ಬೇಡದ ರಗಳೆ ಬಗ್ಗೆ ಮಾತನಾಡಲು ಹೋಗಿ ಉಗಿಸಿಕೊಂಡ ಒಳ್ಳೆ ಹುಡುಗ ಪ್ರಥಮ್

ಬೆಂಗಳೂರು, ಗುರುವಾರ, 18 ಜನವರಿ 2018 (08:36 IST)

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವವರ ಪೈಕಿ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಕೂಡಾ ಒಬ್ಬರು. ಆದರೆ ಇದೀಗ ತಮಗೆ ಸಂಬಂಧಪಡದ ವಿಷಯದ ಬಗ್ಗೆ ಮಾತನಾಡಿ ಜಾಡಿಸಿಕೊಂಡಿದ್ದಾರೆ.
 

ಹಿಂದೂ ಸಂಘಟನೆ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿ, ನಂತರ ತಮ್ಮನ್ನು ಎನ್ ಕೌಂಟರ್ ಮಾಡಲು ಯೋಜನೆ ನಡೆದಿತ್ತು ಎಂದು ಆರೋಪಿಸಿದ್ದರು. ಇದರ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡ ಪ್ರಥಮ್ ಬಿಜೆಪಿ ಪರ ಮಾತನಾಡಿದ್ದಾರೆ.
 
ಪ್ರವೀಣ್ ತೊಗಾಡಿಯಾ ಈ ರೀತಿ ವಿನಾಕಾರಣ ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡಿದರೆ ಕರ್ನಾಟಕದಲ್ಲಿ ಹಿಂದೂಗಳ ಮತ ವಿಭಜನೆಯಾಗುತ್ತದೆ ಎಂದು ಪ್ರಥಮ್ ಬರೆದುಕೊಂಡಿದ್ದರು. ಇದರ ಬಗ್ಗೆ ಕೆಲವರು ಕಾಮೆಂಟ್ ಮಾಡಿದ್ದು, ನಿಮಗೆ ಯಾಕೆ ಬೇಕು ಇಲ್ಲದ ಉಸಾಬರಿ ಎಂದು ಪ್ರಶ್ನಿಸಿದ್ದಾರೆ. ಈಗ ನಿಮ್ಮ ಬೆಂಬಲ ಯಾರಿಗೆ ಎನ್ನುವುದು ಸ್ಪಷ್ಟವಾಯಿತು ಎಂದು ಕೆಲವರು  ಹೇಳಿದರೆ ಇನ್ನು ಕೆಲವರು ಬಿಜೆಪಿಗೆ ಬಕೆಟ್ ಹಿಡಿಯುತ್ತಿರುವುದರ ಹಿಂದಿನ ಉದ್ದೇಶವೇನು ಎಂದು ಜಾಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಯಾರಿಂದ ತಪ್ಪಿಸಿಕೊಳ್ಳಲು ಕಾಲಿವುಡ್ ನಟ ಸೂರ್ಯ ಅವರು ಚಿತ್ರಮಂದಿರದ ಗೇಟ್ ಹಾರಿದ್ದು...?

ಆಂಧ್ರಪ್ರದೇಶ : ಕಾಲಿವುಡ್ ನಟ ಸೂರ್ಯ ಅವರು ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ...

news

ನಟಿ ಸೋನಂ ಕಪೂರ್ ವೈಯಕ್ತಿಕ ಪ್ರಶ್ನೆಗಳನ್ನು ಕೇಳುವವರ ವಿರುದ್ಧ ಕಿಡಿಕಾರಿದ್ದು ಯಾಕೆ?

ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಅವರು ‘ನಿಮ್ಮ ಮದುವೆ ಯಾವಾಗ, ಯಾರ ಜೊತೆ ಮದುವೆ ಮುಂತಾದ ವೈಯಕ್ತಿಕ ...

news

ಬಾಲಿವುಡ್ ನಟ ಹೃತಿಕ್ ರೋಶನ್ ಮತ್ತೊಮ್ಮೆ ಮದುವೆಯಾಗಲಿದ್ದಾರಂತೆ! ವಧು ಯಾರು ಗೊತ್ತಾ....?

ಮುಂಬೈ : ಬಾಲಿವುಡ್ ನಟ ಹೃತಿಕ್ ರೋಶನ್ ಹಾಗು ಸುಸೇನ್ ಖಾನ್ ಇಬ್ಬರು ವಿಚ್ಛೇದನ ಪಡೆದು ದೂರವಾಗಿದ್ದು, ಈಗ ...

news

ದರ್ಶನ್ ಅವರ ಲ್ಯಾಂಬೊರ್ಗಿನಿ ಕಾರಲ್ಲಿ ಬರುವಾಗ ಪೊಲೀಸರು ತಡೆದದ್ದು ಯಾಕೆ ಗೊತ್ತಾ...?

ಮೈಸೂರು : ದರ್ಶನ್ ಅವರು ಲ್ಯಾಂಬೊರ್ಗಿನಿ ಕಾರನ್ನು ಖರೀದಿಸಿದ ವಿಷಯ ಎಲ್ಲರಿಗೂ ತಿಳಿದಿದೆ ಇದೆ. ಅವರು ಈ ...

Widgets Magazine
Widgets Magazine