ಬಿಗ್ ಬಾಸ್: ವಾಟ್ ಈಸ್ ಗಣರಾಜ್ಯ ಎಂದರು ಆಶಿತಾ!

ಬೆಂಗಳೂರು, ಮಂಗಳವಾರ, 21 ನವೆಂಬರ್ 2017 (10:05 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರದ ಕ್ಯಾಪ್ಟನ್ ಆಯ್ಕೆ ಮಾಡಲು ಸ್ಪರ್ಧಿಗಳ ಸಾಮಾನ್ಯ ಜ್ಞಾನ ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ ಆಶಿತಾಗೆ ಗಣರಾಜ್ಯ ದಿನ ಎಂದರೇನು ಎಂದೇ ಗೊತ್ತಾಗಲಿಲ್ಲ.
 

ಬಿಗ್ ಬಾಸ್ ಕೇಳಿದ ಪ್ರಶ್ನೆಗಳಿಗೆ ಸ್ಪರ್ಧಿಗಳು ಉತ್ತರ ಹೇಳಬೇಕಿತ್ತು. ಅತೀ ಹೆಚ್ಚು ಉತ್ತರ ಹೇಳಿದವರು ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾಗುತ್ತಾರೆ. ಅದರಂತೆ ನಿವೇದಿತಾ ಗೌಡ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾದರು.
 
ಚಟುವಟಿಕೆಯಲ್ಲಿ ಮೊದಲು ಭಾಗಿಯಾಗಿದ್ದು ನಟಿ ಆಶಿತಾ. ಇವರಿಗೆ ಭಾರತ ಗಣರಾಜ್ಯಗೊಂಡಿದ್ದು ಯಾವಾಗ ಎಂದು ಪ್ರಶ್ನೆ ಕೇಳಲಾಯಿತು. ಆದರೆ ಆಶಿತಾ ವಾಟ್ ಈಸ್ ಗಣರಾಜ್ಯ ಎಂದು ಪ್ರತಿ ಪ್ರಶ್ನೆ ಹಾಕಿದರು. ಅಷ್ಟೇ ಅಲ್ಲ ತಪ್ಪು ಉತ್ತರ ಹೇಳಿದರು. ಅಷ್ಟೇ ಅಲ್ಲ, ಬಾಹುಬಲಿ ಪ್ರತಿಮೆ ಎಲ್ಲಿದೆ ಎಂದರೆ ಬಾಹುಬಲಿ ಸಿನಿಮಾ ಶೂಟಿಂಗ್ ನಡೆದ ಸ್ಥಳದ ಹೆಸರು ಹೇಳಿದರು. ಅಸಲಿಗೆ, ಬಿಗ್ ಬಾಸ್ ಶ್ರವಣ ಬೆಳಗೊಳದ ಬಾಹುಬಲಿ ಮೂರ್ತಿ ಬಗ್ಗೆ ಪ್ರಶ್ನೆ ಕೇಳಿದ್ದರು!
 
ಇನ್ನು, ಕ್ರಿಕೆಟ್ ಪ್ರಿಯ ಜೆಕೆ ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲು 10 ಸಾವಿರ ರನ್ ಪೂರೈಸಿದ ಕ್ರಿಕೆಟಿಗನ ಹೆಸರು ತಪ್ಪಾಗಿ ಹೇಳಿದ್ದಲ್ಲದೆ, ಹಾಲಿ ರಾಷ್ಟ್ರಪತಿ ಹೆಸರನ್ನೂ ತಪ್ಪಾಗಿ ಉಚ್ಚರಿಸಿ ಅವಕಾಶ ಕಳೆದುಕೊಂಡರು.  ಇನ್ನು ಶ್ರುತಿಗೆ ಭಾರತದ ಪ್ರಥಮ ಪ್ರಜೆ ಎಂದರೇ ಗೊತ್ತಿರಲಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬೆಂಗಳೂರಿನ ದೀಪಿಕಾ ಪಡುಕೋಣೆ ಮನೆಗೆ ಬಿಗಿ ಭದ್ರತೆ

ಬೆಂಗಳೂರು: ಪದ್ಮಾವತಿ ಸಿನಿಮಾ ಬಿಡುಗಡೆ ಹಿನ್ನಲೆಯಲ್ಲಿ ಬಿಜೆಪಿ ಮತ್ತು ರಜಪೂತ ಕರ್ಣಿ ಸೇನೆ ನಾಯಕಿ ದೀಪಿಕಾ ...

news

ಶೀಘ್ರದಲ್ಲಿಯೇ ಖ್ಯಾತ ನಟ ದರ್ಶನ್ ಮನೆ ತೆರವು: ಜಿಲ್ಲಾಧಿಕಾರಿ

ಬೆಂಗಳೂರು: ಮುಂದಿನ ತಿಂಗಳಾಂತ್ಯಕ್ಕೆ ನಟ ದರ್ಶನ ಮನೆ ಸೇರಿದಂತೆ 69 ಮನೆಗಳನ್ನು ತೆರವುಗೊಳಿಸಲಾಗುವುದು ...

news

ಬಿಗ್ ಬಾಸ್: ನಂಬಿದವರಿಗೆ ಜಾಡಿಸಿ ಒದೀತಾರಂತೆ ದಿವಾಕರ್!

ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಶೋನಲ್ಲಿ ಸಾಮಾನ್ಯ ಜನರ ...

news

ಸರ್ಕಾರಕ್ಕೆ ರಾಕಿಂಗ್ ಸ್ಟಾರ್ ಯಶ್ ಸವಾಲು

ಬೆಂಗಳೂರು: ರಾಜನರಸಿಂಹ ಚಿತ್ರದ ಅಡಿಯೋ ಬಿಡುಗಡೆ ಸಂದರ್ಭದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾಜ್ಯ ಸರ್ಕಾರಕ್ಕೇ ...

Widgets Magazine
Widgets Magazine