ಸಂಜು ಮತ್ತು ನಾನು ಧಾರವಾಹಿ ಕತೆ ಮುಂದೇನು? ನಿರ್ದೇಶಕರು ಏನಂತಾರೆ?

Bangalore, ಸೋಮವಾರ, 24 ಜುಲೈ 2017 (11:36 IST)

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂಜು ಮತ್ತು ನಾನು ಧಾರವಾಹಿಯ ಗಲಾಟೆ ಇನ್ನೂ ಮುಂದುವರಿದಿದೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಧಾರವಾಹಿ ನಿರ್ದೇಶಕ ರಾಜೇಶ್ ಮಾವಳ್ಳಿ ತಮಗೆ ಈ ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ ಎಂದಿದ್ದಾರೆ.


 
ಅವರಿಬ್ಬರು ಸೆಟ್ ನಲ್ಲಿ ಗಲಾಟೆ ಮಾಡುತ್ತಿದ್ದಾಗ ನಿಮ್ಮದು ಏನೇ ಭಿನ್ನಾಭಿಪ್ರಾಯಗಳಿದ್ದರೂ, ಸೆಟ್ ನಿಂದ ಹೊರಗೆ ಮಾಡಿಕೊಳ್ಳಿ. ಆದರೆ ಇಲ್ಲಿ ಏನೂ ಬೇಡ ಎಂದಿದ್ದೆ. ಅವರಿಬ್ಬರು ಜಗಳವಾಡುವುದನ್ನು ನಾನು ನೋಡಿದ್ದೆ. ಆದರೆ ತೊಡೆಗೆ ಕಚ್ಚಿದ್ದು ತನಗೆ ಗೊತ್ತಿಲ್ಲ ಎಂದು ರಾಜೇಶ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
 
ಅಲ್ಲದೆ, ಈ ಬಗ್ಗೆ ತಾನು ಹೆಚ್ಚೇನೂ ಹೇಳಲು ಬಯಸುವುದಿಲ್ಲ. ಧಾರವಾಹಿ ಮುಂದುವರಿಯಬೇಕು. ಪ್ರಕರಣದ ಬಗ್ಗೆ ಪೊಲೀಸ್ ದೂರು ದಾಖಲಾಗುವುದರಿಂದ, ಅದೇನೇ ಇದ್ದರೂ, ಅದನ್ನು ಚಾನೆಲ್ ಮುಖ್ಯಸ್ಥರೊಂದಿಗೆ ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದುವರೆಗೆ ಇಬ್ಬರೂ ನಮ್ಮ ಕೆಲಸಕ್ಕೆ ತೊಂದರೆ ಮಾಡಿರಲಿಲ್ಲ. ಆದರೆ ಇಬ್ಬರೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಅವರಿಬ್ಬರ ನಡುವೆ ಏನು ವೈಮನಸ್ಯವಿತ್ತೋ ನಮಗೆ ಗೊತ್ತಿಲ್ಲ. ಅದೇನೇ ಇದ್ದರೂ, ನಮಗೆ ಕೆಲಸ ಮಾಡೋದು, ಮುಗಿಸಿಕೊಡೋದು ಅಷ್ಟೇ ಅಲ್ವಾ ಎಂದು ನಿರ್ದೇಶಕರು ಪ್ರಶ್ನಿಸಿದ್ದಾರೆ.
 
ಅಲ್ಲದೆ ತಮ್ಮ ಸೆಟ್ ನಲ್ಲಿ ಯಾರೂ ಈ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಘಟನೆ ಬಗ್ಗೆ ಮಾತನಾಡಿ ಧಾರವಾಹಿಗೆ ತೊಂದರೆ ಮಾಡುವುದು ನಮಗೆ ಇಷ್ಟವಿಲ್ಲ ಎಂದಿರುವ ನಿರ್ದೇಶಕರು, ಯಾರ ಬಗ್ಗೆಯೂ ಅಭಿಪ್ರಾಯ ಹೇಳಲ್ಲ ಎಂದಿದ್ದಾರೆ.
 
ಇದನ್ನೂ ಓದಿ..  ನಟ ದಿಲೀಪ್ ಗೆ ಹೈಕೋರ್ಟ್ ನಲ್ಲೂ ಸಿಗಲಿಲ್ಲ ಬಿಡುಗಡೆಯ ಭಾಗ್ಯ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸಂಜು ಮತ್ತು ನಾನು ಧಾರವಾಹಿ ಭುವನ್ ಪ್ರಥಮ್ ರಾಜೇಶ್ ಮಾವಳ್ಳಿ ಕಲರ್ಸ್ ಕನ್ನಡ ವಾಹಿನಿ ಕನ್ನಡ ಕಿರುತೆರೆ Bhuvan Pratham Rajesh Mavalli Kannada Tv Colors Kannada Channel Sanju Matthu Nanu

ಸ್ಯಾಂಡಲ್ ವುಡ್

news

ನಟ ದಿಲೀಪ್ ಗೆ ಹೈಕೋರ್ಟ್ ನಲ್ಲೂ ಸಿಗಲಿಲ್ಲ ಬಿಡುಗಡೆಯ ಭಾಗ್ಯ

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ದಿಲೀಪ್ ...

news

ಭುವನ್ ತೊಡೆಗೆ ಕಚ್ಚಿದರಾ ಪ್ರಥಮ್..?

ಬಿಗ್ ಬಾಸ್`ನಲ್ಲಿ ಗಲಾಟೆ ಮೂಲಕ ಸುದ್ದಿ ಮಾಡುತ್ತಿದ್ದ ಪ್ರಥಮ್ ಧಾರಾವಾಹಿ ಶೂಟಿಂಗ್ ವೇಳೆಯೂ ಗಲಾಟೆ ...

news

ಬಿಗ್ ಬಾಸ್ ನಿಂದ ಹೊರ ನಡೆದ ಮುಮೈತ್​ ಖಾನ್

ತೆಲುಗು ಚಿತ್ರರಂಗದಲ್ಲಿ ಕೇಳಿಬಂದಿದ್ದ ಡ್ರಗ್ಸ್ ಸೇವನೆ ಪ್ರಕರಣ ಇದೀಗ ಬಿಗ್ ಬಾಸ್ ಶೋ ಮೇಲೂ ತನ್ನ ಕರಿ ...

news

ಭೀಮನ ಅಮಾವಾಸ್ಯೆ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ

ಭೀಮನ ಅಮಾವಾಸ್ಯೆ ಮಹಿಳೆಯರು ಆಚರಿಸುವ ಅತ್ಯಂತ ಮಹತ್ವ ಪೂರ್ಣ ಹಬ್ಬಗಳಲ್ಲೊಂದು. ದಕ್ಷಿಣದಲ್ಲಿ ಇದರ ಮಹತ್ ...

Widgets Magazine