ಯಲ್ಲಾಪುರ ಶಾಸಕರಿಗೆ ಬಿಜೆಪಿ ಆಫರ್ ನೀಡಿದ ಅಡಿಯೋ ಬಿಡುಗಡೆ ಮಾಡಿದ ಉಗ್ರಪ್ಪ

ಬೆಂಗಳೂರು, ಶನಿವಾರ, 19 ಮೇ 2018 (12:22 IST)

ಬೆಂಗಳೂರು: ಯಾಚನೆ ಸಂದರ್ಭ ಬಿಜೆಪಿ ಪರ ಮತ ಚಲಾಯಿಸುವಂತೆ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಗೆ ಬಂಪರ್ ಆಫರ್ ನೀಡುವ ಬಿಜೆಪಿ ನಾಯಕರ ಮಾತುಕತೆಯ ಅಡಿಯೋ ಒಂದನ್ನು ಕಾಂಗ್ರೆಸ್ ಎಂಎಲ್ ಸಿ ವಿಎಸ್ ಉಗ್ರಪ್ಪ ಬಿಡುಗಡೆ ಮಾಡಿದ್ದಾರೆ.
 
ವಿಧಾನಸಭೆ ಕಲಾಪ ನಡೆಯುತ್ತಿರಬೇಕಾದರೇ, ಉಗ್ರಪ್ಪ ಬಿಜೆಪಿ ನಾಯಕರ ವಿರುದ್ಧ ದೊಡ್ಡ ಬಾಂಬ್ ಸಿಡಿಸಿದ್ದಾರೆ. ಶಿವರಾಮ್ ಹೆಬ್ಬಾರ್ ಪತ್ನಿಗೆ ಕರೆ ಮಾಡಿ ಬಿಜೆ ಪುಟ್ಟಸ್ವಾಮಿ ಮತ್ತು ಯಡಿಯೂರಪ್ಪ ಪುತ್ರ ವಿಜಯೇಂದ್ರ ಮಾತನಾಡಿದ್ದಾರೆಂಬ ಅಡಿಯೋ ಬಿಡುಗಡೆ ಮಾಡಲಾಗಿದೆ.
 
ಶಿವರಾಮ್ ಹೆಬ್ಬಾರ್ ಪತ್ನಿ ಬಳಿ 15 ಕೋಟಿ ರೂ. ನೀಡುವುದಾಗಿ ಮೊದಲು ಪುಟ್ಟಸ್ವಾಮಿ ಆಫರ್ ನೀಡುತ್ತಾರೆ. ಈ ಸಂದರ್ಭದಲ್ಲಿ ಶಿವರಾಮ್ ಹೆಬ್ಬಾರ್ ಪತ್ನಿ ನನ್ನ ಮಗನ ವಿರುದ್ಧ ಕೆಲವು ಕೇಸ್ ಗಳಿವೆ ಅದನ್ನು ಖುಲಾಸೆಗೊಳಿಸಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ.
 
ಇದಕ್ಕೆ ಸಕಾರಾತ್ಮಕವಾಗಿ ಪುಟ್ಟಸ್ವಾಮಿ ಪ್ರತಿಕ್ರಿಯಿಸುತ್ತಾರೆ. ಬಳಿಕ ವಿಜಯೇಂದ್ರ ಮತ್ತೆ ಕರೆ ಮಾಡಿ ವಿಶ್ವಾಸ ಮತ ಸಂದರ್ಭ ಸಹಕರಿಸಬೇಕೆಂದು ಕೋರುತ್ತಾರೆ. ಈ ಸಂದರ್ಭದಲ್ಲಿ ವಿಜಯೇಂದ್ರ ಕೂಡಾ ಎಲ್ಲಾ ಬೇಡಿಕೆಗಳಿಗೆ ಒಪ್ಪುವ ಅಡಿಯೋ ಇದರಲ್ಲಿದೆ. ಈ ಅಡಿಯೋ ಇದೀಗ ವಿಶ್ವಾಸ ಮತ ಯಾಚನೆ ಸಂದರ್ಭ ಬಿಜೆಪಿಗೆ ದೊಡ್ಡ ಆಘಾತ ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೇಗೆ ನಡೆಯಲಿದೆ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ?

ಬೆಂಗಳೂರು: ಮೂರು ದಿನಗಳ ಸಿಎಂ ಯಡಿಯೂರಪ್ಪ ಸರ್ಕಾರ ಮುಂದುವರಿಯುತ್ತಾ ಎಂದು ಇಂದು ವಿಶ್ವಾಸ ಮತದ ಮೂಲಕ ...

news

ಮಿಸ್ಸಿಂಗ್ ಶಾಸಕರು ಎಲ್ಲಿದ್ದಾರೆ ಗೊತ್ತಾ?!

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಪಕ್ಷದ ನಾಯಕರ ಕೈಗೇ ಸಿಗದೇ ಓಡಾಡುತ್ತಿದ್ದ ಶಾಸಕರು ...

news

ಯಾವ ಪಕ್ಷದ ಎಷ್ಟು ಸದಸ್ಯರು ಸದನಕ್ಕೆ ಹಾಜರಾಗಿದ್ದಾರೆ ಗೊತ್ತಾ?!

ಬೆಂಗಳೂರು: ವಿಶ್ವಾಸ ಮತ ಯಾಚನೆ ಸಂಬಂಧ ಇಂದು ಮಹತ್ವದ ವಿಧಾನಸಭೆ ಕಲಾಪ ಆರಂಭವಾಗಿದ್ದು, ಎಲ್ಲಾ ಪಕ್ಷದ ...

news

ವಿಧಾನಸಭೆ ಕಲಾಪಕ್ಕೆ ಬರಲು ಮುಹೂರ್ತಕ್ಕಾಗಿ ಕಾದ ಎಚ್ ಡಿ ರೇವಣ್ಣ!

ಬೆಂಗಳೂರು: ಮಹತ್ವದ ವಿಧಾನಸಭೆ ಕಲಾಪ ನಡೆಯುತ್ತಿರಬೇಕಾದರೆ ಎಲ್ಲಾ ಜೆಡಿಎಸ್ ಸದಸ್ಯರು ಬಂದರೂ ಎಚ್ ಡಿ ...

Widgets Magazine
Widgets Magazine