ಜಗ್ಗೇಶ್ ಈಗ ಸರಿಗಮಪ ಲಿಟಲ್ ಚಾಂಪ್ಸ್ ಜ್ಞಾನೇಶನ ಫ್ಯಾನ್!

ಬೆಂಗಳೂರು, ಗುರುವಾರ, 18 ಜನವರಿ 2018 (08:39 IST)

ಬೆಂಗಳೂರು: ನವರಸನಾಯಕ ಜಗ್ಗೇಶ್ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪಿಯನ್ ಕಾರ್ಯಕ್ರಮದ ಸ್ಪರ್ಧಿ 10 ವರ್ಷದ ಜ್ಞಾನೇಶನ ಅಭಿಮಾನಿಯಾಗಿಬಿಟ್ಟಿದ್ದಾರೆ!
 

ಜ್ಞಾನೇಶನ ಬಡತನದ ಕತೆ ಕೇಳಿ ಕಳೆದ ವಾರವೇ ಕನ್ನಡಿಗರು ಕಣ್ಣೀರು ಹಾಕಿದ್ದರು. ಪುಟ್ಟ ಪೋರನ ಹಾಡಿಗೆ ಇಡೀ ಕರುನಾಡೇ ತಲೆದೂಗಿತ್ತು. ಇದೀಗ ಜಗ್ಗೇಶ್ ತಮ್ಮ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೂಟಿಂಗ್ ನಡುವೆ ಜ್ಞಾನೇಶನನ್ನು ಭೇಟಿಯಾಗಿ ಆತನ ಬಗ್ಗೆ ಹೊಗಳಿದ್ದಾರೆ.
 
ತಮ್ಮ ಕಾರ್ ವ್ಯಾನ್ ಗೆ ಜ್ಞಾನೇಶನನ್ನು ಕರೆಸಿಕೊಂಡ ಜಗ್ಗೇಶ್, ಜ್ಞಾನೇಶನ ಜತೆಗೆ ವಿಡಿಯೋ ಮಾಡಿ, ಹಾಡು ಹಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ನಿನ್ನ ದೊಡ್ಡ ಅಭಿಮಾನಿ ಎಂದ ಜಗ್ಗೇಶ್, ಹಾಡು ಮತ್ತು ಓದಿನ ಕಡೆಗೆ ಗಮನ ಕೊಡು ಎಂದು ಹಾರೈಸಿದರು. ಆಡುವ ವಯಸ್ಸಲ್ಲಿ ಇಷ್ಟೊಂದು ಸಾಧನೆ ಮಾಡಿದ್ದೀಯಾ ನೀನು ನಿಜಕ್ಕೂ ಗ್ರೇಟ್ ಕಣೋ ಎಂದು ಶ್ಲಾಘಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬೇಡದ ರಗಳೆ ಬಗ್ಗೆ ಮಾತನಾಡಲು ಹೋಗಿ ಉಗಿಸಿಕೊಂಡ ಒಳ್ಳೆ ಹುಡುಗ ಪ್ರಥಮ್

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರ ಪೈಕಿ ಬಿಗ್ ಬಾಸ್ ...

news

ಯಾರಿಂದ ತಪ್ಪಿಸಿಕೊಳ್ಳಲು ಕಾಲಿವುಡ್ ನಟ ಸೂರ್ಯ ಅವರು ಚಿತ್ರಮಂದಿರದ ಗೇಟ್ ಹಾರಿದ್ದು...?

ಆಂಧ್ರಪ್ರದೇಶ : ಕಾಲಿವುಡ್ ನಟ ಸೂರ್ಯ ಅವರು ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ...

news

ನಟಿ ಸೋನಂ ಕಪೂರ್ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವವರ ವಿರುದ್ಧ ಕಿಡಿಕಾರಿದ್ದು ಯಾಕೆ?

ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಅವರು ‘ನಿಮ್ಮ ಮದುವೆ ಯಾವಾಗ, ಯಾರ ಜೊತೆ ಮದುವೆ ಮುಂತಾದ ವೈಯಕ್ತಿಕ ...

news

ಬಾಲಿವುಡ್ ನಟ ಹೃತಿಕ್ ರೋಶನ್ ಮತ್ತೊಮ್ಮೆ ಮದುವೆಯಾಗಲಿದ್ದಾರಂತೆ! ವಧು ಯಾರು ಗೊತ್ತಾ....?

ಮುಂಬೈ : ಬಾಲಿವುಡ್ ನಟ ಹೃತಿಕ್ ರೋಶನ್ ಹಾಗು ಸುಸೇನ್ ಖಾನ್ ಇಬ್ಬರು ವಿಚ್ಛೇದನ ಪಡೆದು ದೂರವಾಗಿದ್ದು, ಈಗ ...

Widgets Magazine
Widgets Magazine