ಇದು ಸತ್ಯವಂತೆ ರೀ… ಬಿಗ್ ಬಾಸ್ ಮನೆಯಲ್ಲಿ ದೆವ್ವ ಇದ್ಯಂತೆ…!

ಬೆಂಗಳೂರು, ಶನಿವಾರ, 4 ನವೆಂಬರ್ 2017 (20:23 IST)

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಇದೆಯಂತೆ. ಹೌದು ಹೀಗಂತ ಕಂಟೆಸ್ಟೆಂಟ್ ಗಳೇ ಹೇಳಿದ್ದಾರೆ. ಜೆಕೆ ದೆವ್ವವನ್ನ ನೋಡಿದ್ದಾರಂತೆ…


ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಯಾವುದೋ ವಿಷಯ ಚರ್ಚೆ ಮಾಡ್ತಿದ್ದರು. ಆದ್ರೆ ರೂಮಿನಲ್ಲಿದ್ದ ಜೆಕೆ, ಅನುಪಮಾ ಏನೋ ಬೇರೆ ವಿಷಯ ಚರ್ಚೆ ಮಾಡ್ತಿದ್ದರು. ಆಗ ಅಲ್ಲಿ ನಿವೇದಿತಾ ಗೌಡ ಎಂಟ್ರಿಯಾಯ್ತು. ಇದ್ದಕ್ಕಿದ್ದ ಹಾಗೆ ಜೆಕೆ ಸೈಲೆಂಟ್ ಆಗೋದ್ರು.

ಇದನ್ನ ಗಮನಿಸಿದ ಬಾರ್ಬಿ ಡಾಲ್ ಏನಾಯ್ತು ಎಂದಾಗ ಜೆಕೆ ಇಲ್ಲಿ ದೆವ್ವ ಇದೆ. ಸೀರಿಯಸ್ ಆಗಿ ಅಲ್ಲಿ ನೋಡು. ನಂಗೆ ಕಾಣ್ತಿದೆ ಅಂದ್ರು. ಇದನ್ನ ಕೇಳಿದ ನಿವೇದಿತಾ, ಅನುಪಮಾ ಕ್ಷಣಕಾಲ ಭಯಭೀತರಾಗಿದ್ರು. ನಿವೇದಿತಾ ಅಳಲು ಸಹ ಮುಂದಾಗಿದ್ರು. ಮಾತು ಶುರುಮಾಡಿದ ಜೆಕೆ ನನ್ನ ಕಣ್ಣಲ್ಲಿ ನೀರು ಬರ್ತಿದ್ಯಾ ಅಂದಾಗ ನಿವೇದಿತಾ ಹೌದು ಎಂದ್ರು. ನೆಗೆಟಿವ್ ಎನರ್ಜಿ ಇದ್ರೆ ಮಾತ್ರ ಹಾಗೆ ಕಣ್ಣೀರು ಬರೋದು ಜೆಕೆ ಹೇಳಿದ ಕೂಡ್ಲೆ, ಇವತ್ತು ನಾನು ಇಲ್ಲಿ ಮಲಗೋದೆ ಇಲ್ಲ ಎಂದರು. ಆಗ ಜೆಕೆ ನಕ್ಕು ಸುಳ್ಳು ಹೇಳಿದ್ದಾಗಿ ಹೇಳಿ ಸುಮ್ಮನಾದ್ರು.ಇದರಲ್ಲಿ ಇನ್ನಷ್ಟು ಓದಿ :  
ದೆವ್ವ ಬಿಗ್ ಬಾಸ್ ನಿವೇದಿತಾ ಅನುಪಮಾ ಜೆಕೆ Anupama Ghost Biggboss Bbk5 Jk Niveditha

ಸ್ಯಾಂಡಲ್ ವುಡ್

news

ಕಮಲ್ ಹಾಸನ್ ಹಿಂದೂ ಉಗ್ರವಾದ ಹೇಳಿಕೆಗೆ ಧ್ವನಿಗೂಡಿಸಿದ ಪ್ರಕಾಶ್ ರೈ

ನವದೆಹಲಿ: ಬಲಪಂಥೀಯರಲ್ಲೂ ಭಯೋತ್ಪಾದಕರಿದ್ದಾರೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಕಮಲ್ ಹಾಸನ್ ಸಾಲಿಗೆ ...

news

ರಣವೀರ್ ಗೆ ಕೈಕೊಟ್ಟಳಾ ದೀಪಿಕಾ ಪಡುಕೋಣೆ?

ಮುಂಬೈ: ಬಾಲಿವುಡ್ ನ ಮೋಸ್ಟ್ ಸೆನ್ಸೇಷನಲ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಸಂಬಂಧಕ್ಕೆ ...

news

100 ಎಕರೆಯ ಬಾಹುಬಲಿ ಸೆಟ್ ಗತಿ ಏನಾಯ್ತು ಗೊತ್ತಾ?!

ಹೈದರಾಬಾದ್: ಬಾಹುಬಲಿ ಹೆಸರು ಕೇಳಿದರೇನೇ ಭಾರತೀಯ ಸಿನಿಮಾ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರವಾದಂತಾಗುತ್ತದೆ. ...

news

ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾಗೆ ಸ್ಥಾನ

ನ್ಯೂಯಾರ್ಕ್: ಫೋರ್ಬ್ಸ್ ಮ್ಯಾಗ್‌ಜಿನ್ 2017ರ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಬಾಲಿವುಡ್, ...

Widgets Magazine