ಬೆಂಗಳೂರು: ಇತ್ತೀಚೆಗೆ ಹಿರಿಯ ಸಿನಿ ಕಲಾವಿದರು ಕಿರುತೆರೆಯತ್ತ ಮುಖ ಮಾಡುವುದು ಹೊಸದೇನಲ್ಲ. ಹಿರಿಯ ನಟಿಯರು ಹೆಚ್ಚಾಗಿ ಕಿರುತೆರೆಯಲ್ಲಿ ತಾಯಿ, ಅತ್ತೆ ಇಲ್ಲವೇ ವಿಲನ್ ಪಾತ್ರಧಾರಿಗಳಾಗುತ್ತಿದ್ದಾರೆ.ಅದರ ನಡುವೆಯೇ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಂ.1 ನಾಯಕಿ ನಟಿಯಾಗಿ ಮಿಂಚಿದ್ದ ಶ್ರುತಿ ಈಗ ಕಿರುತೆರೆಯ ಧಾರವಾಹಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ.ಉದಯ ಟಿವಿಯಲ್ಲಿ ಪ್ರಸಾರವಾಗುವ ಸೇವಂತಿ ಧಾರವಾಹಿಯ ನೂರನೇ ಸಂಚಿಕೆಯಲ್ಲಿ ಶ್ರುತಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಆದರೆ ಶ್ರುತಿ ಮುಂದೆಯೂ ಧಾರವಾಹಿಯಲ್ಲಿ ಕಂಟಿನ್ಯೂ ಆಗುತ್ತಾರಾ, ಒಂದೇ ಸಂಚಿಕೆಗಾಗಿ ಬಂದಿದ್ದಾರಾ