Widgets Magazine
Widgets Magazine

ಸೂಪರ್ ಸಂಡೇಗೆ ತಯಾರಾದ ಟೆನಿಸ್ ಲೋಕ! ನಾಳೆ ಭಾರತಕ್ಕೂ ಸ್ಪೆಷಲ್ ಡೇ!

Krishnaveni K 

Melbourne, ಶನಿವಾರ, 28 ಜನವರಿ 2017 (10:43 IST)

Widgets Magazine

ಮೆಲ್ಬೋರ್ನ್:  ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ ಇಷ್ಟೊಂದು ಕಲರ್ ಫುಲ್ ಆಗಿ ಯಾವತ್ತೂ ಇರಲಿಲ್ಲವೇನೋ. ಅಷ್ಟು ಅದ್ಭುತ ರಸಗವಳ ನೀಡುವ ಪಂದ್ಯಗಳು ನಿಮಗಾಗಿ ಕಾದಿವೆ. ಮೂರೂ ಮಾದರಿಯಲ್ಲಿ ಘಟಾನುಘಟಿಗಳ ಹೋರಾಟವಿದೆ.


 
ಮೊದಲಿಗೆ ಪುರುಷರ ಸಿಂಗಲ್ಸ್ ಪಂದ್ಯ ನೋಡೋಣ. 14 ಬಾರಿಯ ಗ್ರಾಂಡ್ ಸ್ಲಾಂ ಒಡೆಯ ರಾಫೆಲ್ ನಡಾಲ್, ಇದು ಒಂಭತ್ತನೇ ಬಾರಿ ದೀರ್ಘಕಾಲದ ಎದುರಾಳಿ ರೋಜರ್ ಫೆಡರರ್ ಅವರನ್ನು ಎದುರಿಸಲಿದ್ದಾರೆ.  ಒಟ್ಟು ಒಂಭತ್ತು ಗ್ರಾಂಡ್ ಸ್ಲಾಂ ಫೈನಲ್ ನಲ್ಲಿ ಇವರಿಬ್ಬರು ಎದುರಾಗಿದ್ದು, 6 ಬಾರಿ ನಡಾಲ್ ಗೆದ್ದರೆ, ಎರಡು ಬಾರಿ ಫೆಡರರ್ ಗೆದ್ದಿದ್ದಾರೆ. ಈ ಬಾರಿ ನಾಲ್ಕು ವರ್ಷಗಳ ನಂತರ ಈ ಮದಗಜಗಳು ಕಣದಲ್ಲಿ ಸೆಣಸಾಡಲಿವೆ.
 
ಎರಡನೆಯದ್ದು ಮಹಿಳಾ ಸಿಂಗಲ್ಸ್ ಪಂದ್ಯ.  ಇದೊಂಥರಾ ಅಕ್ಕ-ತಂಗಿಯರ ಜಗಳ.  ಇಲ್ಲಿ ಅಮೆರಿಕಾದ ಖ್ಯಾತ ಟೆನಿಸ್ ಸಹೋದರಿಯರಾದ ವೀನಸ್ ಮತ್ತು ಸೆರೆನಾ ವಿಲಿಯಮ್ಸ್ ಪರಸ್ಪರ ಕಾದಾಡಲಿದ್ದಾರೆ. ಹಾಗೆ ನೋಡಿದರೆ ಮೇಲ್ನೋಟಕ್ಕೆ ತಂಗಿ ಸೆರೆನಾ ಸಿಂಗಲ್ಸ್ ವಿಭಾಗದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಈಗಾಗಲೇ 22 ಗ್ರಾಂಡ್ ಸ್ಲಾಂ ಗೆದ್ದು ಸ್ಟೆಫಿ ಗ್ರಾಫ್ ದಾಖಲೆ ಸರಿಗಟ್ಟಿರುವ ಸೆರೆನಾ ಈ ಪಂದ್ಯ ಗೆದ್ದರೆ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ. ಹಾಗಾಗಿ ಇದೊಂದು ಅಪರೂಪದ ಪಂದ್ಯವಾಗಲಿದೆ.
 
