ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳಿಗೆ ಅನಾರೋಗ್ಯ!

ಬೆಂಗಳೂರು, ಶುಕ್ರವಾರ, 24 ನವೆಂಬರ್ 2017 (09:53 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಒಬ್ಬರಾದ ಮೇಲೆ ಒಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನಿನ್ನೆ ದೈಹಿಕ ಶಿಕ್ಷಕಿಯಾಗಿ ಬಂದಿದ್ದ ಕಳೆದ ಬಿಗ್ ಬಾಸ್ ಸ್ಪರ್ಧಿ ಶೀತಲ್ ಶೆಟ್ಟಿ ನೀಡಿದ ಟಾಸ್ಕ್ ನಡುವೆ ಮೂವರು ಸ್ಪರ್ಧಿಗಳು ಅಸ್ವಸ್ಥರಾಗಿದ್ದಾರೆ.
 

ಮೊದಲು ಹುಷಾರು ತಪ್ಪಿದ್ದು ಅನುಪಮಾ ಗೌಡಗೆ. ಉಸಿರಾಟದ ಸಮಸ್ಯೆಯಿಂದ ಬಳಲಿದ ಅನುಪಮಾರನ್ನು ಎತ್ತಿಕೊಂಡು ಕನ್ ಫೆಷನ್ ರೂಂಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರ ನೆರವಿನಿಂದ ಚಿಕಿತ್ಸೆ ಕೊಡಿಸಲಾಯಿತು.
 
ಇನ್ನು ಸ್ವಲ್ಪ ಸಮಯದ ನಂತರ ಆಶಿತಾ ಮೈಗ್ರೇನ್ ತಲೆನೋವೆಂದು ಇದ್ದಲ್ಲೇ ಮಲಗಿಕೊಂಡರು. ಕೊನೆಗೆ ಬಿಗ್ ಬಾಸ್ ಬಳಿ ಮನವಿ ಮಾಡಿ ಅವರಿಗೆ ಟಾಸ್ಕ್ ನಿಂದ ವಿನಾಯಿತಿ ನೀಡಲಾಯಿತು. ಇದಾದ ಸ್ವಲ್ಪ ಹೊತ್ತಿನಲ್ಲೇ ಸಮೀರ್ ಆಚಾರ್ಯ ತಲೆ ಸುತ್ತಿ ಬಿದ್ದರು. ಅವರಿಗೂ ಸ್ಪರ್ಧಿಗಳೇ ಪ್ರಥಮ ಚಿಕಿತ್ಸೆ ಕೊಡಿಸಿದರು. ಹಾಗಿದ್ದರೂ ಟಾಸ್ಕ್ ಮುಗಿದ ಮೇಲೂ ತಲೆಸುತ್ತಿದಂತಾಗುತ್ತದೆಂದು ಸಮೀರ್ ಆಚಾರ್ಯ ಹೇಳುತ್ತಿದ್ದರು. ಅಂತೂ ಇಡೀ ದಿನ ಬಿಗ್ ಬಾಸ್ ನಲ್ಲಿ ಅನಾರೋಗ್ಯ ಪೀಡಿತರ ಸಂಖ್ಯೆಯೇ ಜಾಸ್ತಿಯಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಉಸ್ಸಪ್ಪಾ…! ಕೊನೆಗೂ ‘ಅಮೃತವರ್ಷಿಣಿ’ ಕತೆ ಮುಗಿಯಿತು!

ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತವರ್ಷಿಣಿ ಅದೆಷ್ಟು ಹೆಣ್ಣುಮಕ್ಕಳ ...

news

ಲಕ್ಷ್ಮೀ ರೈ ಬೋಲ್ಡ್ ಸೀನ್ ಲೀಕ್ ಹಿಂದೆ ನಡೆದಿದೆಯಾ ಸಂಚು?!

ಮುಂಬೈ: ಬಾಲಿವುಡ್ ನಟಿ ಲಕ್ಷ್ಮೀ ರೈ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಜೂಲಿ 2 ಸಿನಿಮಾದ ಕೆಲವು ಬೋಲ್ಡ್ ...

news

ಮತ್ತೆ ಒಂದಾದ ಸಲ್ಮಾನ್-ಕತ್ರಿನಾ!

ಮುಂಬೈ: ಬಣ್ಣದ ಬದುಕಿನಾಚೆಗೂ ಸಲ್ಮಾನ್ ಖಾನ್ ಮತ್ತು ಕತ್ರಿನಾ ನಡುವೆ ಏನೋ ಇದೆ ಎಂದು ಗಾಸಿಪ್ ಪ್ರೀಯರು ...

news

ರಾಜಕೀಯ ಪ್ರವೇಶಿಸುವುದಿಲ್ಲ: ಸೂಪರ್ ಸ್ಟಾರ್ ರಜನಿಕಾಂತ್ ಸ್ಪಷ್ಟನೆ

ಚೆನ್ನೈ: ಸದ್ಯಕ್ಕೆ ರಾಜಕೀಯ ಪ್ರವೇಶಿಸುವ ಯಾವುದೇ ಇರಾದೆಯಿಲ್ಲ. ರಾಜಕೀಯ ಪಕ್ಷ ಸ್ಥಾಪಿಸುವಂತೆ ಯಾವುದೇ ...

Widgets Magazine
Widgets Magazine