ದೇಶದ ಪ್ರಮುಖರ ಟ್ವಿಟರ್ ಖಾತೆಯ ಫಾಲೋವರ್ ಗಳ ಸಂಖ್ಯೆ ದಿಡೀರ್ ಇಳಿಕೆ

ನವದೆಹಲಿ, ಶನಿವಾರ, 14 ಜುಲೈ 2018 (08:58 IST)


ನವದೆಹಲಿ: ಪ್ರಧಾನಿ ಮೋದಿ, ಬಾಲಿವುಡ್ ನಟ ಶಾರುಖ್ ಖಾನ್ ಸೇರಿದಂತೆ ಪ್ರಮುಖರ ಟ್ವಿಟರ್ ಖಾತೆಯಲ್ಲಿ ಫಾಲೋವರ್ ಗಳ ಸಂಖ್ಯೆ ಒಂದೇ ಒಂದು ದಿನಕ್ಕೆ ಸಾಕಷ್ಟು ಇಳಿಕೆಯಾಗಿದೆ.
 
ಇದಕ್ಕೆ ಕಾರಣ ಟ್ವಿಟರ್ ನಕಲಿ ಖಾತೆಗಳಿಗೆ ಕತ್ತರಿ ಹಾಕಿರುವುದು. ಹೀಗಾಗಿ ಪ್ರಧಾನಿ ಮೋದಿ, ಸಚಿವೆ ಸುಷ್ಮಾ ಸ್ವರಾಜ್ ಖಾತೆಗಳಿಂದ ಸುಮಾರು 70 ಸಾವಿರಕ್ಕೂ ಅಧಿಕ ಫಾಲೋವರ್ ಗಳ ಸಂಖ್ಯೆ ಕಡಿಮೆಯಾದರೆ, ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಖಾತೆಯಲ್ಲಿ ಒಂದೇ ದಿನಕ್ಕೆ 2 ಲಕ್ಷಕ್ಕೂ ಅಧಿಕ ಫಾಲೋವರ್ ಗಳು ಕಡಿಮೆಯಾಗಿದ್ದಾರೆ.
 
ಸುಳ್ಳು ಸುದ್ದಿ ತಡೆಗಟ್ಟಲು ಟ್ವಿಟರ್ ಖಾತೆಗಳನ್ನು ನಕಲಿ ಖಾತೆಗಳಿಗೆ ಟ್ವಿಟರ್ ಸಂಸ್ಥೆ ಕಡಿವಾಣ ಹಾಕಲು ಮುಂದಾಗಿರುವುದರ ಪರಿಣಾಮ ಇದು. ಭಾರತದ ಗಣ್ಯರ ಟ್ವಿಟರ್ ಖಾತೆ ಮಾತ್ರವಲ್ಲ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿದೇಶದ ಹಲವು ತಾರೆಯರು, ಗಣ್ಯರ ಖಾತೆಗಳ ಫಾಲೋವರ್ ಗಳ ಸಂಖ್ಯೆಗೂ ಕತ್ತರಿ ಬಿದ್ದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜು. 16ರಿಂದ ಇಸ್ಕಾನ ಉತ್ಸವ ಎಲ್ಲಿ ಗೊತ್ತಾ?

ಭಾರತೀಯ ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮಕ್ಕಳಲ್ಲಿ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಇಸ್ಕಾನ್ ...

news

ಸಿದ್ದರಾಮಯ್ಯ ಸರಕಾರದಿಂದ ಅಕ್ರಮ ಗಣಿಗಾರಿಕೆ ಅವಕಾಶ: ಎಸ್.ಆರ್ ಹಿರೇಮಠ

ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಬಳ್ಳಾರಿ ಜಿಲ್ಲೆಯ ಸಂಡೂರು ...

news

ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು: ಲಾಕಪ್ ಡೆತ್ ಆರೋಪ

ಬೈಕ್ ಕಳ್ಳತನ ಆರೋಪದ ಮೇಲೆ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿದ್ದ ಆರೋಪಿ ಅನುಮಾನಾಸ್ಪದವಾಗಿ ...

news

ವಕ್ಫ್ ಆಸ್ತಿ ಭ್ರಷ್ಟಾಚಾರ: ತನಿಖೆಗೆ ಆಗ್ರಹ

ವಕ್ಫ್ ಇಲಾಖೆಗೆ ಸೇರಿದ ಆಸ್ತಿಯನ್ನ ಮುಸ್ಲೀಂ ಸಮುದಾಯದ ಸಾರ್ವಜನಿಕ ಕೆಲಸಗಳಿಗೆ ಮಾತ್ರ ಬಳಕೆ ಆಗಬೇಕು. ...

Widgets Magazine