ಬಿಗ್ ಬಾಸ್ ಕನ್ನಡ: ಚಂದನ್ ಗೆ ಹುಡುಗಿ ಹುಡುಕಿಯೇ ಬಿಟ್ಟ ರಿಯಾಜ್! ಯಾರಾಕೆ ಗೊತ್ತಾ?!

ಬೆಂಗಳೂರು, ಗುರುವಾರ, 4 ಜನವರಿ 2018 (10:10 IST)

ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಹೊರ ಹೋದ ತಕ್ಷಣ ಚಂದನ್ ಶೆಟ್ಟಿ

ಮದುವೆಯಾಗುವುದು ಖಂಡಿತಾ ಎನಿಸಿಬಿಟ್ಟಿದೆ. ಮೋಸ್ಟ್ ವಾಂಟೆಡ್ ಬ್ಯಾಚುಲರ್ ಗೆ ರಿಯಾಜ್ ಪರ್ಫೆಕ್ಟ್ ಹುಡುಗಿ ಆಯ್ಕೆ ಮಾಡಿದ್ದಾರೆ! ಆದರೆ ಚಂದನ್ ಮಾತ್ರ ಬೇಡ ಎಂದಿದ್ದಾರೆ. ಅಷ್ಟಕ್ಕೂ ಯಾರಾಕೆ?!
 

ಬೇರೆ ಯಾರೂ ಅಲ್ಲ, ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿದ್ದ ಇದೀಗ ಎಲಿಮಿನೇಟ್ ಆಗಿರುವ ಅಶಿತಾ ನಿನಗೆ ತಕ್ಕ ಹುಡುಗಿ ಎಂದು ರಿಯಾಜ್ ಚಂದನ್ ಗೆ ಸಲಹೆ ನೀಡಿದ್ದಾರೆ. ಸಿಕ್ಕರೆ ಆಕೆಯಂತಹ ಕೇರಿಂಗ್, ಸುಂದರ, ಶತ್ರುವನ್ನೂ ಸತ್ಕರಿಸುವ ಗುಣವಿರುವ ಹುಡುಗಿ ಸಿಗಬೇಕು.
 
ನೀನು ಕನ್ಸರ್ಟ್ ಮುಗಿಸಿಕೊಂಡು ಸುಸ್ತಾಗಿ ಮನೆಗೆ ಬರುವಾಗ ಆಕೆ ಬಾಗಿಲು ತೆರೆದರೆ ಅವಳ ಮುಖ ನೋಡಿದ ತಕ್ಷಣ ನಿನ್ನ ಸುಸ್ತೆಲ್ಲಾ ಮಾಯವಾಗುತ್ತದೆ. ನಿನ್ನ ಮನೆಗೆ ಶತ್ರುವೇ ಬಂದರೂ ಚೆನ್ನಾಗಿ ಊಟ ಹಾಕಿ ಕಳಿಸ್ತಾಳೆ. ಸೀರೆ, ಚೂಡಿದಾರ್, ಪ್ಯಾಂಟ್ ಯಾವ ಡ್ರೆಸ್ ಇರಲಿ ಆಕೆಗೆ ಸೂಟ್ ಆಗುತ್ತೆ. ನಗುವಲ್ಲೇ ಮೋಡಿ ಮಾಡ್ತಾಳೆ. ನನ್ನ ಪ್ರಕಾರ ಆಕೆಯೇ ನಿನಗೆ ಬೆಸ್ಟ್. ಬೇರೆ ಡೌ ಮಾಡೋರನ್ನೆಲ್ಲಾ ಬಿಡು ಎಂದು ರಿಯಾಜ್ ಸಲಹೆ ಕೊಟ್ಟಿದ್ದಾರೆ.
 
ಆರಂಭದಲ್ಲಿ ಹೌದು ಹೌದು ಎನ್ನುತ್ತಿದ್ದ ಚಂದನ್, ಆದರೆ ನನಗೆ ಹೋಂ ಮೇಕರ್ ಬೇಕು. ಆದರೆ ಅಶಿತಾ ಸಿನಿಮಾಗೆ ಹೋಗಬೇಕೆಂದಿದ್ದಾರೆ. ಅದರಲ್ಲೇ ಬ್ಯುಸಿಯಾಗಿರ್ತಾರೆ. ಹಾಗಾಗಿ ಬೇಡ ಎಂದು ಬಿಟ್ಟರು. ಆದರೆ ಅವರ ಥರಾ ಇರೋ ಹುಡುಗಿ ಸಿಕ್ಕರೆ ಸಾಕು ಎಂದರು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ಸಮೀರ್ ಆಚಾರ್ಯ ಮುಚ್ಚಿಟ್ಟಿದ್ದ ಸತ್ಯ ಬಹಿರಂಗಪಡಿಸಿದ ಚಂದನ್ ಶೆಟ್ಟಿ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಸೀಕ್ರೆಟ್ ರೂಂನೊಳಗಿದ್ದ ಸಮೀರ್ ಆಚಾರ್ಯ ಮತ್ತೆ ಮನೆಯೊಳಗೆ ಬರುವಾಗ ತಾವು ...

news

ಕಿಚ್ಚ ಸುದೀಪ್ ಗೆ ಸದ್ಯದಲ್ಲೇ ಗಂಡು ಮಗುವಾಗುತ್ತಂತೆ?!!

ಬೆಂಗಳೂರು: ವಿಚ್ಛೇದನ ನಿರ್ಧಾರ ಕೈ ಬಿಟ್ಟು ಪತ್ನಿ ಪ್ರಿಯಾ ಜತೆ ಸೇರಿಕೊಂಡ ಕಿಚ್ಚ ಸುದೀಪ್ ಕಡೆಯಿಂದ ...

news

ಟ್ವೀಟರ್ ನಲ್ಲಿ ಅತಿ ಹೆಚ್ಚು ಬೆಂಬಲಿಗರನ್ನು ಪಡೆದ ಭಾರತದ ಮೂರು ಗಣ್ಯ ವ್ಯಕ್ತಿಗಳು ಯಾರು ಗೊತ್ತಾ…?

ಮುಂಬೈ : ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವೀಟರ್ ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರು ...

news

ಬಾಹುಬಲಿ ಖ್ಯಾತಿಯ ಪ್ರಭಾಸ್ ಹೊಸ ವರ್ಷದ ದಿನವೇ ಆಸ್ಪತ್ರೆ ಸೇರಿದ್ದು ಯಾಕಂತೆ...?

ಬೆಂಗಳೂರು : ಬಾಹುಬಲಿ ಚಿತ್ರದ ಖ್ಯಾತ ನಟ ಪ್ರಭಾಸ್ ಅವರು ಭುಜದ ನೋವು ಕಾಣಿಸಿಕೊಂಡ ಕಾರಣ ...

Widgets Magazine
Widgets Magazine