ಬಿಗ್ ಬಾಸ್ ನಲ್ಲಿ ಜೆಕೆಗೆ ಫೇವರ್ ಮಾಡ್ತಿದ್ದಾರಾ ಕಿಚ್ಚ ಸುದೀಪ್? ಅಭಿಮಾನಿಗೆ ಕಿಚ್ಚ ಕೊಟ್ಟ ಉತ್ತರವೇನು ಗೊತ್ತಾ?

ಬೆಂಗಳೂರು, ಸೋಮವಾರ, 15 ಜನವರಿ 2018 (10:51 IST)

ಬೆಂಗಳೂರು: ರಿಯಾಲಿಟಿ ಶೋನಲ್ಲಿ ಕಿಚ್ಚ ಸುದೀಪ್ ತಮ್ಮ ಹಳೆಯ ಗೆಳೆಯ ಜಯರಾಮ್ ಕಾರ್ತಿಕ್ ಗೆ ಫೇವರ್ ಮಾಡ್ತಿದ್ದಾರೆ ಎಂದು ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬ ಪರೋಕ್ಷವಾಗಿ ದೂರಿದ್ದಕ್ಕೆ ಕಿಚ್ಚ ತಕ್ಕ ಉತ್ತರ ಕೊಟ್ಟಿದ್ದಾರೆ.
 

ಆದಿತ್ಯ ಎಂಬ ಟ್ವಿಟರ್ ಖಾತೆಯ ವ್ಯಕ್ತಿ ಕಿಚ್ಚ ಸುದೀಪ್ ಗೆ ಟ್ವೀಟ್ ಮಾಡಿ ‘ಇದು ನನ್ನ ವಿನಂತಿ!! ಪಕ್ಷಪಾತೀ ಹೋಸ್ಟ್ ಆಗಬೇಡಿ. ನೀವು ಜೆಕೆ ಜತೆಗೆ ಹೇಗೆ ಇದ್ದೀರಿ ಎನ್ನುವುದನ್ನು ಇಡೀ ಕರ್ನಾಟಕ ಜನತೆ ನೋಡುತ್ತಿದೆ’ ಎಂದು ಚುಚ್ಚಿದ್ದಾರೆ.
 
ಇದಕ್ಕೆ ಅಷ್ಟೇ ತಾಳ್ಮೆಯಿಂದ ಉತ್ತರಿಸಿರುವ ಸುದೀಪ್ ‘ಖಂಡಿತಾ ಸರ್. ಇಡೀ ಕರ್ನಾಟಕ ಜನತೆ ನಿಮ್ಮನ್ನು ಸಂಪರ್ಕಿಸಿ ನನಗೆ ಈ ಸಂದೇಶ ಮುಟ್ಟಿಸುವಂತೆ ಹೇಳಿಕೊಂಡಿದ್ದಾರೆ ಎನ್ನುವುದು ನನಗೆ ಖುಷಿಯ ಸಂಗತಿ’ ಎಂದು ಬಟ್ಟೆಯೊಳಗೆ ಸುತ್ತಿಗೆ ಇಟ್ಟು ತಿರುಗೇಟು ನೀಡಿದ್ದಾರೆ.
 
ಕಿಚ್ಚನ ವಿರುದ್ಧ ಈ ರೀತಿ ಟೀಕಿಸಿ ಟ್ವೀಟ್ ಮಾಡಿದ ಅಭಿಮಾನಿ ವಿರುದ್ಧ ಅಭಿಮಾನಿಗಳೂ ತಿರುಗಿಬಿದ್ದಿದ್ದಾರೆ. ಸುದೀಪ್ ಎಂತಹಾ ನಿರೂಪಕ ಎನ್ನುವುದು ಎಲ್ಲರಿಗೂ ಗೊತ್ತು. ಅವರು ಎಂತಹಾ ಮಹಾನ್ ವ್ಯಕ್ತಿ ಎನ್ನುವುದು ನಮಗೆ ಗೊತ್ತು. ಹಿಂದಿನ ಸೀಸನ್ ನಲ್ಲಿ ತಮಗೆ ಬೇಕಾದವರು, ಸ್ನೇಹಿತರು ಇದ್ದರೂ ಅವರನ್ನು ಗೆಲ್ಲಿಸದೇ ನಿಜವಾದ ಅಭ್ಯರ್ಥಿಗಳನ್ನೇ ಗೆಲ್ಲಿಸಿದರು. ಬಾಯಿಗೆ ಬಂದ ಹಾಗೆ ಹೇಳಬೇಡಿ ಎಂದು ಅಭಿಮಾನಿಗಳು ಜಾಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮತ್ತೆ ತೆರೆ ಮೇಲೆ ಬರ್ತಿದ್ದಾನೆ ಮಜಾ ಟಾಕೀಸ್ ಸೃಜಾ!

ಬೆಂಗಳೂರು: ಮಜಾ ಟಾಕೀಸ್ ಎಂಬ ಕಲರ್ಸ್ ವಾಹಿನಿಯ ಶೋ ಭಾರೀ ಹಿಟ್ ಆಗಿತ್ತು. ಕನ್ನಡ ಕಿರುತೆರೆಯಲ್ಲಿ ಹಲವು ...

news

ಮತ್ತೆ ಬಿಗ್ ಬಾಸ್ ಮನೆಯೊಳಗೆ ಬಂದ ಕಿಚ್ಚ ಸುದೀಪ್!

ಬೆಂಗಳೂರು: ಕಿಚ್ಚ ಸುದೀಪ್ ಕಳೆದ ವಾರ ಬಿಗ್ ಬಾಸ್ ಮನೆಗೆ ಮುಖ ಮುಚ್ಚಿಕೊಂಡು ಬಂದು ಅಡುಗೆ ಮಾಡಿ ...

news

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಿರಿಜಾ ಲೋಕೇಶ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದು ಹೇಗೆ ಗೊತ್ತಾ...?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಸೃಜನ್ ಲೋಕೇಶ್ ಅವರ ಒಳ್ಳೆಯ ...

news

ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ ಸಿಕ್ಕ ಉಡುಗೊರೆ ಏನು ಗೊತ್ತಾ...?

ಬೆಂಗಳೂರು : ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ ಖ್ಯಾತ ಸಂಗೀತ ನಿರ್ದೇಶಕರಾದ ಎ.ಆರ್ ರೆಹಮಾನ್ ...

Widgets Magazine
Widgets Magazine