ಸಾನಿಯಾ ಮಿರ್ಜಾಗೆ ಇನ್ನೊಮ್ಮೆ ಮದುವೆಯಾಗುವ ಆಸೆ! ವರ ಯಾರು ಗೊತ್ತಾ?

Mumbai, ಸೋಮವಾರ, 6 ಫೆಬ್ರವರಿ 2017 (10:51 IST)

Widgets Magazine

ಮುಂಬೈ: ಟೆನಿಸ್ ಬೆಡಗಿ ಈಗ ಪಾಕಿಸ್ತಾನದ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿಯಾಗಿರುವ ಸಾನಿಯಾ ಮಿರ್ಜಾ ಹೆಸರು ಮದುವೆಗೂ ಮೊದಲು ಹಲವು ಖ್ಯಾತ ನಾಮರ ಜತೆ ಥಳುಕು ಹಾಕಿಕೊಂಡಿತ್ತು. ಆದರೆ ಮದುವೆಯಾದ ಮೇಲೂ ಅವರು ತನಗೆ ರಣಬೀರ್ ಕಪೂರ್ ಮೇಲೆ ಆಸೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.


 
ಇದೆಲ್ಲಾ ಆಗಿದ್ದು ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ. ತಮ್ಮ ಗೆಳತಿ ನಿರ್ದೇಶಕಿ ಪರ್ಹಾನ್ ಅಖ್ತರ್ ಜತೆಗೆ ಕಾರ್ಯಕ್ರಮಕ್ಕೆ ಬಂದಿದ್ದ ಸಾನಿಯಾಗೆ ಕರಣ್ ಕೆಲವು  ಗೂಗ್ಲಿ ಎಸೆದಿದ್ದರು. ಇದಕ್ಕೆ ಸಾನಿಯಾ ಕೂಡಾ ಅಷ್ಟೇ ಬುದ್ಧಿವಂತಿಕೆಯಿಂದ ಉತ್ತರಿಸಿದ್ದಾರೆ.
 
ಹಿಂದೊಮ್ಮೆ ನಿಮ್ಮ ಮತ್ತು ಶಾಹಿದ್ ಕಪೂರ್ ಹೆಸರು ಜತೆಯಾಗಿ ಕೇಳಿಬರುತ್ತಿತ್ತಲ್ಲ? ನಿಮ್ಮ ನಡುವೆ ಏನಿತ್ತು ಎಂದು ಸಾನಿಯಾಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿ ಸಾನಿಯಾ ‘ಅಂತಹದ್ದೊಂದು ಯಾವುದೇ ಘಟನೆ ನನಗೆ ನೆನಪೇ ಇಲ್ಲ. ನಾನು ಸಾಕಷ್ಟು ಪ್ರಯಾಣ ಮಾಡುತ್ತೇನೆ. ಅದಕ್ಕೆಲ್ಲಾ ಪುರುಸೊತ್ತೂ ಇಲ್ಲ’ ಎಂದಿದ್ದಾರೆ.
 
ಹಾಗಿದ್ದರೆ ರಣಬೀರ್ ಕಪೂರ್,  ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಹೆಸರು ಕೊಟ್ಟರೆ ಯಾರನ್ನು ಕಳೆಯುತ್ತೀರಿ, ಮದುವೆಯಾಗುತ್ತೀರಿ ಮತ್ತು ಪಡೆದುಕೊಳ್ಳಲು ಬಯಸುತ್ತೀರಿ ಎಂದು ಕರಣ್ ಕೇಳಿದರು. ಈಗ ಬಂತು ನೋಡಿ ಸಾನಿಯಾ ಮಾಸ್ಟರ್ ಸ್ಟ್ರೋಕ್! “ಶಾಹಿದ್ ರನ್ನು ಕಳೆದುಕೊಳ್ಳುತ್ತೇನೆ,  ರಣವೀರ್ ಸಿಂಗ್ ರನ್ನು ಪಡೆದುಕೊಳ್ಳುತ್ತೇನೆ. ಆದರೆ ರಣಬೀರ್ ಕಪೂರ್ ಸಿಕ್ಕರೆ ಮದುವೆಯಾಗಲು ಬಯಸುತ್ತೇನೆ!” ಎಂದುತ್ತರಿಸಿದ್ದಾರೆ.  ಹಲೋ ಮಿಸ್ಟರ್ ಶೊಯೇಬ್ ಮಲಿಕ್ ಕೇಳಿಸಿಕೊಂಡಿದ್ದೀರಲ್ಲಾ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಾನಿಯಾ ಮಿರ್ಜಾ ಶಾಹಿದ್ ಕಪೂರ್ ರಣಬೀರ್ ಕಪೂರ್ ರಣವೀರ್ ಸಿಂಗ್ ಶೊಯೇಬ್ ಮಲಿಕ್ ಫರ್ಹಾನ್ ಅಖ್ತರ್ ಕರಣ್ ಜೋಹರ್ ಬಾಲಿವುಡ್ ಟೆನಿಸ್ ಕ್ರೀಡಾ ಸುದ್ದಿಗಳು Bollywood Tennis Ranbir Kapoor Ranveer Singh Shoib Malik Farhan Akthar Karan Johar Sania Mirza Shahid Kapoor Sports News

Widgets Magazine

ಕ್ರಿಕೆಟ್‌

news

ಟೀಂ ಇಂಡಿಯಾದ ಭಯದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ!

ಫೆಬ್ರವರಿ 9 ರಿಂದ ಪ್ರಾರಂಭವಾಗಲಿರುವ ಏಕಮಾತ್ರ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ...

news

ಭುವನೇಶ್ವರ್ ಕುಮಾರ್ ಸ್ವಿಂಗ್ ಬೌಲಿಂಗ್ ಗೂ ಪತ್ನಿಯ ಮೂಡ್ ಬದಲಾವಣೆಗೂ ಎತ್ತಣ ಸಂಬಂಧವಯ್ಯಾ?!

ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೆಲವೊಮ್ಮೆ ಅದೆಂತೆಂತಹಾ ಉಪಮೆ ಹುಡುಕಿ ಟ್ವಿಟರ್ ನಲ್ಲಿ ಬರೆಯುತ್ತಾರೆ ...

news

ಕಾಶ್ಮೀರ ವಿಚಾರದಲ್ಲಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಬೋಲ್ಡ್ ಉತ್ತರ ನೋಡಿ!

ಇತ್ತೀಚೆಗೆ ಪಾಕ್ ಕ್ರಿಕೆಟಿಗ ಶಾಹಿದ್ ಆಫ್ರಿದಿ ಆಗಾಗ ಕ್ರಿಕೆಟೇತರ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ...

news

ಪದಚ್ಯುತ ಅಧ್ಯಕ್ಷ ಅನುರಾಗ್ ಠಾಕೂರ್ ಗೆ ರಹಸ್ಯ ಸಂದೇಶ ಕೊಡುತ್ತಿರುವ ಟೀಂ ಇಂಡಿಯಾದ ಇವರು ಯಾರು ಬಲ್ಲಿರಾ?

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡರೂ ಅನುರಾಗ್ ಠಾಕೂರ್ ಈಗಲೂ ಭಾರತ ಕ್ರಿಕೆಟ್ ನ ಆಗುಹೋಗುಗಳನ್ನು ...

Widgets Magazine