ಸಿಹಿಕಹಿ ಚಂದ್ರು ವಿರುದ್ಧ ಪ್ರತಿಭಟನೆ: ಈ ವಾರ ಮನೆಯಿಂದ ಚಂದ್ರು ಔಟ್…?

ಬೆಂಗಳೂರು, ಶುಕ್ರವಾರ, 3 ನವೆಂಬರ್ 2017 (14:51 IST)

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಸಿಹಿಕಹಿ ಚಂದ್ರು ವಿರುದ್ಧ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಪ್ರತಿಭಟನೆ ನಡೆಸಿದೆ.


ಬಿಗ್ ಬಾಸ್ ಕಳೆದ ವಾರ ಒಂದು ಮೊಟ್ಟೆಯ ಕಥೆ ಟಾಸ್ಕ್ ನೀಡಿದ್ದರು. ಈ ಸಂದರ್ಭದಲ್ಲಿ ಆಟವಾಡುವಾಗ ಸಿಹಿಕಹಿ ಚಂದ್ರು ಸಹ ಸ್ಪರ್ಧಿ ದಿವಾಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಸಿದ್ದರು. ಅಲ್ಲದೆ ಈ ಬಗ್ಗೆ ಪ್ರತ್ಯೇಕವಾಗಿ ಕ್ಷಮಾಪಣೆ ಕೂಡ ಕೇಳಿದ್ದರು. ಹೀಗಾಗಿ ಭೋವಿ ಯುವ ವೇದಿಕೆ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿರುವ ಇನ್ನೋವೇಟಿವ್ ಫಿಲ್ಮ್ ಸಿಟಿ ಸೆಟ್ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಕೂಡಲೇ ಸಿಹಿಕಹಿ ಚಂದ್ರು ಕೂಡಲೇ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಅಲ್ಲದೆ ಈ ಕೂಡಲೇ ಚಂದ್ರು ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಬೇಕು ಎಂದು ಒತ್ತಾಯಿಸಿದ್ದರು. ಹೀಗಾಗಿ ಈ ಬಾರಿ ಚಂದ್ರು ಮನೆಯಿಂದ ಹೊರಬರ್ತಾರ ಅಥವಾ ಯಾರು ಹೊರಗೆ ಬರುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮತ್ತದೇ ತಪ್ಪು ಮಾಡಿದ ಸಿಹಿಕಹಿ ಚಂದ್ರು.. ಅಪ್ಪನ ವಿರುದ್ಧ ಮಕ್ಕಳು ಗರಂ..!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸತತವಾಗಿ 2ನೇ ದಿನವೂ ಅದೇ ತಪ್ಪು ನಡೆದ ಪರಿಣಾಮ ಬಿಗ್ ಬಾಸ್ ಮನೆಗೆ ...

news

ಶಾರುಖ್ ಖಾನ್ ಗೆ ವಿಶ್ ಮಾಡಲು ಹೋಗಿ ಮೊಬೈಲ್ ಕಳೆದುಕೊಂಡ ಅಭಿಮಾನಿಗಳು!

ಮುಂಬೈ: ಶಾರುಖ್ ಖಾನ್ ನಿನ್ನೆಯಷ್ಟೇ 52 ನೇ ವರ್ಷದ ಜನ್ಮ ದಿನ ಆಚರಿಸಿಕೊಂಡಿದ್ದರು. ಸಹಜವಾಗಿ ಸ್ಟಾರ್ ನಟನ ...

news

ಹಳೇ ಪ್ರೀತಿ ನೆನೆದು ಕಣ್ಣೀರಿಟ್ಟ ಅನುಪಮಾ… ಮಾಜಿ ಲವರ್ ಹೇಳಿದ್ದೇನು…?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಒಂದೊಂದೇ ಲವ್ ಸ್ಟೋರಿಗಳು ತೆರೆದುಕೊಳ್ಳುತ್ತಿವೆ. ಆದರೆ ಮಾಜಿ ...

news

Rapper ಚಂದನ್ ಶೆಟ್ಟಿಗೆ ಮದುವೆಯಾಗಲು ಹುಡುಗಿ ಇದ್ದರೆ ಹೇಳಿ….!

ಬೆಂಗಳೂರು: ರ್ಯಾಪರ್ ಚಂದನ್ ಶೆಟ್ಟಿ ಯಾರಿಗೆ ಗೊತ್ತಿಲ್ಲ. ಇತ್ತೀಚೆಗೆ ತಮ್ಮ ರ್ಯಾಪ್ ಸಾಂಗ್ ಮೂಲಕ ರಾಜ್ಯ, ...

Widgets Magazine
Widgets Magazine