ದೇಶ ಬಿಡುವ ಮುನ್ನ ಅರುಣ್ ಜೇಟ್ಲಿಯನ್ನು ಭೇಟಿ ಮಾಡಿದ್ದೆ ; ಸ್ಪೋಟಕ ಮಾಹಿತಿ ಹೊರಹಾಕಿದ ಮಲ್ಯ

ಲಂಡನ್, ಗುರುವಾರ, 13 ಸೆಪ್ಟಂಬರ್ 2018 (07:03 IST)

ಲಂಡನ್ : ದೇಶದ ಬ್ಯಾಂಕ್‍ ಗಳಿಂದ ಸಾಲಪಡೆದು ಮರುಪಾವತಿಸದೆ ವಂಚನೆ ಮಾಡಿ ದೇಶ ಬಿಟ್ಟು ಪರಾರಿಯಾದ ಮದ್ಯದ ದೊರೆ ಈಗ ಸ್ಪೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.


ಭಾರತಕ್ಕೆ ಮಲ್ಯರನ್ನು ಹಸ್ತಾಂತರ ಮಾಡುವ ಕುರಿತು ಲಂಡನ್ ನ್ಯಾಯಾಲಯದಲ್ಲಿ ನಡೆದ ಪ್ರಕರಣದ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ  ವಿಜಯ್ ಮಲ್ಯ, ತಾನು ಭಾರತವನ್ನು ತೊರೆಯುವ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಬ್ಯಾಂಕ್‍ಗಳಿಗೆ ನೀಡಬೇಕಿದ್ದ ಹಣ ಮರುಪಾವತಿ ಬಗ್ಗೆ ಮಾತುಕತೆ ನಡೆಸಿದ್ದಾಗಿ ಹೇಳಿ ಹೊಸ ಬಾಂಬ್ ಸಿಡಿಸಿದ್ದಾರೆ.


ವಿಜಯ್ ಮಲ್ಯರ ಹೇಳಿಕೆ ಹೊರ ಬೀಳುತ್ತಿದಂತೆ ರಾಷ್ಟ್ರ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಕೇಂದ್ರ ಸರ್ಕಾರದ ವಿರುದ್ದ ಜನತೆ ಹಾಗೂ ಪ್ರತಿ ಪಕ್ಷಗಳು ಹರಿಹಾಯುತ್ತಿದ್ದಾವೆ.ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮಲ್ಯ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. 2014ರ ವರೆಗೂ ವಿಜಯ್ ಮಲ್ಯರಿಗೆ ನನ್ನ ಭೇಟಿಗೆ ಅವಕಾಶವನ್ನೇ ನೀಡಿಲ್ಲ ಎಂದಾದರೇ ಭೇಟಿ ಮಾಡಿದ್ದಾರೆ ಎಂಬ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹು-ಧಾ ಮಹಾನಗರ ಪಾಲಿಕೆಯ ಸ್ವಚ್ಚ ಭಾರತ ಮಿಷನ್ ರಾಯಭಾರಿಗಳಾಗುತ್ತಾರಾ ಈ ನಟರು

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸ್ವಚ್ಚ ಭಾರತ ಮಿಷನ್ ರಾಯಭಾರಿಗಳಾಗುವಂತೆ ಸ್ಯಾಂಡಲ್ ...

news

ಈ ಮಾಡೆಲ್ ತನ್ನ ಸ್ತನದ ಗಾತ್ರ ಹೆಚ್ಚಿಸಿಕೊಂಡಿದ್ದು ಹೇಗಂತೆ ಗೊತ್ತಾ?

ಆಸ್ಟ್ರೇಲಿಯಾ : ಹಾಲಿವುಡ್ ಖ್ಯಾತ ಮಾಡೆಲ್ ಒಬ್ಬರು ಒಂದು ಸೂಪರ್ ಆಹಾರವನ್ನು ಸೇವಿಸುವುದರ ಮೂಲಕ ತನ್ನ ...

news

ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ; ಕೋಡಿ ಮಠದ ಶ್ರೀಗಳಿಂದ ಭವಿಷ್ಯ

ಹಾಸನ : ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಇದೆ ಎಂದು ಮಠದ ಸ್ವಾಮೀಜಿ ...

news

ಯುವತಿಯ ಅರೆನಗ್ನ ವಿಡಿಯೋವನ್ನು ಅಪ್ಲೋಡ್ ಮಾಡಿದ ಮಾಜಿ ಪ್ರಿಯತಮ

ಅಸ್ಸಾಂ : ಮಾಜಿ ಪ್ರಿಯತಮ ತನ್ನ ಅರೆನಗ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ...

Widgets Magazine