ಇನ್ನು, ಮಿಕ್ಸೆಡ್ ಡಬಲ್ಸ್ ವಿಭಾಗ. ಇದು ಭಾರತದ ಪಾಲಿಗೆ ವಿಶೇಷ ಪಂದ್ಯ. ಇಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕ್ರೊವೇಶಿಯಾದ ಇವಾನ್ ಡೊಡಿಗ್ ಜೋಡಿ ಅಬಿಗೇಲ್ ಸ್ಪಿಯರ್ಸ್-ಜುವಾನ್ ಸೆಬಾಸ್ಟಿಯನ್ ಜೋಡಿಯನ್ನು ಎದುರಿಸಲಿದ್ದಾರೆ. ಇಲ್ಲಿ ಗೆದ್ದರೆ ಸಾನಿಯಾಗೆ ಇದು 7 ನೇ ಗ್ರಾಂಡ್ ಸ್ಲಾಂ ಕಿರೀಟವಾಗಲಿದೆ. ಹಾಗಾಗಿಯೇ ನಾಳೆ ಟೆನಿಸ್ ಲೋಕಕ್ಕೆ ವಿಶೇಷ ಭಾನುವಾರ. ಕಾದು ನೋಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಅಪ್ಪನಿಗಿಂತ ದೇಶವೇ ಮುಖ್ಯವೆಂದಿದ್ದ ಕ್ರಿಕೆಟಿಗ ಮೊಹಮ್ಮದ್ ಶಮಿ!

ಮೊಹಮ್ಮದ್ ಶಮಿ ತಮ್ಮ ಅಪ್ಪನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಆದರೆ ಶಮಿ ತಮ್ಮ ಅಪ್ಪ ಹಾಸಿಗೆ ...

news

ಕಾಮೆಂಟೇಟರ್ ಹುದ್ದೆಯಿಂದ ತಮ್ಮನ್ನು ಕಿತ್ತು ಹಾಕಿದ ರಹಸ್ಯ ಬಿಚ್ಚಿಟ್ಟ ಹರ್ಷಾ ಭೋಗ್ಲೆ

ಹರ್ಷಾ ಭೋಗ್ಲೆ ಕ್ರಿಕೆಟ್ ಲೋಕದ ಕಾಮೆಂಟೇಟರ್ ಗಳಲ್ಲಿ ಪ್ರಮುಖರಾಗಿದ್ದವರು. ಆದರೆ ಕಳೆದ ವರ್ಷ ...

news

ಅಭಿಮಾನಿಗಳಿಗೆ ಈ ವಿಡಿಯೋ ನೋಡಿ ಎಂದ ಧೋನಿ

ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಅಭಿಮಾನಿಗಳಿಗಾಗಿ ಒಂದು ವಿಡಿಯೋ ನೋಡುವಂತೆ ಕೇಳಿಕೊಂಡಿದ್ದಾರೆ. ಅದನ್ನು ...

news

ಹೀಗೇ ಆದರೆ ಪಾಕಿಸ್ತಾನ ವಿಶ್ವಕಪ್ ನಲ್ಲಿ ಭಾಗವಹಿಸುವ ಅರ್ಹತೆ ಕಳೆದುಕೊಳ್ಳಲಿದೆ!

ಪಾಕಿಸ್ತಾನ ಕ್ರಿಕೆಟ್ ತಂಡ ಹೀನಾಯ ಸ್ಥಿತಿಯಲ್ಲಿದೆ. ಐಸಿಸಿ ಶ್ರೇಯಾಂಕದಲ್ಲಿ ಏಕದಿನ ಪಂದ್ಯಗಳಲ್ಲಿ ಪಾಕ್ ...

Widgets Magazine Widgets Magazine Widgets Magazine