ಬೆಂಗಳೂರು: ನಾನು 6.5 ಕೋಟಿ ಜನರ ಹಂಗಲ್ಲಿ ಇಲ್ಲ, ಕಾಂಗ್ರೆಸ್ ಮುಲಾಜಿನಲ್ಲಿ ಇದ್ದೇನೆ ಎಂಬ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.ನನಗೆ 6.5 ಕೋಟಿ ಕನ್ನಡಿಗರನ್ನು ಅವಮಾನಿಸುವ ಉದ್ದೇಶವಿರಲಿಲ್ಲ. ನನ್ನ ಅಧಿಕಾರ ನನ್ನ ಸಹಭಾಗಿ ಪಕ್ಷದ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದು ಹೇಳಲು ಹೊರಟಿದ್ದೆ ಅಷ್ಟೇ. ಮೈತ್ರಿ ಸರ್ಕಾರ ಯಶಸ್ವಿಯಾಗಬೇಕಾದರೆ ಇನ್ನೊಂದು ಪಕ್ಷದ ಸಹಕಾರ ಬೇಕಾಗುತ್ತದೆ. ನನ್ನ ಹೇಳಿಕೆಯ ಅರ್ಥವೂ ಇದೇ ಆಗಿತ್ತು ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.ಸಿಎಂ