ಪುಟ್ಟಗೌರಿ ರಂಜಿನಿ ಕಾಲೆಳೆದ ಕಿಚ್ಚ ಸುದೀಪ್

ಬೆಂಗಳೂರು, ಮಂಗಳವಾರ, 2 ಜನವರಿ 2018 (09:53 IST)

ಬೆಂಗಳೂರು: ಭಾನುವಾರ ಬಂತೆಂದರೆ ಕಿಚ್ಚ ಸುದೀಪ್ ಕಲರ್ಸ್ ಸೂಪರ್ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರದಲ್ಲಿ ಸೆಲೆಬ್ರಿಟಿಗಳ ಜತೆ ಅಡುಗೆ ಮಾಡ್ತಾರೆ. ಅದೇ ರೀತಿ ಈ ವಾರ ಪುಟ್ಟಗೌರಿ ಧಾರವಾಹಿಯ ರಂಜಿನಿ ಮತ್ತು ನಾಗಕನ್ನಿಕೆ ಧಾರವಾಹಿಯ ಅದಿತಿ ಜತೆ ಕಿಚನ್ ಟೈಮ್ ಏರ್ಪಡಿಸಿದ್ದರು.
 

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಪುಟ್ಟಗೌರಿ ಧಾರವಾಹಿಯಲ್ಲಿ ಹುಲಿ ಅಟ್ಟಿಸಿಕೊಂಡು ಬಂದ ಕತೆ ಹೇಳಿ ಪುಟ್ಟಗೌರಿ ಕಾಲೆಳೆದರು.  ಪುಟ್ಟಗೌರಿ ಧಾರವಾಹಿಯಲ್ಲಿ ಕೆಲವು ತಿಂಗಳುಗಳ ಹಿಂದೆ ಪುಟ್ಟಗೌರಿ ಬೆಟ್ಟದಿಂದ ಬಿದ್ದರೂ ಕೂದಲೂ ಕೊಂಕದೇ ಬದುಕುಳಿಯುವುದು, ನಂತರ ಹುಲಿ ಜತೆ ಸೆಣಸುವ ದೃಶ್ಯಗಳಿತ್ತು. ಇದು ಭಾರೀ ಟ್ರೋಲ್ ಗಳೊಗಾಗಿತ್ತು.
 
ಈ ಬಗ್ಗೆ ಕಿಚ್ಚ ಸುದೀಪ್ ಕೂಡಾ ಪುಟ್ಟಗೌರಿ ಪಾತ್ರಧಾರಿ ರಂಜಿನಿಯನ್ನು ಕೇಳಿ ತಮಾಷೆ ಮಾಡಿದರು. ಅದು ಹೇಗೆ ಹುಲಿಗಿಂತ ಫಾಸ್ಟ್ ಆಗಿ ಓಡಿದ್ರಿ? ಹುಲಿ ಅಟ್ಟಿಸಿಕೊಂಡು ಬರುವಾಗ ಅಷ್ಟು ಫಾಸ್ಟಾಗಿ ಓಡೋದು ಅಲ್ಲದೇ ಸೀರೆ ಉಟ್ಟುಕೊಂಡೇ ಮರ ಹತ್ತಿದ್ದು ಹೇಗೆ? ಹುಲಿ ನಿಮಗೆ ಏನೂ ಮಾಡದೇ ಹೋಗಿದ್ದು ಹೇಗೆ ಎಂದು ಕಾಲೆಳೆದರು. ಕೊನೆಗೆ ಪುಟ್ಟಗೌರಿ ಕೈಯಲ್ಲಿ ಒಂದು ಹಾಡು ಹಾಡಿಸುತ್ತಾ ಅಡುಗೆ ಮಾಡಿದರು ಕಿಚ್ಚ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್: ನಿಜಕ್ಕೂ ಅಭಿಮಾನಿಗಳಿಗೆ ದಿವಾಕರ್ ಅವಮಾನ ಮಾಡಿದ್ದು ನಿಜವಾ?!

ಬೆಂಗಳೂರು: ಸಾಮಾನ್ಯ ಜನರಾಗಿ ಮನೆ ಪ್ರವೇಶಿಸಿದ ದಿವಾಕರ್ ಇದೀಗ ಸೀಕ್ರೆಟ್ ರೂಂನಲ್ಲಿರುವುದು ಅಭಿಮಾನಿಗಳಿಗೆ ...

news

ಹ್ಯಾಪಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ದಿವಾಕರ್ ಕೇಳಿದ ವಸ್ತು ಎಲ್ಲರಿಗೂ ಆಶ್ಚರ್ಯ ಅನಿಸಿದೆಯಂತೆ!

ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ದಿವಾಕರ್ ಅವರು ಸಿಕ್ರೇಟ್ ರೂಂ ನಲ್ಲಿರುವ ವಿಷಯ ...

news

ಬಾಲಿವುಡ್ ನ ನಟ ಅಮಿತಾಬ್ ಬಚ್ಚನ್ ಅವರು ಆಫ್ರೋಜ್ ಶಾ ಅವರಿಗೆ ನೀಡಿದ ಉಡುಗೊರೆ ಏನು ಗೊತ್ತಾ...?

ಮುಂಬೈ : ಬಾಲಿವುಡ್ ನ ನಟ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಪರಿಸರವಾದಿ ಆಫ್ರೋಜ್ ಶಾ ಅವರಿಗೆ ...

news

ಶಿಲ್ಪಾ ಶೆಟ್ಟಿ ಸಖತ್ ಹಾಟ್ ಆಗಿರುವ ಫೋಟೊ ನೋಡಿದ್ರಾ…?

ದುಬೈ: ಹೊಸ ವರುಷದ ಆಚರಣೆಗೆಂದು ಕೆಲವು ಬಾಲಿವುಡ್ ಮಂದಿ ಹಾರುವುದೇ ವಿದೇಶಕ್ಕೆ. ದೀಪಿಕಾ, ರಣವೀರ್ ...

Widgets Magazine