ಸೆರೆನಾ ವಿಲಿಯಮ್ಸ್ ಗೆ ಪತಿ ನೀಡಿದ ಸರ್ ಪ್ರೈಸ್ ಗಿಫ್ಟ್ ಏನು ಗೊತ್ತಾ…?

ಬೆಂಗಳೂರು, ಶುಕ್ರವಾರ, 2 ಮಾರ್ಚ್ 2018 (07:26 IST)

ಬೆಂಗಳೂರು: ತಾಯಿಯಾದ ನಂತರ ಮೊದಲ ಬಾರಿ ಟೆನಿಸ್ ಅಂಗಣಕ್ಕೆ ಇಳಿಯಲು ಸಜ್ಜಾಗುತ್ತಿರುವ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್‌ ಅವರಿಗೆ ಪತಿ ಅಲೆಕ್ಸಿ ಒಹಾನಿಯನ್‌ ಒಂದು ಅಚ್ಚರಿಯ ಉಡುಗೊರೆಯೊಂದನ್ನು ನೀಡಿ ಪ್ರೀತಿಯ ಮಡದಿಯನ್ನು ಆಟಕ್ಕೆ ಸಜ್ಜುಗೊಳಿಸಿದ್ದಾರೆ.


ಮಾರ್ಚ್‌ ಐದರಂದು ನಡೆಯಲಿರುವ ಬಿಎನ್‌ಪಿ ಪರಿಬಾಸ್ ಓಪನ್‌ ಟೂರ್ನಿಯಲ್ಲಿ ಸೆರೆನಾ ಭಾಗವಹಿಸಲಿದ್ದಾರೆ. ಈ ಟೂರ್ನಿ ನಡೆಯಲಿರುವ ಕಾಲಿಫ್‌ನ ಇಂಡಿಯನ್ ವೇಲ್ಸ್ ಟೆನಿಸ್ ಗಾರ್ಡನ್‌ನಲ್ಲಿ ಮಗುವಿನೊಂದಿಗೆ ಸೆರೆನಾ ಇರುವ ಐದು ಫಲಕಗಳನ್ನು ಒಹಾನಿಯನ್‌ ಪ್ರದರ್ಶಿಸಿದ್ದಾರೆ.


ಇದನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು ‘ಪುತ್ರಿ ಒಲಿಂಪಿಯಾ ಮತ್ತು ನಾನು ಸೆರೆನಾ ಅವರನ್ನು ಮತ್ತೆ ಅಂಗಣಕ್ಕೆ ಸ್ವಾಗತಿಸುತ್ತೇವೆ’ ಎಂದು ಬರೆದಿರುವುದಾಗಿ ‘ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೊಹ್ಲಿಯ ಆಕ್ರಮಣಶೀಲತೆಯ ಕುರಿತು ಕಾಮೆಂಟ್ ಮಾಡಿದ ದಾದಾ...!!

ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಮೈದಾನದಲ್ಲಿನ ಆಕ್ರಮಣಕಾರಿ ಮನೋಭಾವಕ್ಕೆ ...

news

ಯುವರಾಜ್ ಸಿಂಗ್ ರನ್ನು ಮೂಲೆಗುಂಪು ಮಾಡಿ ಅಶ್ವಿನ್ ಗೆ ಪಂಜಾಬ್ ನಾಯಕತ್ವ ನೀಡಿದ್ದರ ರಹಸ್ಯ ಬಯಲು!

ಮೊಹಾಲಿ: ಈ ವರ್ಷದ ಐಪಿಎಲ್ ಆವೃತ್ತಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತವರಿನ ಯುವರಾಜ್ ಸಿಂಗ್ ರನ್ನು ...

news

ವಿವಾದಾತ್ಮಕ ಹೇಳಿಕೆ ಕೊಟ್ಟ ರವಿಶಾಸ್ತ್ರಿಗೆ ಅಭಿಮಾನಿಗಳ ತಪರಾಕಿ

ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತಮ್ಮ ಆಕ್ರಮಣಕಾರಿ ಹೇಳಿಕೆಗಳಿಂದಲೇ ಇತ್ತೀಚೆಗೆ ...

news

ನೀರಿಲ್ಲದೇ ಬಣಗುಡುತ್ತಿರುವ ಕೇಪ್ ಟೌನ್ ನಗರಕ್ಕೆ ವಿರಾಟ್ ಕೊಹ್ಲಿ ಮತ್ತು ಬಳಗ ನೆರವಾಗಿದ್ದು ಹೇಗೆ ಗೊತ್ತಾ?!

ಕೇಪ್ ಟೌನ್: ಇತ್ತೀಚೆಗೆ ದ.ಆಫ್ರಿಕಾ ಪ್ರವಾಸ ಮಾಡಿದ್ದ ಟೀಂ ಇಂಡಿಯಾಗೆ ಅಲ್ಲಿನ ಕೇಪ್ ಟೌನ್ ನಗರದ ನೀರಿನ ...

Widgets Magazine