ಜೆಡಿಎಸ್ ಹಾಗೂ ಕಾಂಗ್ರೆಸ್ ನವರಿಗೆ ನಟ ಹುಚ್ಚ ವೆಂಕಟ್ ಹೇಳಿದ ಕಿವಿಮಾತು ಏನು ಗೊತ್ತಾ?

ಬೆಂಗಳೂರು, ಮಂಗಳವಾರ, 22 ಮೇ 2018 (08:58 IST)

ಬೆಂಗಳೂರು : ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರ ಮೂಲಕ ಆಗಾಗ ಸುದ್ದಿಯಾಗುತ್ತಿರುವ ನಟ ಹುಚ್ಚ ವೆಂಕಟ್ ಅವರು ಇದೀಗ ರಾಜ್ಯ ರಾಜಕೀಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಸಾಮಾಜಿಕ ಜಾಲಾತಾಣಗಳಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.

ಅದೇನೆಂದರೆ ಹುಚ್ಚ ವೆಂಕಟ್ ಅವರು ಮೊದಲಿಗೆ ಮೂರು ದಿನದ ಮುಖ್ಯಮಂತ್ರಿ ಆಗಿ ರಾಜಿನಾಮೆ ಕೊಟ್ಟಿರುವ ಯಡಿಯೂರಪ್ಪನವರಿಗೆ ಸಂದೇಶವನ್ನ ಹೇಳಿದ್ದಾರೆ. ‘ಯಡಿಯೂರಪ್ಪನವರೇ ನೀವು ಸಿಎಂ ಆಗಿದ್ದು ಬಹಳ ಸಂತೋಷವಾಗಿದೆ. ನಾನು ಮೊದಲು ಬಿಜೆಪಿ ಹಾಗೂ ಮೋದಿಗೆ ಬೆಂಬಲಿಸುತ್ತಿದ್ದೆ. ಆದರೆ ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಬೆಂಬಲಿಸುತ್ತೇನೆ. ನಾನು ಯಾವತ್ತೂ ಒಳ್ಳೆ ಕೆಲಸ ಮಾಡುವವರ ಜೊತೆ ಇರುತ್ತೇನೆ ,. ಬಿಜೆಪಿ ಹಾಗೂ ಮೋದಿ ಬಗ್ಗೆ ಬೇಸರಿವಿದೆ ಅದು ಯಾಕಂತ ಅವರಿಗೂ ಗೊತ್ತು. ಯಡಿಯೂರಪ್ಪನವರೇ ನೀವು ಮಾಡಿದ ಸಣ್ಣ ತಪ್ಪು ನಿಮಗೂ ಗೊತ್ತು. ಆ ಒಂದು ತಪ್ಪು ಆಯುಷ್ಯ ಪೂರ್ತಿ ನೋವು ಕೊಡುತ್ತೆ .ನಿಮಗೂ ಮೋದಿಗೂ ಆ ತಪ್ಪು ಏನಂತ ಗೊತ್ತು. ಹಾಗಾಗಿ ನಿಮಗೆ ಸಿಎಂ ಪಟ್ಟ ತಪ್ಪಿತು.’ ಎಂದು ತಿಳಿಸಿದ್ದಾರೆ.


