ಬಿಗ್ ಬಾಸ್ ಮನೆಯಲ್ಲಿ ಬಾಯ್ತಪ್ಪಿ ಆಡಿದ ಮಾತಿಗೆ ಕ್ಷಮೆ ಕೋರಿದ ಸಿಹಿಕಹಿ ಚಂದ್ರು

ಬೆಂಗಳೂರು, ಗುರುವಾರ, 2 ನವೆಂಬರ್ 2017 (11:11 IST)

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಮನೆಯೊಳಗೆ ಬಾಯ್ತಪ್ಪಿನಿಂದ ಭೋವಿ ಜನಾಂಗಕ್ಕೆ ನೋವುಂಟು ಮಾಡುವ ಹೇಳಿಕೆ ನೀಡಿದ್ದ ಸಿಹಿ ಕಹಿ ಚಂದ್ರು ಕ್ಷಮೆ ಯಾಚಿಸಿದ್ದಾರೆ.


 
ಸಹ ಸ್ಪರ್ಧಿ ದಿವಾಕರ್ ಜತೆಗೆ ಕಿಚನ್ ಏರಿಯಾದಲ್ಲಿ ಮಾತನಾಡುವಾಗ ‘ವಡ್ಡ’ ಎಂದು ಸಿಹಿ ಕಹಿ ಚಂದ್ರು ಪದ ಪ್ರಯೋಗ ಮಾಡಿದ್ದರು. ಅದು ಒರಟ ಎನ್ನುವುದಕ್ಕೆ ಬಳಸಿದ್ದೆ ಎಂದು ಸಮಜಾಯಿಷಿ ಕೊಟ್ಟಿದ್ದರು.
 
ಆದರೆ ಸಿಹಿ ಕಹಿ ಚಂದ್ರು ಅವರ ಈ ಪದ ಪ್ರಯೋಗ ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ಕೆಂಗಣ್ಣಿಗೆ ಗುರಿಯಾಗಿದ್ದು, ಬಿಗ್ ಬಾಸ್ ಮನೆಯಿರುವ ಇನೋವಾ  ಫಿಲಂ ಸಿಟಿ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
 
ಈ ಘಟನೆಯ ನಂತರ ಚಂದ್ರು ಅವರನ್ನು ಕನ್ ಫೆಷನ್ ರೂಂಗೆ ಕರೆಸಿಕೊಂಡ ಬಿಗ್  ಬಾಸ್ ಘಟನೆ ಬಗ್ಗೆ ಏನಾದರೂ ಹೇಳಲು ಬಯಸುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರು, ನಾನು ಯಾರನ್ನೂ ನೋಯಿಸುವ ಉದ್ದೇಶದಿಂದ ಆ ಪದ ಬಳಸಿರಲಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸಾಹಿತ್ಯ ಪತಿಯಾದ್ರು ಲೂಸ್ ಮಾದ ಯೋಗಿ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಲೂಸ್ ಮಾದ ಯೋಗಿ ಇಂದು ತಮ್ಮ ಬಹುಕಾಲದ ಗೆಳತಿ ಸಾಹಿತ್ಯ ಜತೆ ...

news

ನಟಿ ಪ್ರಿಯಾಂಕಾ ಚೋಪ್ರಾ ಮನೆ ಪಕ್ಕದಲ್ಲೇ ನಡೆದಿತ್ತು ಆ 8 ಮಂದಿಯ ಮಾರಣಹೋಮ!

ನ್ಯೂಯಾರ್ಕ್: ನ್ಯೂಯಾರ್ಕ್ ನಲ್ಲಿ ನಿನ್ನೆ 8 ಜನರ ಸಾವಿಗೆ ಕಾರಣವಾಗಿದ್ದ ಭಯೋತ್ಪಾದಕ ಕೃತ್ಯ ನಡೆದಿದ್ದು ...

news

ಟ್ವಿಟರ್ ನಲ್ಲಿ ಎಡವಟ್ಟು ಮಾಡಿ ನಂತರ ತಿದ್ದಿಕೊಂಡ ಕಿಚ್ಚ ಸುದೀಪ್

ಬೆಂಗಳೂರು: ರಾಜ್ಯೋತ್ಸವ ಪ್ರಯುಕ್ತ ತಮ್ಮ ಟ್ವಿಟರ್ ಪೇಜ್ ನಲ್ಲಿ ಸಂದೇಶ ಬರೆಯುವಾಗ ಕೊಂಚ ಎಡವಟ್ಟು ...

news

ಪುನೀತ್ ರಾಜ್‌ಕುಮಾರ್‌ ಕನ್ನಡ ರಾಜ್ಯೋತ್ಸವ ಉಡುಗೊರೆ ವಿಡಿಯೋ ವೈರಲ್(ತಪ್ಪದೆ ನೋಡಿ )

ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನದಂದು ಪವರ್ ಸ್ಟಾರ್ ಕನ್ನಡಿಗರಿಗೆ ನೀಡಿದ ಉಡುಗೊರೆ ಫೇಸ್‌ಬುಕ್‌ನಲ್ಲಿ ...

Widgets Magazine
Widgets Magazine