ಬಿಗ್ ಬಾಸ್ ಕನ್ನಡ: ನಿವೇದಿತಾ ಗೌಡ ಸಾಹಸಕ್ಕೆ ಜೈ ಎಂದರು ಅಭಿಮಾನಿಗಳು!

ಬೆಂಗಳೂರು, ಶುಕ್ರವಾರ, 12 ಜನವರಿ 2018 (09:21 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ನಿವೇದಿತಾ ಮಾಡಿದ ಟಾಸ್ಕ್ ಗೆ ವೀಕ್ಷಕರು ಫಿದಾ ಆಗಿದ್ದಾರೆ. ದುರ್ಬಲ ಹುಡುಗಿ ಎಂದೇ ಬಿಂಬಿತವಾಗಿರುವ ನಿವೇದಿತಾ ಪದೇ ಪದೇ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದಾರೆ.
 

ನಿನ್ನೆ ದಿವಾಕರ್ ಪತ್ನಿ ಮನೆಯೊಳಗೆ ಬಂದಾಗ ನಿವೇದಿತಾ ಮಡಕೆ ಬ್ಯಾಲೆನ್ಸ್ ಟಾಸ್ಕ್ ಮಾಡಬೇಕಿತ್ತು. ಅದರಂತೆ ನಿವೇದಿತಾ ಬರೋಬ್ಬರಿ 30 ನಿಮಿಷ ಬ್ಯಾಲೆನ್ಸ್ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಂತರವೂ ನಿವೇದಿತಾ ಮಡಕೆ ಬೀಳಿಸಿರಲಿಲ್ಲ. ಆದರೆ ಕೊನೆಗೆ ಸ್ವತಃ ಬಿಗ್ ಬಾಸ್ ಸ್ಟಾಪ್ ಮಾಡಲು ಹೇಳಿದ್ದಕ್ಕೆ ನಿವೇದಿತಾ ಬಿಟ್ಟುಕೊಟ್ಟರು.
 
ಇದರಿಂದಾಗಿ ದಿವಾಕರ್ ಗೆ ತುಂಬಾ ಹೊತ್ತು ತಮ್ಮ ಪತ್ನಿ ಜತೆ ಕಳೆಯಲು ಸಾಧ್ಯವಾಯಿತು. ಮನೆಯವರೂ ನಿವೇದಿತಾ ಸಾಹಸಕ್ಕೆ ಬೆನ್ನು ತಟ್ಟಿದರು. ಅದಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ನಿವೇದಿತಾ ಸಾಹಸವನ್ನು ಕೊಂಡಾಡಿದ್ದಾರೆ. ಇಷ್ಟು ಸಾಕಲ್ಲವೇ? ನಿರ್ಣಾಯಕ ಘಟ್ಟದಲ್ಲಿ ಚಮಕ್ ಸೃಷ್ಟಿಸಲು?!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಣವೀರ್ ಸಿಂಗ್ ಅಜ್ಜಿ ಜತೆ ಸಮಯ ಕಳೆದ ದೀಪಿಕಾ ಪಡುಕೋಣೆ!

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ರಣವೀರ್‌ ಪೋಷಕರಿಂದ ...

news

ಜಗನ್-ಅಶಿತಾ ನಡುವೆ ಬಿಗ್ ಬಾಸ್ ಮನೆಯಲ್ಲಿ ಏನಾಗಿತ್ತು?! ಅಶಿತಾ ಹೇಳಿದ್ದೇನು?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗಿದ್ದಾಗ ಜಗನ್ ಮತ್ತು ಅಶಿತಾ ಜೋಡಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ...

news

ಸಲ್ಮಾನ್ ಖಾನ್ ಅವರು ಶೂಟಿಂಗ್ ಅರ್ಧದಲ್ಲೇ ನಿಲ್ಲಿಸಿ ಮನೆಗೆ ತೆರಳಿದ್ದು ಯಾಕೆ ಗೊತ್ತಾ...?

ಮುಂಬೈ : ಇತ್ತೀಚೆಗೆ ಕೋರ್ಟ್ ಆವರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ರಾಜಸ್ಥಾನದ ಗ್ಯಾಂಗ್ ...

news

ಶಾಸಕನಾಗುವ ಆಸೆಯನ್ನು ಬಿಚ್ಚಿಟ್ಟ ಒಳ್ಳೆ ಹುಡುಗ ಪ್ರಥಮ್

ಬೆಂಗಳೂರು : ಸ್ಯಾಂಡಲ್ ವುಡ್ ನ ತಾರೆಯರು ರಾಜಕೀಯದ ಕಡೆಗೆ ಮುಖ ಮಾಡುತ್ತಿರುವ ಸುದ್ದಿ ಆಗಾಗ ...

Widgets Magazine