ಬಿಗ್ ಬಾಸ್ ಕನ್ನಡ: ರಿಯಾಜ್ ಪತ್ನಿಯ ಲೊಚ ಲೊಚ ಮುತ್ತು ಜೆಕೆ ಕಣ್ಣಲ್ಲಿ ನೀರು ತರಿಸಿತಂತೆ!

ಬೆಂಗಳೂರು, ಬುಧವಾರ, 10 ಜನವರಿ 2018 (10:18 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ತಮ್ಮ ತಂದೆ ಬಂದಾಗಲೂ ಅಷ್ಟೊಂದು ಅಳದ ಜಯರಾಮ್ ಕಾರ್ತಿಕ್ ರಿಯಾಜ್ ಪತ್ನಿ ಆಯೆಷಾ ಬಂದು ಪತಿಯನ್ನು ಮುದ್ದಿಸುವಾಗ  ಭಾವುಕರಾದರಂತೆ!
 

ಹಾಗಂತ ಸ್ವತಃ ಜೆಕೆ ರಿಯಾಜ್ ಬಳಿ ಹೇಳಿಕೊಂಡರು. ನನ್ನ ತಂದೆ ಬಂದಾಗಲೂ ನಾನು ಇಷ್ಟೊಂದು ಅತ್ತಿರಲಿಲ್ಲ. ಆದರೆ ನೀವು ಪತ್ನಿಯನ್ನು ತಬ್ಬಿ ಅಳುತ್ತಿದ್ದರೆ ಹಿಂದಿಂದೆಲ್ಲಾ ಜ್ಞಾಪಕ ಬಂದು ಕಣ್ಣೀರು ಹಾಕಿದೆ ಎಂದರು ಜೆಕೆ.
 
ಇದಕ್ಕೆ ರಿಯಾಜ್ ಮತ್ತು ಸಮೀರ್ ಆಚಾರ್ಯ ಬೇರೆಯವರಿಗಾಗಿ ಇಷ್ಟೊಂದು ಅಳುವ ನೀವೇ ಒಂದು ಗಟ್ಟಿ ಮನಸ್ಸು ಮಾಡಿ ಮದುವೆಯಾಗ್ರೀ.. ಜೀವನದಲ್ಲಿ ಯಾರಾದ್ರೂ ಜತೆಯಿದ್ದರೆ ಚೆನ್ನಾಗಿರುತ್ತೆ ಎಂದು ಸಲಹೆ ಕೊಟ್ಟರು. ಅದಕ್ಕೆ ಜೆಕೆ ನಕ್ಕುಬಿಟ್ಟರು.
 
ಇದನ್ನು ರಿಯಾಜ್ ಪತ್ನಿ ಬಂದು ಹೋದ ಮೇಲೆ ಮನೆಯವರೆಲ್ಲಾ ಅವರ ಮುತ್ತಿನ ಸುರಿಮಳೆ ಬಗ್ಗೆ ತಮಾಷೆ ಮಾಡಿದರು. ಇನ್ನು ಮುಂದೆ ರಿಯಾಜ್ ಗೆ ಯಾರೂ ಮುತ್ತು ಕೊಡುವ ಹಾಗಿಲ್ಲ. ಅಷ್ಟೊಂದು ಮುತ್ತು ಕೊಟ್ಟಿದ್ದಾರೆ ಆಯೆಷಾ ಎಂದು ಅನುಪಮಾ ಕಾಲೆಳೆದರೆ, ದಿವಾಕರ್ ನಾನು ಇವರ ಮುತ್ತಿನ ಸೌಂಡ್ ಗೆ ಆ ಕಡೆ ತಿರುಗಿಕೊಂಡು ಬಿಟ್ಟೆ ಎಂದು ಕಿಚಾಯಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ಜೆಕೆ ಅಪ್ಪನ ನೋಡಿ ಅನುಪಮಾ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಸ್ಪರ್ಧಿಗಳಿಗೆ ಕುಟುಂಬದವರ ಜತೆ ಮಿಲನದ ಸಮಯ. ಮೊದಲು ಬಂದವರು ...

news

ರಿಯಲ್ ಸ್ಟಾರ್ ಉಪ್ಪಿ ಪುತ್ರಿ ಐಶ್ವರ್ಯಾ ಮಾಡಿದ ಕೆಲಸವೇನು ಗೊತ್ತೇ?!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಎಲ್ಲಾ ವಿಷಯದಲ್ಲೂ ಡಿಫರೆಂಟ್. ಇದೀಗ ಅವರ ಪುತ್ರಿಯೂ ಅಪ್ಪನಿಗಿಂತ ...

news

ದೀಪಕ್ ರಾವ್ ಹಾಗು ಬಶೀರ್ ಅವರ ನಿವಾಸಕ್ಕೆ ಭೇಟಿ ನೀಡಿದ ಇಂದ್ರಜಿತ್ ಲಂಕೇಶ್

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಗಿಡಾದ ಮಂಗಳೂರಿನ ಕಾಟಿಪಳ್ಳದ ದೀಪಕ್ ರಾವ್ ಹಾಗು ಬಶೀರ್ ಅವರ ...

news

ಚಿರಂಜೀವಿ ಸರ್ಜಾ ಅವರ ಅಭಿನಯದ ‘ಸೀಜರ್’ ಚಿತ್ರದ ಟ್ರೇಲರ್ ರಿಲೀಸ್!

ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ಚಿರಂಜೀವಿ ಸರ್ಜಾ ಅವರ ಅಭಿನಯದ ‘ಸೀಜರ್’ ಚಿತ್ರದ ಟ್ರೇಲರ್ ...

Widgets Magazine