ಪಿವಿ ಸಿಂಧು ಸೋಲಿಸಿದ ಬಳಿಕ ಸೈನಾ ನೆಹ್ವಾಲ್ ಹಿಂದೆಂದೂ ಮಾಡದ ರೀತಿಯಲ್ಲಿ ಕಿರುಚಿದ್ದು ಯಾಕೆ ಗೊತ್ತಾ?!

ನವದೆಹಲಿ, ಸೋಮವಾರ, 16 ಏಪ್ರಿಲ್ 2018 (08:49 IST)

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾನುವಾರ ನಡೆದ ಮಹಿಳೆಯರ ಬ್ಯಾಡ್ಮಿಂಟನ್ ಫೈನಲ್ ಪಂದ್ಯ ಗೆದ್ದ ಹಿರಿಯ ತಾರೆ ಸೈನಾ ನೆಹ್ವಾಲ್ ಹಿಂದೆಂದೂ ಕಾಣದ ರೀತಿಯಲ್ಲಿ ಕಿರುಚಾಡಿಬಿಟ್ಟರು.
 
ಭಾರತದವರೇ ಆದ ತನಗಿಂತ ಕಿರಿಯ, ಇತ್ತೀಚೆಗಿನ ದಿನಗಳಲ್ಲಿ ತನ್ನನ್ನೇ ಮೀರಿಸುವಷ್ಟು ಬೆಳೆದ ಪಿವಿ ಸಿಂದು ವಿರುದ್ಧ ಗೆದ್ದ ಸೈನಾ ಇಷ್ಟೊಂದು ಸಂಭ್ರಮಿಸಲು ಕಾರಣವೇನೆಂದು ಅವರೇ ಹೇಳಿಕೊಂಡಿದ್ದಾರೆ.
 
‘ಒಂದು ವೇಳೆ ನಾನು ಈ ಪಂದ್ಯ ಸೋತಿದ್ದರೆ ಭಾರತೀಯ ಮಾಧ್ಯಮಗಳಲ್ಲಿ ಸೈನಾ ಇನ್ನು ನಿವೃತ್ತಿಯಾಗಬಹುದು ಎಂದು ನನ್ನ ಕತೆ ಮುಗಿಸುತ್ತಿದ್ದರು. ಆದರೆ ರಿಯೋದಲ್ಲಿ ಆಡಲು ಸಾಧ್ಯವಾಗದ ಬೇಸರ ಎಲ್ಲವೂ ನನ್ನಲ್ಲಿತ್ತು. ಇಂದು ಗೆದ್ದಾಗ ಅದೆಷ್ಟೋ ನಿರಾಳನಾದೆ’ ಎಂದು ಸೈನಾ ಹೇಳಿಕೊಂಡಿದ್ದರು.
 
ಈ ವಿಶೇಷ ಗೆಲುವಿನ ಪದಕವನ್ನು ಅವರು ತಮ್ಮ ಒಲಿಂಪಿಕ್ ಕಂಚಿನ ಪದಕದ ಪಕ್ಕವೇ ಇಟ್ಟುಕೊಳ್ಳುವುದಾಗಿ ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಇನ್ನು ಸಿಂಧು ಜತೆಗೆ ತನಗೆ ವೃತ್ತಿಪರ ಮತ್ತು ಆರೋಗ್ಯಕರ ಪೈಪೋಟಿಯಿದೆಯಷ್ಟೆ. ನಮ್ಮಿಬ್ಬರನ್ನೂ ತಯಾರು ಮಾಡಲು ಗೋಪಿಚಂದ್ ಸರ್ ತುಂಬಾ ಶ್ರಮಪಟ್ಟರು ಎಂದು ಸೈನಾ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿಗೆ ಬೈ ಬೈ ಹೇಳಿ ಮನೆಗೆ ತೆರಳಿದ ಅನುಷ್ಕಾ ಶರ್ಮಾ (ಫೋಟೋ ಗ್ಯಾಲರಿ)

ಮುಂಬೈ: ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ ವೀಕ್ಷಣೆಗೆ ...

news

ಐಪಿಎಲ್: ಕೇರಳದ ಹುಡುಗನ ಸಾಹಸಕ್ಕೆ ಬೆಚ್ಚಿಬಿದ್ದ ವಿರಾಟ್ ಕೊಹ್ಲಿ ಹುಡುಗರು

ಬೆಂಗಳೂರು: ಮೊನ್ನೆಯ ಗೆಲುವಿನ ಸವಿಗನಸಲ್ಲಿ ಚಿನ್ನಸ್ವಾಮಿ ಅಂಗಣಕ್ಕೆ ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ...

news

ಐಪಿಎಲ್: ನೋವು ಲೆಕ್ಕಿಸದೇ ಆಡಿದ ಧೋನಿ

ಮೊಹಾಲಿ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ...

news

ಐಪಿಎಲ್: ಕೆಎಲ್ ರಾಹುಲ್ ಅನುಭವಿಸಿದ ಸಂಕಟ ಇದೀಗ ಕನ್ನಡಿಗ ಕೆ ಗೌತಮ್ ಗೂ ಎದುರಾಗಿದೆ!

ಬೆಂಗಳೂರು: ಮೊನ್ನೆಯಷ್ಟೇ ಕೆಎಲ್ ರಾಹುಲ್ ತವರಿನ ಪ್ರೇಕ್ಷಕರ ಮುಂದೆಯೇ ತವರಿನ ತಂಡದ ವಿರುದ್ಧ ಆಡುವ ಉಭಯ ...

Widgets Magazine
Widgets Magazine