ಹಾಗೇ ಜೆಡಿಎಸ್ ಹಾಗೂ ಕಾಂಗ್ರೆಸ್ ನವರಿಗೆ ಕಿವಿ ಮಾತನ್ನು ಹೇಳುತ್ತಾ,’ ಕುಮಾರಸ್ವಾಮಿ ಸಿಎಂ ಆಗಿದ್ದು ಬಹಳ ಖುಷಿಯಾಯಿತು, ಚೆನ್ನಾಗಿ ಆಡಳಿತ ಮಾಡಿ. ಯಾವುದೇ ರೀತುಯಲ್ಲಿ ಮೈತ್ರಿ ಸರ್ಕಾರ ಬಿರುಕು ಬಿಡಬಾರದು. ಈ ಸರ್ಕಾರ ಮುಂದೆಯೂ ನಡೆಯುತ್ತೆ. ಎಂಎಲ್ ಅವರಿಗೆ ಥ್ಯಾಂಕ್ಸ್ . ನೀವು ಬೆಂಬಲ ನೀಡಿದ್ದೀರಿ. ಯಾವ ಗಣಿ ಧಣಿ ಬರಲಿ ನಿಮ್ಮನ್ನ ಕೊಂಡುಕೊಳ್ಳೋಕೆ ಆಗಲ್ಲ. ಅವರಿಗೆ ನನ್ನ ಸ್ಟೈಲ್ ನಲ್ಲಿ ಹೇಳಬೇಕು ನನ್ನ 'ಎಕ್ಕಡ' ಕೂಡ ಕೊಂಡುಕೊಳ್ಳೋಕೆ ಆಗಲ್ಲ. ಬಜೆಟ್ ಅಂತ ಬಂದಾಗ ಮೀಡಿಯಾದವರ ಮುಂದೆ ಇಡಬೇಕು. ಅವರು ಸರಿಯಾಗಿ ಹೇಳುತ್ತಾರೆ. ರಾಹುಲ್ ಗಾಂಧಿ ನೀವು ಕುಮಾರಸ್ವಾಮಿಯವರನ್ನ ಕರೆದಿದ್ದೀರಾ, ನೀವು ಜಾಸ್ತಿ ಕಂಡೀಷನ್ಸ್ ಹಾಕಿ ಜೆಡಿಎಸ್ ನನ್ನು ದೂರ ಮಾಡೋಕೆ ಹೋಗಬೇಡಿ’ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೂಪರ್ ಸ್ಟಾರ್ ರಜನೀಕಾಂತ್ ಹೇಳಿಕೆಗೆ ತಿರುಗೇಟು ನೀಡಿದ ನಿಯೋಜಿತ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು : ರಾಜ್ಯ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಸೂಪರ್ ಸ್ಟಾರ್ ರಜನೀಕಾಂತ್ ಅವರು ಕಾವೇರಿ ನದಿ ...

news

ಸೋತರೂ ಕಾಂಗ್ರೆಸ್ ನವರು ಅದ್ಯಾಕೆ ಸೆಲೆಬ್ರೇಷನ್ ಮಾಡ್ತಿದ್ದಾರೋ: ಅಮಿತ್ ಶಾ ಟಾಂಗ್

ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಮೂರೇ ದಿನಕ್ಕೆ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಜೆಡಿಎಸ್ ಜತೆ ...

news

ರಾಮನಗರಕ್ಕೆ ರಾಜೀನಾಮೆ ನೀಡಿದ ಹೆಚ್.ಡಿ.ಕುಮಾರಸ್ವಾಮಿ

ರಾಮನಗರ: ರಾಮನಗರ, ಚನ್ನಪಟ್ಟಣ ಎರಡು ವಿಧಾನಸಭಾ ಕ್ಷೇತ್ರದಿಂದ ಗೆದಿದ್ದ ನಿಯೋಜಿತ ಮುಖ್ಯಮಂತ್ರಿ ...

news

ಸಮ್ಮಿಶ್ರ ಸರ್ಕಾರದ ಆಯಸ್ಸು ಕೇವಲ ಮೂರು ತಿಂಗಳು ಮಾತ್ರ: ಡಿವಿಎಸ್

ಮಂಡ್ಯ: ಸಮ್ಮಿಶ್ರ ಸರ್ಕಾರದ ಆಯಸ್ಸು ಕೇವಲ ಮೂರು ತಿಂಗಳು ಮಾತ್ರ ಎಂದು ಮಂಡ್ಯದಲ್ಲಿ ಕೇಂದ್ರ ಸಚಿವ ...

Widgets Magazine