ಜಗನ್-ಅಶಿತಾ ನಡುವೆ ಬಿಗ್ ಬಾಸ್ ಮನೆಯಲ್ಲಿ ಏನಾಗಿತ್ತು?! ಅಶಿತಾ ಹೇಳಿದ್ದೇನು?

ಬೆಂಗಳೂರು, ಶುಕ್ರವಾರ, 12 ಜನವರಿ 2018 (07:57 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗಿದ್ದಾಗ ಜಗನ್ ಮತ್ತು ಅಶಿತಾ ಜೋಡಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿತ್ತು. ಇದೀಗ ಇದಕ್ಕೆಲ್ಲಕ್ಕೂ ಅಶಿತಾ ಉತ್ತರಿಸಿದ್ದಾರೆ.
 

ಪವನ್ ಕಲ್ಯಾಣ್  ಸಿನಿಮಾ ಬಗ್ಗೆ ಬರೆದುಕೊಂಡಿದ್ದ ಟ್ರೋಲ್ ಮಾಡಿದವರಿಗೆ ಉತ್ತರಿಸುವಾಗ ಅಶಿತಾ ತಮ್ಮಿಬ್ಬರ ಸಂಬಂಧದ ಬಗ್ಗೆ ಕಾಲೆಳೆದವರಿಗೂ ತಿರುಗೇಟು  ನೀಡಿದ್ದಾರೆ. ಇವರಿಬ್ಬರದು ಅಸಹ್ಯ, ಅಸಭ್ಯ ವರ್ತನೆಯಾಗಿತ್ತು. ಮಹಿಳೆಯೊಬ್ಬರು ಅವರ ಫೇಸ್ ಬುಕ್ ಪೇಜ್ ನಲ್ಲಿ ಬಿಗ್ ಬಾಸ್ ನ್ನು ಮನೆಯವರೆಲ್ಲರೂ ಕೂತು ನೋಡುವ ಹಾಗಿರಲಿಲ್ಲ ಎಂದೆಲ್ಲಾ ಕಾಮೆಂಟ್ ಮಾಡಿದ್ದಕ್ಕೆ ಅಶಿತಾ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.
 
‘ನನ್ನ ಜಗನ್ ಸ್ನೇಹದ ಬಗ್ಗೆ ಜನಕ್ಕೆ ಯಾಕೆ ಇಷ್ಟು ಸಮಸ್ಯೆ ಎಂದು ನನಗೆ ಅರ್ಥವಾಗುತ್ತಿಲ್ಲ.  ನೀವ್ಯಾರು ಇದರ ಬಗ್ಗೆ ಕಾಮೆಂಟ್ ಮಾಡಲು ಅರ್ಹರು ಎಂದು ನನಗನಿಸುತ್ತಿಲ್ಲ. ಎಲ್ಲರೂ ಬೆಳೆದು ಬಂದ ರೀತಿ ಸರಿಯಾಗಿಯೇ ಇದೆ. ನಾನು ಜಗನ್, ಶ್ರುತಿ, ಜೆಕೆ.. ನಮಗೆಲ್ಲಾ ನಾವು ಏನು ಮಾಡುತ್ತಿದ್ದೇವೆಂದು ಚೆನ್ನಾಗಿ ಗೊತ್ತು.
 
ನಾನು ಜಗನ್ ಕೆನ್ನೆಗೆ ಮುತ್ತು ಕೊಟ್ಟೆ. ಅದನ್ನೇ ಅಪರಾಧ ಎನ್ನುವ ಹಾಗೆ ಮಾತನಾಡುತ್ತೀರಲ್ಲ. ಒಬ್ಬ ಮಹಿಳೆಯಾಗಿ ಈ ರೀತಿ ಕಾಮೆಂಟ್ ಮಾಡಲು ನಿಮಗೆ ಅಸಹ್ಯ  ಎನಿಸಲ್ವಾ? ನಾನು ಹೊರಗೆ ಹಲವರನ್ನು ಭೇಟಿ ಮಾಡಿದ್ದೇನೆ. ಯಾರಿಗೂ ನಮ್ಮ ಸಂಬಂಧ ಅಸಹ್ಯ ಎನಿಸಲಿಲ್ಲ. ಕಿಸ್ ಮಾಡೋದು, ಹಗ್ ಮಾಡೋದು ಎಲ್ಲರೂ ಮಾಡುತ್ತಿದ್ದರು. ಅದು ಅಸಭ್ಯ ಎಂದು ನನಗೆ ಅನಿಸಿಲ್ಲ. ಎಲ್ಲರಿಗೂ ಉತ್ತರಿಸುವ ಅಗತ್ಯವೂ ನನಗಿಲ್ಲ’ ಎಂದು ಅಶಿತಾ ತಿರುಗೇಟು ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಲ್ಮಾನ್ ಖಾನ್ ಅವರು ಶೂಟಿಂಗ್ ಅರ್ಧದಲ್ಲೇ ನಿಲ್ಲಿಸಿ ಮನೆಗೆ ತೆರಳಿದ್ದು ಯಾಕೆ ಗೊತ್ತಾ...?

ಮುಂಬೈ : ಇತ್ತೀಚೆಗೆ ಕೋರ್ಟ್ ಆವರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ರಾಜಸ್ಥಾನದ ಗ್ಯಾಂಗ್ ...

news

ಶಾಸಕನಾಗುವ ಆಸೆಯನ್ನು ಬಿಚ್ಚಿಟ್ಟ ಒಳ್ಳೆ ಹುಡುಗ ಪ್ರಥಮ್

ಬೆಂಗಳೂರು : ಸ್ಯಾಂಡಲ್ ವುಡ್ ನ ತಾರೆಯರು ರಾಜಕೀಯದ ಕಡೆಗೆ ಮುಖ ಮಾಡುತ್ತಿರುವ ಸುದ್ದಿ ಆಗಾಗ ...

news

ಬಿಗ್ ಬಾಸ್ ಸ್ಪರ್ಧಿ ಜೆಕೆ ಅವರ ಜೀವನಕ್ಕೆ ಹೊಸ ತಿರುವು ನೀಡಿದವರು ಯಾರು ಗೊತ್ತಾ...?

ಬೆಂಗಳೂರು : ಬಿಗ್ ಬಾಸ್ ಸಂಚಿಕೆಯೊಂದರಲ್ಲಿ ಸದ್ಯರಿಗೆ ಸಿಂಪಲ್ಲಾಗೊಂದು ಥ್ಯಾಂಕ್ಸ್ ಹೇಳಿ ಎಂಬ ಟಾಸ್ಕ್ ...

news

ಕನ್ನಡಾಭಿಮಾನ ಪ್ರಶ್ನಿಸಿ ಟ್ರೋಲ್ ಮಾಡಿದವರಿಗೆ ಬಿಗ್ ಬಾಸ್ ಅಶಿತಾ ಚಂದ್ರಪ್ಪ ಕೊಟ್ಟ ತಿರುಗೇಟು ಏನು?

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಅಶಿತಾ ಚಂದ್ರಪ್ಪ ತೆಲುಗು ಸಿನಿಮಾ ಬಗ್ಗೆ ಪೋಸ್ಟ್ ...

Widgets Magazine