೇಕಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಇತರ ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಭಾರತದ ಇತರ ಟೆನಿಸ್ ಆಟಗಾರರು ಈಗಾಗಲೇ ಸೋಲನುಭವಿಸಿದ್ದಾರೆ. ಸಾನಿಯಾ ಭಾರತದ ಏಕೈಕ ಆಶಾಕಿರಣವಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತ ಸರಣಿಗೂ ಮೊದಲೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮರ್ಮಾಘಾತ

ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಇದರ ಬೆನ್ನಲ್ಲೇ ತಂಡ ...

news

ರಾಷ್ಟ್ರಗೀತೆ ಹಾಡುವ ಬದಲು ಚುಯಿಂಗಮ್ ಜಗಿದು ವಿವಾದಕ್ಕೀಡಾದ ಟೀಂ ಇಂಡಿಯಾ ಕ್ರಿಕೆಟಿಗ

ಪ್ರತೀ ಪಂದ್ಯಕ್ಕೆ ಮೊದಲು ರಾಷ್ಟ್ರಗೀತೆ ಹಾಡಲು ಮೈದಾನದಲ್ಲಿ ಆಟಗಾರರು ನಿಲ್ಲುವುದು ಪದ್ಧತಿ. ಅದೇ ರೀತಿ ...

news

ಟೀಂ ಇಂಡಿಯಾ ಸೋತರೇನಂತೆ? ಧೋನಿ ಮಾಡಿದ ದಾಖಲೆಯಿದು

ಇಂಗ್ಲೆಂಡ್ ವಿರುದ್ಧ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಸೋತಿರಬಹುದು. ಆದರೆ ...

news

ಮೊದಲ ಚುಂಬನದಲ್ಲೇ ದಂತಭಗ್ನವಾಗಿದ್ದಕ್ಕೆ ವಿರಾಟ್ ಕೊಹ್ಲಿಗೆ ಬೇಸರ

ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ, ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ನಾಯಕರಾಗಿ ಟೀಂ ಇಂಡಿಯಾವನ್ನು ...

Widgets Magazine Widgets Magazine