ಮಗುವಾದ ಬಳಿಕ ಟೆನಿಸ್ ಆಡುವುದನ್ನೇ ಬಿಡ್ತಾರಾ ಸಾನಿಯಾ ಮಿರ್ಜಾ?

ಹೈದರಾಬಾದ್, ಭಾನುವಾರ, 29 ಏಪ್ರಿಲ್ 2018 (09:04 IST)

ಹೈದರಾಬಾದ್: ಪಾಕಿಸ್ತಾನ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ವಿವಾಹವಾಗಿರುವ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
 
ಹಾಗಿದ್ದರೆ ಮಗುವಾದ ಮೇಲೆ ಸಾನಿಯಾ ಟೆನಿಸ್ ಆಡುವುದನ್ನೇ ಬಿಡ್ತಾರಾ? ಅದಕ್ಕೆ ಸ್ವತಃ ಸಾನಿಯಾ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
 
ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಮಾಡಿದ ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆಯಾಗಿ ಸಾನಿಯಾ ಈ ಸ್ಪಷ್ಟನೆ ಕೊಟ್ಟಿದ್ದಾರೆ. ‘ಕಂಗ್ರಾಜ್ಯುಲೇಷನ್ಸ್. ಕೊನೆಗೂ ಜೀವನದಲ್ಲಿ ಸೆಟ್ಲ್ ಆಗಲು ತೀರ್ಮಾನಿಸಿದ್ದಕ್ಕೆ ಅಭಿನಂದನೆಗಳು’ ಎಂದು ರಾಜ್ ದೀಪ್ ತಮಾಷೆ ಮಾಡಿದ್ದರು.
 
ಇದಕ್ಕೆ ಪ್ರತಿಕ್ರಿಯಿಸಿದ ಸಾನಿಯಾ ‘ಧನ್ಯವಾದಗಳು ರಾಜ್ ದೀಪ್. ಶಾಶ್ವತವಾಗಿ ಸೆಟ್ಲ್ ಆಗುತ್ತಿಲ್ಲ. ಸದ್ಯಕ್ಕೆ ವಿಶ್ರಾಂತಿಯಲ್ಲಿರುತ್ತೇನಷ್ಟೆ’ ಎಂದು ತಮಾಷೆಯಾಗಿಯೇ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಮಗುವಾದ ಮೇಲೆ ಟೆನಿಸ್ ಗೆ ಗುಡ್ ಬೈ ಹೇಳುವ ಇರಾದೆಯಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ-ರೈನಾ ಕ್ರಿಕೆಟ್ ನಲ್ಲಿ ಬ್ಯುಸಿಯಾದರೆ, ಅವರ ಮಕ್ಕಳು ಏನು ಮಾಡ್ತಿದ್ದಾರೆ ಗೊತ್ತಾ?

ನವದೆಹಲಿ: ಧೋನಿ ಮತ್ತು ಸುರೇಶ್ ರೈನಾ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವುದರಲ್ಲಿ ಬ್ಯುಸಿ. ...

news

ಸಿಹಿ ಸುದ್ದಿ ಕೊಟ್ಟ ನಂತರ ಮೊದಲ ಬಾರಿಗೆ ಹೊರ ಬಂದ ಸಾನಿಯಾ ಮಿರ್ಜಾ!

ಹೈದರಾಬಾದ್: ತಾನು ಗರ್ಭಿಣಿ ಎಂಬ ವಿಚಾರವನ್ನು ಹೊರ ಜಗತ್ತಿಗೆ ಘೋಷಣೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ...

news

ಐಪಿಎಲ್ ನಲ್ಲಿ ದಾಖಲೆ ಬರೆದ ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ

ಮುಂಬೈ: ಭಾರತ ಎ ತಂಡದ ನಾಯಕ, ಡೆಲ್ಲಿ ಡೇರ್‍ ಡೆವಿಲ್ಸ್ ಆಟಗಾರ ಪೃಥ್ವಿ ಶಾ ಐಪಿಎಲ್ ನಲ್ಲಿ ಹೊಸ ...

news

ಕ್ರಿಸ್ ಗೇಲ್ ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿಸಿದ್ದೇ ಪವಾಡವಂತೆ!

ಮೊಹಾಲಿ: ಈ ಐಪಿಎಲ್ ಕೂಟದಲ್ಲಿ ಕ್ರಿಸ್ ಗೇಲ್ ಬ್ಯಾಟಿಂಗ್ ಸುನಾಮಿ ಎದುರಾಳಿಗಳ ಎದೆ ನಡುಗಿಸುತ್ತಿದೆ. ಆದರೆ ...

Widgets Magazine
Widgets Magazine