ಟೀಕಿಸಿದವರಿಗೆ ನಟ ಪ್ರಕಾಶ್ ರೈ ನೀಡಿದ ಉತ್ತರವೇನು ಗೊತ್ತಾ…?

ಬೆಂಗಳೂರು, ಬುಧವಾರ, 16 ಮೇ 2018 (06:57 IST)

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಕಟವಾಗಿದ್ದು, ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿರುವ ಸಂದರ್ಭದಲ್ಲಿ  ಬಿಜೆಪಿ ಸರ್ಕಾರವನ್ನ ಮತ್ತು ಮೋದಿ ಆಡಳಿತವನ್ನ ಟೀಕಿಸುತ್ತಿದ್ದ ನಟ ಪ್ರಕಾಶ್ ರೈ ಅವರನ್ನ ಬಿಜೆಪಿ ಫಾಲೋವರ್ಸ್ ಕಾಲೆಳೆದಿದ್ದಾರೆ.


ಬಿಜೆಪಿ ಫಾಲೋವರ್ಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ನಟ ಪ್ರಕಾಶ್ ರೈ ಅವರನ್ನು ಕರ್ನಾಟಕದಲ್ಲಿ ಬಿಜೆಪಿ ಅಲೆ ನೋಡಿ ಪ್ರಕಾಶ್ ರೈ ತಲೆಮರೆಸಿಕೊಂಡಿದ್ದಾರೆ ಎಂದು ಟೀಕಿಸಿದ್ದು, ಇದಕ್ಕೆ  ಪ್ರತಿಕ್ರಿಯಿಸಿದ ನಟ ಪ್ರಕಾಶ್ ರೈ ಅವರು, ‘ನಾನು ಎಲ್ಲೂ ಹೋಗಿಲ್ಲ. ಕರ್ನಾಟಕ ಚುನಾವಣೆ ನೋಡುತ್ತಿದ್ದೇನೆ. ಬಿಜೆಪಿಯ ಆಟ, ಹಣ ಬಲ, ತೋಳು ಬಲದಿಂದ ಅಧಿಕಾರ ಹಿಡಿಯಲು ಹೋದ್ರಿ. ಆದ್ರೆ, ಸರ್ಕಾರ ನಡೆಸಲು ಬೇಕಾದ ಬಹುಮತ ನಿಮಗೆ ಸಿಗಲಿಲ್ಲ. ಈಗ ಎರಡು ಪಕ್ಷಗಳು ಒಟ್ಟಿಗೆ ಬಂದಿವೆ. ಪ್ರೀತಿಯ ನಾಗರೀಕರೇ ಆಟ ಇನ್ನು ಮುಗಿದಿಲ್ಲ’ ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.


ಹಾಗೇ ಈ ನಾಚಿಕೇಡಿನ ರಾಜಕೀಯ ನಾಟಕವನ್ನ ನೋಡಿ, ನಾನೀಗ ಕೈಗೊಂಡಿರುವ ತೀರ್ಮಾನವೇನೆಂದರೆ, ಯಾವುದೇ ಸರ್ಕಾರ ಬಂದರೂ ಪ್ರಜೆಗಳ ಪರವಾಗಿ ನಾನು 'justasking' ಎಂದು ಪ್ರಶ್ನಿಸಲು ಮುಂದಾಗುತ್ತೇನೆ. ಇದೇ ವೇಳೆ ಜೋಕರ್ ಗಳ ನಿಜಬಣ್ಣ ಬಯಲಾಗಲಿದೆ’ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಜ್ಯ ರಾಜಕೀಯದಲ್ಲಿ ರೆಸಾರ್ಟ್ ರಾಜಕಾರಣ

ಬೆಂಗಳೂರು: ರಾಜ್ಯದ ಚುನಾವಣೆ ಕ್ಷಣಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಜೆ.ಡಿಎಸ್, ಕಾಂಗ್ರೆಸ್ ...

news

ರಾಜ್ಯಪಾಲರ ಭೇಟಿಗೆ ಹೊರಟ ಕುಮಾರಸ್ವಾಮಿ, ಸಿದ್ದರಾಮಯ್ಯ

ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ...

news

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾರು ಯಾರು ಗೆದ್ದಿದ್ದಾರೆ ಇಲ್ಲಿದೆ ಪಟ್ಟಿ

ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಯಾರ್ಯಾರಿಗೆ ಜಯಮಾಲೆ ಹಾಕಿದ್ದಾರೆ ಎನ್ನುವ ಪಟ್ಟಿ ಇಲ್ಲಿದೆ. ...

news

ಪಕ್ಷದ ಸೋಲಿಗೆ ಕಾರಣ ತಿಳಿಸಿದ ವೀರಪ್ಪ ಮೊಯ್ಲಿ

ಬೆಂಗಳೂರು : ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿರುವ ಹಿನ್ನಲೆಯಲ್ಲಿ ಇದೀಗ ಮಾಜಿ ಮುಖ್ಯಮಂತ್ರಿ ...

Widgets Magazine
Widgets Magazine