ಸಾನಿಯಾ ಮಿರ್ಜಾಗೂ ಫ್ಯಾಮಿಲಿ ಲೈಫ್ ಬೇಕಂತೆ!

ನವದೆಹಲಿ, ಮಂಗಳವಾರ, 1 ಆಗಸ್ಟ್ 2017 (11:22 IST)

ನವದೆಹಲಿ: ಟೆನಿಸ್ ಬೆಡಗಿ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೆಟಿಗ ಶೊಯೇಬ್ ಅಖ್ತರ್ ವಿವಾಹವಾಗಿ ವರ್ಷಗಳೇ ಕಳೆದಿವೆ. ಆದರೆ ಇನ್ನೂ ಈ ಇಂಡೋ-ಪಾಕ್ ಜೋಡಿ ಗುಡ್ ನ್ಯೂಸ್ ಕೊಟ್ಟಿಲ್ಲವಲ್ಲಾ? ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿರಬಹುದು.


 
ಈ ಬಗ್ಗೆ ಹಲವು ಬಾರಿ ಅವರಿಗೆ ಪ್ರಶ್ನೆಗಳು ಬಂದಿವೆ. ಈ ಬಾರಿಯೂ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರಿಗೆ ಪರೋಕ್ಷವಾಗಿ ಈ ಪ್ರಶ್ನೆ ಕೇಳಲಾಗಿತ್ತು. ಟೆನಿಸ್ ಬಿಟ್ಟ ನಂತರ ನಿಮ್ಮ ಜೀವನದಲ್ಲಿ ಏನೆಲ್ಲಾ ಮಾಡಲು ಬಯಸುತ್ತೀರಿ ಎಂದು ಸಂದರ್ಶಕರು ಕೇಳಿದ್ದಕ್ಕೆ ಅಷ್ಟೇ ಬೋಲ್ಡ್ ಆಗಿ ಸಾನಿಯಾ ಉತ್ತರಿಸಿದ್ದಾರೆ. ‘ಬಹುಶಃ ನನಗೂ ‘ಫ್ಯಾಮಿಲಿ’ ಮಾಡಿಕೊಳ್ಳಬೇಕೆಂಬ ಆಸೆಯಿದೆ’ ಎಂದಿದ್ದಾರೆ.
 
ಹಿಂದೊಮ್ಮೆ ಶೊಯೇಬ್ ಟ್ವಿಟರ್ ನಲ್ಲಿ ಮಾಡಿದ್ದ ಟ್ವೀಟ್ ನೋಡಿ ಸಾನಿಯಾ ಗರ್ಭಿಣಿಯೇ ಎಂಬ ಗಾಸಿಪ್ ಹರಡಿತ್ತು. ಮಗದೊಮ್ಮೆ ಸಂದರ್ಶನದಲ್ಲಿ ಇಂಡೋ ಪಾಕ್ ಜೋಡಿಗೆ ಮಗುವಾದರೆ ಏನು ಹೆಸರಿಡುತ್ತೀರಿ ಎಂಬ ಪ್ರಶ್ನೆ ಬಂದಿತ್ತು. ಅದಕ್ಕೇ ಈಗಲೇ ಯೋಚನೆ ಮಾಡಿಲ್ಲ ಎಂದಿದ್ದರು ಸಾನಿಯಾ.
 
ಇದನ್ನೂ ಓದಿ..  ಮತ್ತೊಮ್ಮೆ ಗುಟುರು ಹಾಕಿದ ಚೀನಾ ಅಧ್ಯಕ್ಷ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹೊಸ ವಿವಾದದ ಕಿಡಿಹೊತ್ತಿಸಿದ ರವಿಶಾಸ್ತ್ರಿ ಹೇಳಿಕೆ

ಕೊಲೊಂಬೋ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಎಸ್ ಧೋನಿ ಭಾರತ ಕಂಡ ಸರ್ವ ಶ್ರೇಷ್ಠ ನಾಯಕ. ಆದರೆ ...

news

ಧೋನಿ, ಯುವರಾಜ್ ವೃತ್ತಿ ಜೀವನ ಶೀಘ್ರದಲ್ಲೇ ಫಿನಿಶ್?!

ಮುಂಬೈ: ಟೀಂ ಇಂಡಿಯಾ ಭವಿಷ್ಯದ ಟೀಂ ಕಟ್ಟುವಾಗ ಹಿರಿಯರಾದ ಧೋನಿ ಮತ್ತು ಯುವರಾಜ್ ಸಿಂಗ್ ಭವಿಷ್ಯವೇನು ಎಂಬ ...

news

ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರಿಸುವ ವಿಚಾರಕ್ಕೆ ಬಿಸಿಸಿಐ ವಿರೋಧ

ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಅನ್ನು ಸೇರಿಸಬೇಕು ಎಂಬ ಐಸಿಸಿ ಕನಸಿಗೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿದೆ.

news

ಚೀನಾ ಬೆಂಬಲಿಸುತ್ತೀರಾ ಎಂದ ವ್ಯಕ್ತಿಗೆ ಜ್ವಾಲಾ ಗುಟ್ಟಾ ಕೊಟ್ಟ ಉತ್ತರವೇನು ಗೊತ್ತಾ?

ನವದೆಹಲಿ: ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ತನಗೆ ಅನಿಸಿದ್ದನ್ನು ನೇರವಾಗಿ ಹೇಳುವ ಜಾಯಮಾನದವರು. ...

Widgets Magazine