ದುರಹಂಕಾರಿಗಳು ಮನೆಯಿಂದ ಹೊರಬರಲಿ: ಆಶಿತಾ, ಜಗನ್ ವಿರುದ್ಧ ತಿರುಗಿ ಬಿದ್ದ ಜನ

ಬೆಂಗಳೂರು, ಸೋಮವಾರ, 6 ನವೆಂಬರ್ 2017 (17:09 IST)

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿರುವ ಆಶಿತಾ ಹಾಗೂ ಜಗನ್ ಮೇಲೆ ವೀಕ್ಷಕರು ಸಖತ್ ಗರಂ ಆಗಿದ್ದಾರೆ. ಮೊದಲು ಮನೆಯಿಂದ ಅವರಿಬ್ಬರು ಹೋಗಲಿ ಎನ್ನುತ್ತಿದ್ದಾರೆ.


ಮನೆಯಲ್ಲಿ ಇವರಿಬ್ಬರ ವರ್ತನೆ ಸರಿಯಲ್ಲ. ಜಯ ಶ್ರೀನಿವಾಸನ್ ಸೇರಿದಂತೆ ಮನೆಯ ಕೆಲ ಸದಸ್ಯರಿಗೆ ಮರ್ಯಾದೆ ನೀಡುತ್ತಿಲ್ಲ. ಕೇವಲವಾಗಿ ಮಾತನಾಡುವ ಆಶಿತಾ ವರ್ತನೆ ವೀಕ್ಷಕರಿಗೆ ತುಂಬಾ ಬೇಸರ ತರಿಸಿದೆ. ಹಿರಿಯ ವಯಸ್ಸಿನವರಿಗೆ ಗೌರವ ನೀಡುತ್ತಿಲ್ಲ ಎಂದು ನೆಟಿಜನರು ಆರೋಪಿಸಿದ್ದಾರೆ.

ಒಂದು ಟಾಸ್ಕ್ ನಲ್ಲಿ ರಿಯಾಜ್ ಗೆಲುವು ಸಾಧಿಸಿದಾಗ ಆಶಿತಾ `ಶಿಟ್’ ಎಂದು ಹೇಳಿದ್ದರು. ಅಲ್ಲದೆ ಪದೇ ಪದೇ ಜಯ ಶ್ರೀನಿವಾಸನ್ ವಿರುದ್ಧ ತಿರುಗಿ ಬೀಳ್ತಿರೋದಕ್ಕೆ ಆಕೆಯನ್ನ `ಬಕೆಟ್’ಗೆ ಹೋಲಿಸಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇವರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ದುರಹಂಕಾರಿಗಳು ಮನೆಯಿಂದ ಆದಷ್ಟು ಬೇಗ ಹೊರ ಬರಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಸ್ಪರ್ಧಿಗಳಲ್ಲಿ ಇವರಿಬ್ಬರೇ ಅತಿ ಹೆಚ್ಚು ಕೆಟ್ಟ ಸ್ಪರ್ಧಿಗಳು ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಡೆಗೂ ಲವ್ ನಲ್ಲಿ ಬಿದ್ದ Rapper ಚಂದನ್ ಶೆಟ್ಟಿ… ಹುಡುಗಿ ಯಾರು ಗೊತ್ತಾ…?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಲವ್ ಸ್ಟೋರಿ ಶುರುವಾಗುವ ೆಲ್ಲಾ ಲಕ್ಷಣಗಳು ...

news

ಕಿಚ್ಚನ ಕಿಚನ್ ಗೆ ಯಾವ್ ಸೆಲೆಬ್ರಿಟಿ ಬಂದಿದ್ರು… ಏನ್ ಡಿಶ್ ಮಾಡಿದ್ರು

ಬೆಂಗಳೂರು: ಬಿಗ್ ಬಾಸ್‌ ಮನೆಯಲ್ಲಿ ಕಿಚ್ಚನ ಕಿಚನ್ ನಿನ್ನೆ ಸೂಪರ್ ಆಗಿತ್ತು. ವೆಜ್ ನಾನ್ ವೆಜ್ ರೆಸಿಪಿ ...

news

ದಯಾಳ್ ಮನೆಯಿಂದ ಔಟ್: ಅನುಪಮಾ ಕಣ್ಣೀರಿಗೆ ಕರಗಿದ ಜಗನ್

ಬೆಂಗಳೂರು: ಮೂರೇ ವಾರದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆದುಕೊಂಡಂತಿದೆ.

news

ಪಾರ್ಟಿಯಲ್ಲಿ `ಪದ್ಮಾವತಿ’ಗೆ ಮುತ್ತಿಟ್ಟಿದ್ಯಾರು ಗೊತ್ತಾ…?

ಮುಂಬೈ: ದೀಪಿಕಾ ಪಡಕೋಣೆ ನಟಿಸಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರ ಬಿಡುಗಡೆಯ ...

Widgets Magazine
Widgets Magazine